ಸಿದ್ಧಾಂತ ಶಿಖಾಮಣಿ ಜ್ಞಾನಜ್ಯೋತಿ ಕಾರ್ಯಕ್ರಮ

ಕಲಬುರಗಿ,ಜ.27-ಸಿದ್ಧಾಂತ ಶಿಖಾಮಣಿ ಪ್ರವಚನ ವೇದಿಕೆ ಕೇಂದ್ರ ಸಮಿತಿ ವತಿಯಿಂದ ಹಮ್ಮಿಕೊಂಡ ಬನದ ಹುಣ್ಣಿಮೆ ನಿಮಿತ್ಯ ನಗರದ ಗಂಜ್ ಬ್ಯಾಂಕ್ ಕಾಲೋನಿಯ ಈಶ್ವರ ದೇವಸ್ಥಾನ ಅವರಣದಲ್ಲಿ ನಡೆದ ಸಿದ್ಧಾಂತ ಶಿಖಾಮಣಿ ಜ್ಞಾನಜ್ಯೋತಿ ಕಾರ್ಯಕ್ರಮದಲ್ಲಿ ಉಪ ಮಹಾಪೌರರಾದ ಶಿವಾನಂದ ಪಿಸ್ತಿ ಅವರು ಮಾತನಾಡುತ್ತ ಇಂತಹ ಕಾರ್ಯಕ್ರಮ ನಡೆಯುವುದರಿಂದ ಧರ್ಮದ ಬಗ್ಗೆ ಅರಿವು ಮೂಡಿಸಲು ಸಾಧ್ಯವೆಂದು ಅವರು ತಿಳಿಸಿದರು.
ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡಿದರೆ ಧರ್ಮ ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯ. ಆದರೆ, ಇವತ್ತಿನ ಮೊಬೈಲ್, ಕಂಪ್ಯೂಟರ್ ಯುಗದಲ್ಲಿ ನಾವೆಲ್ಲರೂ ಮಗ್ನವಾಗಿದ್ದೇವೆ. ಅದನ್ನು ಸ್ವಲ್ಪ ಕಡಿಮೆ ಮಾಡಿ ಧರ್ಮಕಡಗೆ ಹೆಚ್ಚು ಒಲವು ತೋರಬೇಕೆಂದು ತಿಳಿಸಿದರು. ಸಿದ್ಧಾಂತ ಶಿಖಾಮಣಿ ಪ್ರವಚನ ವೇದಿಕೆ ಕೇಂದ್ರ ಸಮಿತಿ ಹಲವಾರು ವರ್ಷದಿಂದ ಸಂಘದ ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸಂಸ್ಥೆಯ ಉಪನ್ಯಾಸಕರಾದ ಸಿದ್ಧಾನಂದ ಮಹಾಶಿಯೊಗಿಗಳು ವಿಶೇಷ ಉಪನ್ಯಾಸ ನೀಡಿದರು ಈ ಕಾರ್ಯಕ್ರಮದ ಸಂಯೋಜಕ ಅಶೋಕ್ ಮಾನಕರ, ಬಸವರಾಜ್ ಎತ್ತಿನಮನಿ, ಆರ್.ಎಸ್. ಬಿರಾದಾರ್, ವಿಜಯ್ ಕುಮಾರ್ ದೇವಣಿ, ಅರುಣ್ ಕುಮಾರ್, ವರದಾ ಶಂಕರ್ ಶೆಟ್ಟಿ, ಅರವಿಂದ್ ದೇಸಾಯಿ, ಚನ್ನಬಸಪ್ಪ ರಾಯನಾಡ, ವಿಜಯಕುಮಾರ್ ಬಿರಾದಾರ್, ರವಿಕುಮಾರ್ ಜಮದಾರಖಾನಿ, ಕೇದಾರನಾಥ್ ಮಲ್ಕಪ್ಪ ಗೋಳ, ಸಂಸ್ಥೆಯ ಅಧ್ಯಕ್ಷÀ ರಾಜಶೇಖರ್ ಪಾಟೀಲ್, ಸಿದ್ದಮ್ಮ ಪಾಟೀಲ್, ಶೋಭಾ ಮಾನಕರ, ಈಶ್ವರಿ ಆರ್ ಪಾಟೀಲ್ ಬೆಡಸೂರ್, ಸಂಸ್ಥೆ ಗೌರವಾಧ್ಯಕ್ಷ ಶಿವರಾಯ ಮುಲಗೆ, ಶಿವಾನಂದ ಕಶೆಟ್ಟಿ, ಕಾರ್ಯದರ್ಶಿ ಅಂಬಾರಾಯ ಕೋಣೆ, ವಿಶ್ವನಾಥ್ ವಾಗಣಗೇರಿ, ಅಲ್ಲದೆ ಸಮಸ್ತ ಗಂಜ್ ಬ್ಯಾಂಕ್ ಕಾಲೋನಿಯ ಭಕ್ತಾದಿಗಳು ಹಾಗೂ ಮಹಿಳಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಚನ್ನಮಲ್ಲಯ್ಯ ಸ್ವಾಮಿ ಅವರಿಂದ ವೇದಘೋಷ ಜಗದೀಶ್ ಪಸಾರ್ ಅವರ ಕಲಾತಂಡದವರಿಂದ ಸಂಗೀತ ಕಾರ್ಯಕ್ರಮ ಜರಗಿತು.