ಸಿದ್ಧೇಶ್ವರ ಶ್ರೀಗಳ ದಿವ್ಯವಾಣಿ:ಅಂತರಂಗದ ಭೂಮಿಯ ಒಕ್ಕ ಲಿಗನಾಗು ಬೇಳೆ ಸಿದಂತೆ ಬೆಳೆ ತೆಗೆ

(ಸಂಜೆವಾಣಿ ವಾರ್ತೆ)
ಭಾಲ್ಕಿ:ನಮ್ಮ ಬದುಕು ಅತ್ಯಂತ ಅಮೂಲ್ಯ. ಅದಕ್ಕೆ ಬೆಲೆ ಕಟ್ಟಲಿಕ್ಕೇ ಆಗುವುದಿಲ್ಲ ಅಂತಹ ಬದುಕನ್ನು ನಾವು ಶೃಂಗರಿಸಬೇಕು. ಬದುಕಿನ ಫಲವನ್ನು ಆನಂದಿಸಬೇಕು. ಅದಕ್ಕೆ ಜೀವನ, ಪವಿತ್ರ ಜೀವನ ಎಂದು ಕರೆಯಲಾಗಿದೆ.
ಒಂದು ಹೊಲ ಆ ಹೊಲದಲ್ಲಿ ಎಲ್ಲಾ ಅಂಶಗಳು ಇರುತ್ತವೆ. ಆ ಮಣ್ಣಿನಲ್ಲಿ ಎಲ್ಲಾ ಇರುತ್ತವೆ. ಆದರೆ ನೋಡಿದಾಗ ಏನೂ ಕಾಣುವುದಿಲ್ಲ ಆದರೆ ಅದೇ ಮಣ್ಣಿನಲ್ಲಿ ಪುಷ್ಪ, ಹೂವು, ಹಣ್ಣು ಕಾಯಿ ಎಲ್ಲವೂ ಸಿಗುತ್ತವೆ. ಈ ಮಣ್ಣಿನೊಳಗೆ ಎಲ್ಲವೂ ಇದೆ ನಮಗೆ ಕಾಣದ ಬಣ್ಣ ರುಚಿ ಸವಿ ಸೌಂದರ್ಯ ಎಲ್ಲವೂ ಇದೆ. ಈ ಅಂಶ ಗೊತ್ತಾದರೆ ನಾವೇ ಶ್ರೀಮಂತರು ಇಲ್ಲವಾದರೆ ಬಡವರು.
ನೆಲದ ಮರೆಯ ನಿಧಾನ:
ಯಾವುದು ಬದುಕಿಗೆ ಅತ್ಯಂತ ಅವಶ್ಯಕ. ಯಾವುದು ಜೀವನವನ್ನು ಶ್ರೀಮಂತವಾಗಿಸುವುದು ಅದುವೇ ನಿಧಾನ.
ಮನುಷ್ಯನೇ ನೀನು ಯಾವ ನೆಲದ ಮೇಲೆ ನಡೆಯುತ್ತಿಯೋ ಆ ನೆಲದ ಮಹತ್ವ ತಿಳಿದುಕೋ ಅದು ಸಂಪತ್ತಿನಿಂದ ಕೂಡಿದ ಬಣ್ಣ. ಅದು ಸಾಮಾನ್ಯ ಸಂಪತ್ತಲ್ಲ ಬದುಕಿನ ಸಂಪತ್ತು. ಬದುಕಿನ ಜ್ಯೋತಿಯು ಸದಾ ಉರಿಸುವ ಸಂಪತ್ತು. ಬದುಕನ್ನು ಶ್ರೀಮಂತ ಗೊಳಿಸುವ, ಸುಂದರ ಗೊಳಿಸುವ ಸಂಪತ್ತು ಈ ಮಣ್ಣಿನಲ್ಲಿ ಇದೆ.
ಮನುಷ್ಯ ಬಡವನಾಗಬಾರದು ಶ್ರೀಮಂತ ನಾಗಬೇಕು. ಮನುಷ್ಯ ಈ ಮಣ್ಣು ಇದ್ದಹಾಗೆ ಇದರಲ್ಲಿ ಏನೆಲ್ಲಾ ಅಡಗಿದೆ.
ಒಂದು ಸಣ್ಣ ಮಗು ಆ ಮಗುವಿನಲ್ಲಿ ಒಬ್ಬ ಶ್ರೇಷ್ಠ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್ ಇರಬಹುದು, ಒಬ್ಬ ಶ್ರೇಷ್ಠ ಕವಿ ಕಾಳಿದಾಸ ಇರಬಹುದು. ಒಬ್ಬ ಶ್ರೇಷ್ಠ ಸಂತ ನಿರಬಹುದು. ಒಬ್ಬ ಶ್ರೇಷ್ಠ ಶರಣ ನೀರಬಹುದು. ಒಬ್ಬ ಶ್ರೇಷ್ಠ ಋಷಿ ಇರಬಹುದು. ಎಲ್ಲವೂ ಹುದುಕಿಕೊಂಡಿದೆ. ಇದನ್ನು ತಿಳಿದು ಬದುಕು. ನಿನ್ನೊಳಗಿನಿಂದ ಸಂಪತ್ತು ಹೊರಹೊಮ್ಮುತ್ತದೆ. ನಿನ್ನ ಮಾತಿನಲ್ಲಿ ಸಂಪತ್ತು. ನಿನ್ನ ಕೃತಿಗಳಲ್ಲಿ ಸಂಪತ್ತು. ಭಾವದಲ್ಲಿ ಸಂಪತ್ತು, ಎಲ್ಲಾ ಸಂಪತ್ತು ಇಲ್ಲೇ ಇದೆ. ಅದು ನೋಡಲಿಕ್ಕೆ ಕಾಣುವುದಿಲ್ಲ. ಆದರೆ ಒಬ್ಬ ಒಕ್ಕಲಿಗನಿಗೆ ಗೊತ್ತು ಯಾವ ಯಾವ ಹೊಲದಲ್ಲಿ, ಭೂಮಿಯಲ್ಲಿ, ಮಣ್ಣಿನಲ್ಲಿ ಯಾವ ಹಣ್ಣನ್ನು ತೆಗೆಯುತ್ತಾರೆ. ಕೈಯಲ್ಲಿ ಮಣ್ಣು ಹಿಡಿದು ಹಣ್ಣನ್ನು ತೆಗೆಯುತ್ತಾರೆ. ಇದುವೇ ಜೀವನದ ಪವಾಡ. ಪ್ರತಿಯೊಬ್ಬ ಒಕ್ಕಲಿಗನು ಪವಾಡ ಪುರುಷ.
ಅಂತಹ ವಸ್ತುಗಳನ್ನು ಅದರಿಂದ ಹೊರ ತೆಗೆಯುತ್ತಾನೆ ಇದು ಎಂತಹ ಅದ್ಭುತ. ಯಾವುದು ಮಣ್ಣಿನಿಂದ ಬರುತ್ತದೆಯೋ ಅದರ ಮೇಲೆ ಜೀವ ಮತ್ತು ಜೀವನ ಅವಲಂಬಿಸಿದೆ. ಬದುಕು ಇದರ ಮೇಲೆ ನಿಂತಿರುವುದು. ಬದುಕಿನ ಜ್ಯೋತಿಯು ಉರಿಯುತ್ತಿರುವುದು ಮಣ್ಣಿನಿಂದ ಹೊರಬರುವ ವಸ್ತುವಿನ ಮೇಲೆ ನಿಂತಿದೆ.
ಮನುಷ್ಯನೇ ಈ ಶರೀರ ಹೊಲ ಎಂದು ತಿಳಿದುಕೋ. ನೀನು ಒಕ್ಕಲಿಗ ಆದರೆ ನಿನಗೆ ಅದರ ಮಹತ್ವ ಅರಿವಾಗುವುದು. ಜೀವನದ ಒಕ್ಕಲಿಗ ಆದರೆ ನೀನು ಏನು ಬೇಕಾದರೂ ಆಗಬಲ್ಲೆ. ನೀನು ದೇವನೇ ಆಗಬಲ್ಲೆ. ಜಗತ್ತಿನ ಸೌಂದರ್ಯವನ್ನು ಹೆಚ್ಚಿಸುವ ಆಗಬಲ್ಲೇ. ಅಷ್ಟು ಸಾಮಥ್ರ್ಯ ಈ ದೇಹಕ್ಕಿದೆ.
ಅಂಗವೇ ಭೂಮಿ ಅಂತರಂಗವೆ ಭೂಮಿ.
ನಮ್ಮ ಭಾವ ನಮ್ಮ ಅಂತರಂಗವೆ ಭೂಮಿ. ಈ ಭೂಮಿಯಲ್ಲಿ ನಮಗೆ ಬೇಕಾದುದು ಎಲ್ಲವೂ ಹುದುಗಿದೆ. ಅಸಾಧ್ಯ ಎಂಬುದು ಯಾವುದು ಇಲ್ಲ ಆದರೆ ನಾವು ದುಡಿಯಬೇಕು ಸಾಧನೆಯನ್ನು ಮಾಡಬೇಕು ಅದನ್ನು ಹೊರ ತೆಗೆಯಬೇಕು.
ಮಂತ್ರ ಹಾಕಿದರೆ ಬೆಳೆ ಬರುತ್ತದೆಯೇ? ಇಲ್ಲ ದುಡಿಯಬೇಕು ದುಡಿಮೆಯಿಂದ ಎಲ್ಲವೂ ಸಾಧ್ಯ.
ಮಣ್ಣನ್ನು ಪರೀಕ್ಷಿಸುವುದು, ನೋಡುವುದು ಅದರಲ್ಲಿ ಏನು ಸಂಪತ್ತು ಹೊರಬರುತ್ತದೆ ಎಂದು ಅರಿತುಕೊಳ್ಳುವುದು. ಮಣ್ಣನ್ನು ಹದಗೊಳಿಸುವುದು ಆನಂತರ ಸಂಪತ್ತನ್ನು ಪಡೆಯುವುದು. ಇದುವೇ ಅಂತರಂಗದ ಭೂಮಿಯಲ್ಲಿ ಬೆಳೆ ಪಡೆಯುವ ಪರಿಯಾಗಿದೆ. ಒಬ್ಬ ಮಹಾನುಭಾವ ಹೇಳುತ್ತಾನೆ ನನಗೆ ಒಂದು ಮಗುವನ್ನು ಕೊಡಿ ಆ ಮಗು ಏನಾಗಬೇಕು ಎಂದು ಹೇಳಿ ನಾನು ಅದನ್ನು ಮಾಡುತ್ತೇನೆ. ಆ ಮಗುವಿನಲ್ಲಿ ಶ್ರೇಷ್ಠ ವ್ಯಕ್ತಿಗಳು ಹುದುಗಿರುತ್ತಾರೆ ಆದರೆ ಜಾಣ ಒಕ್ಕಲಿಗ ಸಿಗಬೇಕು.
ಭೂಮಿಯಿದೆ, ಫಲವತ್ತಾದ ಮಣ್ಣಿದೆ ಆದರೆ ಅವನಿಗೆ ಏನು ಬಿತ್ತಬೇಕು ಯಾವಾಗ ಬಿತ್ತಬೇಕು ಯಾವ ಬೆಳೆ ತೆಗೆಯಬೇಕು ಎನ್ನುವ ಅರಿವು ಇಲ್ಲದ ವ್ಯಕ್ತಿ ಬಡವ. ಬದುಕು ಬಡತನದಿಂದ ಬಳಲುತ್ತಾನೆ. ಯಾರೂ ಅದರ ಬಗ್ಗೆ ತಿಳಿದುಕೊಂಡರೆ ಅವರೇ ಸಂತ ಜ್ಞಾನಿ, ವಿಜ್ಞಾನಿಗಳು ಆಗುತ್ತಾರೆ.
ಈ ಜಗತ್ತಿನಲ್ಲಿ ಇರುವ ಶ್ರೇಷ್ಠ ವ್ಯಕ್ತಿಗಳು ನಾವು ಎಲ್ಲರೂ ಒಂದೇ ಗಾಳಿ ನೀರು ಬೆಳಕು ಆಹಾರ ಎಲ್ಲವೂ ಒಂದೇ ಯಾಗಿರುವಾಗ ನಾವೇಕೆ ಭಿನ್ನವಾಗಿದ್ದೇವೆ ಇದನ್ನು ಅರಿತುಕೊಂಡು ಬಾಳುವುದೇ ಅಂತರಂಗದ ಜ್ಞಾನ.
ಸ್ವರ್ಗ-ನರಕ ಎಂಬುದು ಬೇರಿಲ್ಲ ಕಾಣಿರೋ
ನಾವು ಒಳ್ಳೆಯ ಕಾರ್ಯ ಮಾಡಿದರೆ ಸ್ವರ್ಗ ಇಲ್ಲವಾದರೆ ನರಕ. ಇಲ್ಲಿ ಯಂತಹ ಬೆಳೆ ತೆಗೆಯಬೇಕು ಎಂಬ ಅರಿವನ್ನು ಮೂಡಿಸುವವನೇ ನಿಜವಾದ ಒಕ್ಕಲಿಗ.
“ಲಿಂಗವೇ ಬೆಳೆಯಾಗಿ
ವಿಶ್ವಾಸ ಎಂಬ ಬೀಜಬಿತ್ತಿ
ಉಂಡು ಸುಖಿಯಾದೆ
ಕಾಮಭೀಮಜೀವನದಒಡೆಯ”
ಒಕ್ಕಲಿಗ ಶರಣ ಮುದ್ಧಯ್ಯ ಹೇಳುತ್ತಾರೆ ನಾವು ಇಲ್ಲಿ ವಿಶ್ವಾಸ ಎಂಬ ಬೀಜವನ್ನು ಬಿತ್ತಬೇಕು. ಲಿಂಗ ದಂತಹ ಪವಿತ್ರ ಬೆಳೆ ತೆಗೆಯಬೇಕು.
ಅದನ್ನು ಉಂಡು ಸುಖಿಯಾಗಬೇಕು.
ಹೊರಗಿನ ಒಕ್ಕಲುತನ ಕೆಲವರೇ ಮಾಡಬಹುದು ಆದರೆ ಒಳಗಿನ ಎಲ್ಲರೂ ಮಾಡಬಹುದು ಇಲ್ಲಿ ಎಷ್ಟು ಬೇಕಾದರೂ ಭೂಮಿಯನ್ನು ನಾವು ಬಿತ್ತಬಹುದು ಅದಕ್ಕೆ ಮಿತಿ ಇಲ್ಲ ಅದುವೇ ಭಾವ ವಿಸ್ತಾರ. ಅಂತಹ ಒಳ ಭೂಮಿಯಲ್ಲಿ ನಾವು ಬೆಳೆಯನ್ನು ಬೆಳೆಯಬೇಕು.
ಈ ಭೂಮಿಯಲ್ಲಿ ನಾವು ಏನೇನು ಬೆಳೆಯಬೇಕು ಎನ್ನುತ್ತೇವೆಯೋ ಅದನ್ನು ಬೆಳೆಯುತ್ತೇವೆ ಪಡೆಯುತ್ತೇವೆ.
ದುಃಖವನ್ನು ಬಿತ್ತಿದರೆ ದುಃಖದ ಪೈರು
ಕಾಮವನ್ನು ಬಿತ್ತಿದ್ದರೆ ಕಾಮದ ಪೈರು
ಕೋಪವನ್ನು ಬಿತ್ತಿದರೆ ಕೋಪದ ಬೆಳೆ
ದ್ವೇಷವನ್ನು ಬಿತ್ತಿದರೆ ದ್ವೇಷದ ಬೆಳೆ
ಶಾಂತಿಯನ್ನು ಬಿತ್ತಿದರೆ ಶಾಂತಿಯ ಬೆಳೆ
ಇಲ್ಲಿ ನಾವು ಏನು ಪಡೆಯಬೇಕು ಎಂದು ಬದುಕುತ್ತಿದ್ದೇವೆ ಬೆಳೆಯುತ್ತೇವೆ ಅದನ್ನು ನಾವು ಅಂತರಂಗದ ಭೂಮಿಯಲ್ಲಿ ಒಕ್ಕಲಿಗನಾಗಿ ಪಡೆಯುತ್ತೇವೆ. ಹೊರಗೆ ನೀನು ಏನೇ ಆಗಿರು ಒಬ್ಬ ಶ್ರೇಷ್ಠ ವ್ಯಾಪಾರಿಯಾಗಿರು, ಉದ್ಯಮಿಯಾಗಿರು, ಶಿಕ್ಷಕನಾಗಿರು, ವೈದ್ಯನಾಗಿರು. ಆದರೆ ಒಳಗಿನ ಅಂತರಂಗದ ಭೂಮಿಯಲ್ಲಿ ನೀನು ಒಕ್ಕಲಿಗ ನಾವು ಇದುವೇ ಜೀವನದ ಮರ್ಮ.
ಸಂಗ್ರಹ: ??? ಸಿದ್ದಲಿಂಗ ಎಸ್. ಮಠಪತಿ ಉಚ್ಛಾ ತಾ. ಭಾಲ್ಕಿ ಜಿ. ಬೀದರ