ಸಿದ್ಧಾರೂಢ ಮಠದಲ್ಲಿ ಮಹಾ ಶಿವರಾತ್ರಿ ನಾಳೆ

ಬೀದರ್:ಮಾ.7: ನಗರದ ಸಿದ್ಧಾರೂಢ ಮಠದಲ್ಲಿ ಮಾ. 8 ರಂದು ಮಹಾ ಶಿವರಾತ್ರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ.
ಸಂಜೆ 6ಕ್ಕೆ ಸಾಮೂಹಿಕ ಲಿಂಗಪೂಜೆ, ಸಿದ್ಧಾರೂಢರ ಮಹಾ ಅಭಿಷೇಕ, ಹನ್ನೆರಡು ಜ್ಯೋತಿಲಿರ್ಂಗಗಳ ಪೂಜೆ, ಪ್ರವಚನ ಹಾಗೂ ಮಹಾ ಮಂಗಳಾರತಿ ನಡೆಯಲಿವೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಠದ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ಮನವಿ ಮಾಡಿದ್ದಾರೆ.