ಸಿದ್ಧೇಶ್ವರ ಶ್ರೀಗಳ ದಿವ್ಯವಾಣಿ:ಕಾಯಕದಿಂದ ಜೀವನ ಅಭ್ಯುದಯಗೊಳ್ಳುತ್ತದೆ:ಸಿದ್ದೇಶ್ವರಶ್ರೀ

(ಸಂಜೆವಾಣಿ ವಾರ್ತೆ)
ಭಾಲ್ಕಿ:ಬದುಕು ಒಂದು ಅಮೂಲ್ಯವಾದ ಅವಕಾಶ ಯಾಕೆಂದರೆ ಈ ಬದುಕು ನಮಗೆ ಎಲ್ಲವನ್ನೂ ನೀಡಿದೆ ಇದನ್ನು ನಾವು ಸರಿಯಾಗಿ ಬಳಸಿಕೊಂಡರೆ ಶ್ರೀಮಂತ ನಾಗುತ್ತೇವೆ. ಪ್ರಶಾಂತಿಯನ್ನು ಪಡೆಯುತ್ತೇವೆ. ಮನುಷ್ಯ ಪಡೆಯಬೇಕಾದ 2 ಸಂಗತಿಗಳು * ಸಮೃದ್ಧಿ * ಪ್ರಶಾಂತಿ
ಅಂತರಂಗದಲ್ಲಿ ಶಾಂತಿ ಬಹಿರಂಗದಲ್ಲಿ ಸಮೃದ್ಧಿ ಇವೆರಡೂ ನಮ್ಮ ಬದುಕನ್ನು ಸಾರ್ಥಕ ಗೊಳಿಸುತ್ತವೆ.
ಒಂದು ಬೀಜವನ್ನು ನಾವು ಬಿತ್ತಿದಾಗ ಆ ಬೀಜ ಬೆಳೆದು ಹಚ್ಚ ಹಸಿರಾಗಿ ಹೂವು ಹಣ್ಣು ಕಾಯಿ ಎಲ್ಲವೂ ನೀಡುತ್ತವೆ. ಈ ಬೆಳವಣಿಗೆಯ ಫಲ ಹೂವು ಹಣ್ಣು . ಹೂವು ಪರಿಮಳ ಸೂಸಿ ಮನಸ್ಸನ್ನು ಅರಳಿಸುತ್ತದೆ.
ಹಣ್ಣು ದೇಹವನ್ನು ಸಮೃದ್ಧಿ ಗೊಳಿಸುತ್ತದೆ. ಇದು ವೃಕ್ಷದ ಸಾರ್ಥಕ ಜೀವನ.
ಹಾಗೆಯೇ ನಮ್ಮ ಬದುಕನ್ನು ಸಾರ್ಥಕ ಜೀವನ ವಾಗಿಸಬೇಕಾದರೆ ಈ ಎರಡು ಅಂಶಗಳು ಬಹಳ ಮುಖ್ಯ ಅವಶ್ಯಕ. ಒಂದು ಹೊರಗೆ ಇನ್ನೊಂದು ಒಳಗೆ. ಹೊರಗೆ ಸಮೃದ್ಧಿ ನೋಡುವುದಕ್ಕೆ,ಕೊಳ್ಳುವುದಕ್ಕೆ,ಬದುಕುವುದಕ್ಕೆ, ಎನ್ನಬೇಕು ಅದುವೇ ಸಮೃದ್ಧಿ.
ಈ ಜಗತ್ತಿನಲ್ಲಿ ಕಣ್ಣುಗಳು ನೋಡಲಿಕ್ಕೆ ಸುಂದರ ನೋಟ ನಿಸರ್ಗ ಸುತ್ತ ಕಣ್ಣಾಡಿಸಿದರೆ ಬಣ್ಣ ಬಣ್ಣ ತುಂಬಿರಬೇಕು. ವಿವಿಧ ಆಕಾರ ವಿಶಾಲ ಜಗತ್ತು ತುಂಬಿರಬೇಕು. ಆವಾಗ ಈ ಕಣ್ಣುಗಳು ಸಿರಿವಂತ ವಾಗುತ್ತದೆ. ದೃಷ್ಟಿ ಸಾರ್ಥಕ ವಾಗುತ್ತದೆ. ಸಮೃದ್ಧ ಶ್ರೀಮಂತ ವಾಗುತ್ತದೆ.ಹಾಗೆಯೇ ಕಿವಿ ಶ್ರೀಮಂತ ವಾಗಬೇಕು ಕೇಳಬೇಕು.
ಏನು ಕೇಳಿದರೆ ಕಿವಿಗಳು ಶ್ರೀಮಂತವಾಗುತ್ತವೆಯೋ ಅದನ್ನು ಕೇಳಬೇಕು. ನಾವು ಒಂದು ಮರಕ್ಕೆ ಕಸವನ್ನು ಹಾಕಿದರೂ ಅದು ನಮಗೆ ರಸವತ್ತಾದ ಹಣ್ಣುಗಳನ್ನು ನೀಡುವುದು ಹಾಗೆಯೇ ನಮ್ಮ ಕಿವಿಗಳು ಒಳ್ಳೆಯದನ್ನು ತೆಗೆದುಕೊಂಡು ಕೇಳಿ ನಮ್ಮ ಜೀವನವನ್ನು ಮಧುರ ಮಾಧುರ್ಯ ರಸವತ್ತು ಗೊಳಿಸಬೇಕು. ಯೋಚಿಸಿ ಈ ಕಿವಿ ಒಂದು ಇಲ್ಲ ಅಂದರೆ ನಮ್ಮ ಜೀವನ ಅರ್ಧ ವ್ಯರ್ಥ. ಈ ಪರಿಸರದಲ್ಲಿ ಕೋಗಿಲೆಯ ಇಂಪಾದ ಧ್ವನಿ, ಹಕ್ಕಿಗಳ ಚಿಲಿಪಿಲಿ ಕಲರವ ಬಾನಹಕ್ಕಿಯ ಸುಂದರ ಗಾನ ಗಿಳಿಗಳ ಸುಂದರ ಮಾತು ಮಧುರ ಮಾಧುರ್ಯ ಗೀತೆಗಳು ಇವೆಲ್ಲವೂ ಇರುವುದು ನಮಗಾಗಿ.
ಇಂತಹ ಗಿಳಿಗಳ ಮಾತುಗಳು ಕೇಳಬೇಕು ನೀನು ಸಹ ಒಳ್ಳೆಯ ಮಾತುಗಳನ್ನು ಆಡಬೇಕು, ಹಾಡಬೇಕು, ಆಡಿ ಹಾಡಿ ಕಿವಿಯನ್ನು ಶ್ರೀಮಂತ ವಾಗಿಸಬೇಕು. ಇಲ್ಲವಾದರೆ ಜೀವನ ವ್ಯರ್ಥ.
ಕಿವಿ ಕಣ್ಣು ಇರುವುದು ಸಮೃದ್ಧ ಜೀವನ ಸಾಧಿಸಲಿಕ್ಕೆ. ಬದುಕು ನಮ್ಮನ್ನು ಶ್ರೀಮಂತ ಗೊಳಿಸುವ ಬಹಳ ಮುಖ್ಯ ಅಂಗ ಕಿವಿ ಮತ್ತು ಕಣ್ಣು. ನೋಡುವುದು ಜೀವನ ಕೇಳುವುದು ಜೀವನ.
ಏನು ವಿಶಾಲವಾದ ಆಕಾಶ ಶಾಂತವಾದ ವಾತಾವರಣ ಸೂರ್ಯನ ಬೆಳಕು ಅದನ್ನು ನಾವು ಅನುಭವಿಸುತ್ತಿದ್ದೇವೆ ಇದುವೇ ಶ್ರೀಮಂತ ಬದುಕು. ಹಣದಿಂದ ಶ್ರೀಮಂತ ವಾಗಬೇಕಾಗಿಲ್ಲ ನಾವು ನೋಡುವ ನೋಟದಿಂದ ಕಣ್ಣಿನಿಂದ ಶ್ರೀಮಂತ ನಾಗಬೇಕು. ಒಂದು ವೇಳೆ ನಮ್ಮಲ್ಲಿ ಕೋಟಿ ಕೋಟಿ ಹಣವಿದ್ದರೇನು ಕಣ್ಣು ಇಲ್ಲದಿದ್ದರೆ. ಹೇಗೆ ಆ ಹಣ ಕಣ್ಣಿನ ಸಮಾನ. ಕಣ್ಣು ಯಾವ ಸಂಪತ್ತಿಗೂ ಸಮಾನವಲ್ಲ. ಇಂತಹ ಜಗತ್ತನ್ನು ನಮ್ಮೊಳಗೆ ಗ್ರಹಣ ಮಾಡುವ ಸಾಮಥ್ರ್ಯ ವಿರುವ ನಮ್ಮ ಕಣ್ಣುಗಳು ನಮ್ಮಲ್ಲಿ ಇರುವಾಗ ನಮಗೆ ಕಣ್ಣಿನ ಮೂಲಕ ಬಣ್ಣಗಳು ಆಕಾರಗಳು ಕಂಡು ಮನಸ್ಸನ್ನು ಶ್ರೀಮಂತ ಗೊಳಿಸುತ್ತದೆ.
ಆದರೆ ನಾವು ನೋಡುವುದನ್ನೇ ನೋಡಬೇಕು. ಒಳ್ಳೆಯದನ್ನು ನೋಡಬೇಕು.
ವರುಷ ವರುಷಗಳ ಕಾಲ ತಿಪ್ಪೆಯನ್ನು ನೋಡಿದರೆ ಏನೂ ಲಾಭ ಸಾರ್ಥಕ. ಈ ಜಗತ್ತಿನಲ್ಲಿನ ಒಳ್ಳೆಯದನ್ನು ನೋಡಿ ನಮ್ಮ ಜೀವನವನ್ನು ಸಾರ್ಥಕವಾಗಿರಿಸಬೇಕು. ಹಾದಿಯಲ್ಲಿ ಒಬ್ಬ ವ್ಯಕ್ತಿ ಹೊರಟಿದ್ದ ದಾರಿಯಲ್ಲಿ ಒಂದು ತಿಪ್ಪೆ ಆ ತಿಪ್ಪೆಯ ಮೇಲೆ ಒಂದು ಸಣ್ಣ ಲತೆ. ಆ ಬಳ್ಳಿಗೆ ಅರಳಿದ ಒಂದು ಸುಂದರ ಹೂವು. ಇದೆಲ್ಲಾ ಇದ್ದರೂ ಆ ವ್ಯಕ್ತಿ ತಿಪ್ಪೆಗೆ ಹೇಳಿದ ಎಂತಹ ಹೊಲಸು ನೀನು ಎಷ್ಟು ಕೆಟ್ಟದ್ದಾಗಿ ನಾರುತ್ತಿದ್ದಿಯೆ ಎಂದ .
ಆಗ ಆ ತಿಪ್ಪೆ ಹೇಳಿತು ಎಲೇ ಮನುಷ್ಯನೇ ನಿನ್ನ ನೋಟ ಹೊಲಸು ಆದ್ದರಿಂದ ನಿನಗೆ ಕಾಣುವುದಿಲ್ಲ ಹೊಲಸು. ನಿನಗೆ ಈ ತಿಪ್ಪೆಯ ಮೇಲೆ ಒಂದು ಸಣ್ಣ ಹೂವು ಅರಳಿ ನಿಂತಿರುವುದು ಕಾಣುವುದಿಲ್ಲವೇ?. ಮನುಷ್ಯನೇ ನೋಡು!.
ನಾನು ಹೊಲಸಿರಬಹುದು. ನನ್ನೊಳಗಿನಿಂದ ಒಂದು ಸುಂದರ ಹೂವು ಹೊರತೆಗೆಯುವ ಶಕ್ತಿಯಿದೆ. ನಿಮಗೆ ನಾನು ದುಗರ್ಂಧ ವಿರಬಹುದು ನನ್ನೊಳಗೆ ಸುಂದರವಾದ ಹೂವನ್ನು ಹೊರಬಿಡುವ ಸಾಮಥ್ರ್ಯ ವಿದೆ. ಮನುಷ್ಯನೇ ನೋಡುವುದನ್ನು ಕಲಿ
ಬರೀ ತಿಪ್ಪೆಯನ್ನು ನೋಡುವುದಲ್ಲ ಈ ದೇವರು ಈ ಎರಡು ಕಣ್ಣುಗಳನ್ನು ಕೊಟ್ಟಿರುವುದು ಒಳ್ಳೆಯದನ್ನು ನೋಡಲಿಕ್ಕೆ ಅನುಭವಿಸಲಿಕ್ಕೆ ಸುಂದರವಾದ ಸೂರ್ಯೋದಯ, ಬಣ್ಣ ಬಣ್ಣದ ಹೂವು , ಆಗಸದ ಬಣ್ಣಗಳ ಚದುರುವಿಕೆ ಇದನ್ನು ನೋಡು ಇದುವೇ ಸ್ವರ್ಗ.ಇಂತಹ ಕಣ್ಣುಗಳು ನಮ್ಮ ಜೀವನವನ್ನು ಬದುಕನ್ನು ಶ್ರೀಮಂತ ಗೊಳಿಸುತ್ತವೆ.
ಈ ನಮ್ಮ ಕಣ್ಣುಗಳಿಗೆ ಎಷ್ಟು ಮಹತ್ವ ಕೊಡಬೇಕು ಎಂದು ತಿಳಿದುಕೋ!. ಒಂದು ಸಲ ಕಣ್ಣು ಮುಚ್ಚಿ ಬದುಕು ನಿನಗೆ ಗೊತ್ತಾಗುವುದು ಕಣ್ಣಿನ ಮಹತ್ವ. ನಿನ್ನ ಕಿವಿಗಳು ಶ್ರೀಮಂತ ವಾಗಿರಲಿ, ಕೈಗಳು ಶ್ರೀಮಂತ ವಾಗಲಿ ಕಾಲುಗಳು ಶ್ರೀಮಂತ ವಾಗಲಿ ಎಲ್ಲವೂ ಶ್ರೀಮಂತವಾಗಲಿ.
ಒಂದು ವೇಳೆ ನೀವು ಎಲ್ಲಾ ಬೆರಳುಗಳಿಗೆ 10 ಬೆಲೆಬಾಳುವ ಉಂಗುರಗಳನ್ನು ಹಾಕಿ ಶೃಂಗಾರ ಗೊಳಿಸಿದರೇನು ಫಲ ಕೈ ಬೆರಳು ಮಡಚಲಿಕ್ಕೆ ಬಾರದಿದ್ದರೆ.?
ಮನುಜನೇ ಇವೆಲ್ಲವನ್ನೂ ತೆಗೆದು ಹಾಕು. ನಾವು ಈ ಜಗತ್ತಿಗೆ ಬಂದಿರುವುದು ಕೆಲಸ ಮಾಡುವುದಕ್ಕೆ ಅಂದರೆ ನಾವು ನೂರು ವರ್ಷಗಳ ಕಾಲ ಚನ್ನಾಗಿ ಬದುಕಬೇಕಾದರೆ ಇರಬೇಕಾದರೆ ಪ್ರತಿಕ್ಷಣ ಕೆಲಸಮಾಡಬೇಕು ಹೇಗೆ ಒಂದು ಬಳ್ಳಿ ಪ್ರತಿದಿನ ಕೆಲಸ ಮಾಡುತ್ತದೆಯೋ ನಂತರ ಬೆಳಿಗ್ಗೆ ಸೂರ್ಯನಿಗೆ ಒಂದು ಹೂವನ್ನು ಅರ್ಪಿಸುತ್ತದೆ ಅದರಂತೆಯೇ ನಾವು ಸಹ ಪ್ರತಿದಿನ ಕೆಲಸ ಮಾಡಬೇಕು. ಮತ್ತು ಹೂವಿನಂತಹ ಆನಂದವನ್ನು ನಾವು ಜಗತ್ತಿಗೆ ಪರಿಚಯಿಸಬೇಕು. ನೀವು ಯಾರಾದರೂ ಆಗಿರು ಯಾವ ವರ್ಣಿಯ ನವನಾದರೂ ಆಗಿರು ಈ ಜಗತ್ತಿನಲ್ಲಿ ಎಲ್ಲಿ ಹೋದರು ನೀರು ಒಂದೇ ಗಾಳಿ ಒಂದೇ ಬೆಳಕು ಒಂದೇ ಅನ್ನ ಒಂದೇ ಕೈಯಿಂದಲೇ ಕೆಲಸ ಮಾಡಬೇಕು. ಕಾಲಿಂದ ನಡೆಯಬೇಕು ಕಿವಿಯಿಂದ ಕೇಳಿಸಿಕೊಳ್ಳಬೇಕು.
ನಮಗೆ ಕಾಲಿರುವುದು ಸುಮ್ಮನೆ ಕೂಡಲಿಕ್ಕಲ್ಲ ನಡೆಯಲಿಕ್ಕೆ
ಕೆಲಸ ಮಾಡಲಿಕ್ಕೆ .
ಹೇಗೆ ಜನರು ಹಿಮದ ಬೆಟ್ಟಗಳನ್ನು ಹತ್ತುತ್ತಾರೆಯೋ ಸಮುದ್ರವನ್ನು ಈಜುತ್ತಾರೆಯೋ ಇಂತಹ ಅಮೂಲ್ಯವಾದ ದೇಹವನ್ನು ಒಳ್ಳೆಯ ಕಾರ್ಯಕ್ಕೆ ಬಳಸಿಕೊಂಡು ನಿನ್ನ ಜೀವನವನ್ನು ಸುಂದರಮಯ ವಾಗಿಸಬೇಕು.
ಸಾರ್ಥಕವಾಗಿಸಬೇಕು. ಸಮೃದ್ಧವಾಗಿಸಬೇಕು. ನಿಮ್ಮ ಜೀವನ ಅಭ್ಯುದಯ ಗೊಳ್ಳುತ್ತದೆ.ನಾವು ಜೀವನದಲ್ಲಿ ಬಂದ ಬಳಿಕ ಇಲ್ಲಿ ನಾವು ನಾವು ಸುಂದರ ಸುಂದರ ಕಾರ್ಯಗಳನ್ನು ಮಾಡಬೇಕು. ಆ ಮಾಡಿದ ಕಾರ್ಯ ನೋಡುವವರಿಗೆ ಬದುಕುವವರಿಗೆ ಸಂತೋಷ ಕೊಡಬೇಕು ಅದುವೇ ಅಭ್ಯುದಯ.
ಜೀವನದಲ್ಲಿ ಮಾಡಬೇಕಾದ ಎರಡು ಕೆಲಸ 1. ಅಭ್ಯುದಯ 2. ನಿಶ್ರಯಶ
ಹೊರಗೆ ಅಭ್ಯುದಯ.
ಒಳಗೆ ಪ್ರಶಾಂತ ಅದುವೇ ನಿಶ್ರಯಶ.
ಅದುವೇ ಜೀವನ ಅದನ್ನು ನಾವು ಬದುಕಬೇಕು ಅದು ನಮಗೆ ದೇವರಿತ್ತ ವರ. ಅದನ್ನು ಬಳಸಿ ನಾವು ನಮ್ಮ ಜೀವನವನ್ನು ಅಭ್ಯುದಯಗೊಳಿಸಬೇಕು.
ಸಂಗ್ರಹ : ಸಿದ್ದಲಿಂಗ ಎಸ್. ಸ್ವಾಮಿ ಉಚ್ಚ ತಾ. ಭಾಲ್ಕಿ ಜಿ. ಬೀದರ