ಸಿದ್ಧಿ ವಿನಾಯಕ 224 ನೇ ಜಯಂತಿ ಉತ್ಸವ ಅಂಗವಾಗಿ ಗಣಪತಿ, ಶತಚಂಡಿ, ಪೂರ್ಣಾಹುತಿ ಹವನ

ಬೀದರ, ಜ. 14ಃ ಜಿಲ್ಲೆಯ ಗಡಿಯಲ್ಲಿರುವ ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ನ್ಯಾಲಕಲ್ ಮಂಡಲ ವ್ಯಾಪ್ತಿಯಲ್ಲಿ ಬರುವ ರೇಜಂತಲ ಗ್ರಾಮದ ಶ್ರೀ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಶ್ರೀ ಸಿದ್ಧಿ ವಿನಾಯಕರ 224 ಜಯಂತಿ ಉತ್ಸವ ಅಂಗವಾಗಿ ದಿನಾಂಕ 12 ರಿಂದ 15ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು, ದಿನಾಂಕ 13 ರಂದು ಸುಮಾರು 250 ಕ್ಕೂ ಅಧಿಕ ಭಕ್ತರು ದಂಪತಿ ಸಮೇತ ಗಣಪತಿ ಹವನ, ಶತಚಂಡಿ ಹವನ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಶ್ರೀ ಸಿದ್ದಿ ವಿನಾಯಕ್ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಅಶೋಕ ರೇಜಂತಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಶೋಕ ರೇಜಂತಲ್ ಅವರು ಸುದ್ದಿ ವಾಹಿನಿಗಳ ಜೊತೆ ಮಾತನಾಡುತ್ತ, ದಿನಾಂಕ 12 ರಿಂದ 15ರ ವರೆಗೆ ಶ್ರೀ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಂಧ್ರ, ತೇಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ಸುಮಾರು 750 ಜನರು ಹೆಸರು ನೊಂದಣಿ ಮಾಡಿಕೊಂಡಿದ್ದು, ಪ್ರತಿನಿತ್ಯ 250 ದಂಪತಿಗಳು ಗಣಪತಿ, ಶತಚಂಡಿ, ಪೂರ್ಣಾಹುತಿ ಹವನಗಳಲ್ಲಿ ಭಾಗವಹಿಸಿ, ತಮ್ಮ ತಮ್ಮ ಇಷ್ಟಾರ್ಥಗಳು ಪೂರ್ಣಗೊಳಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಶ್ರೀ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಸುಮಾರು 224 ವರ್ಷಗಳ ಹಿಂದೆ ಗಣಪತಿ ಮೂರ್ತಿ ಉದ್ಭವಾಗಿತ್ತು. ಚಿಕ್ಕ ಮೂರ್ತಿ ಈಗ ಬೃಹದಾಕಾರವಾಗಿ ಬೆಳೆದಿದೆ. ಅನೇಕ ಭಕ್ತರು ಬೇಡಿದ ವರವನ್ನು ಪೂರೈಸುವ ಇಷ್ಟ ದೇವತೆ ಶ್ರೀ ಸಿದ್ದಿ ವಿನಾಯಕ ದೇವರಿದ್ದಾರೆ ಎಂದು ಭಕ್ತರು ನಂಬಿದ್ದಾರೆ ಎಂದು ತಿಳಿಸಿದರು.
ದಿನಾಕ 12 ರಿಂದ 15ರವರೆಗೆ ಭಕ್ತಾದಿಗಳಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಇಂದು ನಡೆದ ಹವನ ಕಾರ್ಯಕ್ರಮದಲ್ಲಿ 250 ಕ್ಕೂ ಅಧಿಕ ದಂಪತಿಗಳು ಪಾಲ್ಗೊಂಡು ಧಾರ್ಮಿಕ ವಿಧಾನಗಳು ನಡೆಸಿಕೊಟ್ಟರು. ದಿನಾಂಕ 15 ರಂದು ಶ್ರೀ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಬೆಳಗ್ಗೆ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಲಿದೆ. ಅಂದು ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಶ್ರೀ ಸಿದ್ದಿ ವಿನಾಯಕ ದೇವರ ಪಡೆದು ಪುನಿತರಾಗಬೇಕು ಎಂದು ವಿನಂತಿಸಿಕೊಂಡರು.
ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಶ್ರೀ ಸಿದ್ಧಿ ವಿನಾಯಕ ದೇವರ 224ನೇ ಜಯಂತಿ ಉತ್ಸವ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಸುಮಾರು ವಿವಿಧ ನಮೂನೆಯ 25 ಕ್ವಿಂಟಲ್ ಹೂ ತರಲಾಗಿದ್ದು, ದೇವಸ್ಥಾನದ ಅಲಂಕಾರ ಹಾಗೂ ಪುಷ್ಪಾರ್ಚನೆ ಕಾರ್ಯಕ್ರಮ ನಡೆದಿದೆ ಎಂದು ಹೇಳಿದರು.
ದಿನಾಂಕ 22 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮೂರ್ತಿ ಪ್ರಾಣ ಪ್ರತಿಷ್ಟಾಣ ಕಾರ್ಯಕ್ರಮದ ಅಂಗವಾಗಿ ಶ್ರೀ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಸ್ಥಾನದಲ್ಲಿ ಪೂಜೆ ಇತ್ಯಾದಿ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ದಿನಾಂಕ 22 ರಂದು ರೇಜಂತಲ ಶ್ರೀ ಸಿದ್ಧಿ ವಿನಾಯಕ ದೇವರ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದ್ದಾರೆ.

ಶ್ರೀ ಸಿದ್ದಿ ವಿನಾಯಕ ದೇವಸ್ಥಾನದ ಪೂಜಾರಿ ಪ್ರಶಾಂತ ಜೋಷಿ ಅವರು ಮಾತನಾಡುತ್ತ, ಶ್ರೀ ಸಿದ್ಧಿ ವಿನಾಯಕ ದೇವರ 224ನೇ ಜಯಂತಿ ಉತ್ಸವ ಅಂಗವಾಗಿ ದಿನಾಂಕ 12 ರಿಂದ 15ರವರೆಗೆ ಗಣಪತಿ ಹೋಮ, ಶತಚಂಡಿ ಹವನ, ಪೂರ್ಣಾಹುತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದು ಹೇಳಿದರು.