ಸಿದ್ಧಾರೂಢ ಮಠ: 31 ರಿಂದ ಪ್ರವಚನ

ಬೀದರ್:ಜು.29: ಶ್ರಾವಣ ನಿಮಿತ್ತ ಇಲ್ಲಿಯ ಸಿದ್ಧಾರೂಢ ಮಠದಲ್ಲಿ ಜುಲೈ 31 ರಿಂದ ಒಂದು ತಿಂಗಳು ಪ್ರವಚನ ಹಮ್ಮಿಕೊಳ್ಳಲಾಗಿದೆ.

ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ ಅವರು ಪ್ರತಿದಿನ ಸಂಜೆ 6.30 ರಿಂದ 8 ರ ವರೆಗೆ ನಿಜಗುಣ ಶಿವಯೋಗಿಗಳ ಕೃತ ಕೈವಲ್ಯ ಪದ್ಧತಿ ಗ್ರಂಥ ಕುರಿತು ಪ್ರವಚನ ನೀಡಲಿದ್ದಾರೆ.

ಮಠದಲ್ಲಿ ಪ್ರತಿ ದಿನ ಬೆಳಿಗ್ಗೆ 7 ರಿಂದ ಶ್ರೀಗಳ ಪಾದಪೂಜೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಠದ ಶ್ರಾವಣ ಪ್ರವಚನ ಸಮಿತಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.