ಸಿದ್ಧಿವಿನಾಯಕ ಗೆಳೆಯರ ಬಳಗದಿಂದ ಪ್ರವಚನ

ಮುದಗಲ್,ಏ.೨೩- ಪಟ್ಟಣದ ಕುಂಬಾರಪೇಟೆ ಬಸವೇಶ್ವರ ದೇವಸ್ಥಾನದ ನೂತನ ರಥೋತ್ಸವ, ಬಸವಣ್ಣನ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ಜೀವನ ದರ್ಶನ ಆಧ್ಯಾತ್ಮ ಪ್ರವಚನ ಕಾರ್ಯಕ್ರಮದ ಸಾನಿಧ್ಯವಹಿಸಿ ಪೂಜ್ಯರಾದ ಮಹಾಂತ ಸ್ವಾಮಿ ಅವರು ಹಾಗೂ ಬಸವೇಶ್ವರ ದೇವಸ್ಥಾನದ ಅಧ್ಯಕ್ಷರಾದ ಮಲ್ಲಪ್ಪ ಮಾಟೂರ ಹಾಗೂ ಪುರಸಭೆ ಸದಸ್ಯರಾದ ಶ್ರೀಕಾಂತಗೌಡ ಪಾಟೀಲ್ ಅವರಿಗೆ ಸಿದ್ಧಿವಿನಾಯಕ ಗೆಳೆಯರ ಬಳಗದಿಂದ ಶಾಲು ಹಾರ ಹಾಕಿ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀನಿವಾಸ ಚಿತ್ರಗಾರ, ನವೀನ್ ಕುಮಾರ್ ತವರಗೇರಿ,ವಿಶ್ವನಾಥ್ ಗಡದ್,ಶ್ರೀ ಕಾಂತ ಚಿತ್ರಗಾರ,ಶಂಕರ್ ಮಾಟೂರ ಇತರರು ಉಪಸ್ಥಿತರಿದ್ದರು.