ಸಿದ್ಧಾಂತ ಕ್ಯಾಲೆಂಡರ್ ಬಿಡುಗಡೆ

ಬಳ್ಳಾರಿ ಡಿ 28 : ನಗರದ ಸತ್ಯನಾರಾಯಣ ಪೇಟೆಯ ನೇಶ್ವರ ದೇವಾಲಯದಲ್ಲಿ ಜೋತಿಷಿ ಗುರುರಾಜ್ ಕುಲಕರ್ಣಿ ಅವರು ರಚಿಸಿದ, 2021ನೇ ಸಾಲಿನಶ್ರೀ ಗೌತಮ ಸೂರ್ಯ ಸಿದ್ಧಾಂತ ಕ್ಯಾಲೆಂಡರ್‍ನ್ನು ನಿನ್ನೆ ಬಿಡುಗಡೆ ಮಾಡಿದ್ದಾರೆ. ಲೆಕ್ಕ ಪರಿಶೋಧಕ ಶ್ರೀಧರ್ ಪಾರ್ಥ ಸಾರಥಿ ಅವರು ನೂತನ ಕ್ಯಾಲೆಂಡರ್‍ನ್ನು ಬಿಡುಗಡೆ ಮಾಡಿ, ಗುರುರಾಜ್ ಕುಲಕರ್ಣಿ ಅವರು ಪ್ರತಿ ವರ್ಷ ಎಲ್ಲ ಮಾಹಿತಿಗಳನ್ನು ಒಳಗೊಂಡ ಕ್ಯಾಲೆಂಡರ್‍ನ್ನು ರಚಿಸಿ ಬಿಡುಗಡೆ ಮಾಡುವ ಕಾರ್ಯ ಶ್ಲಾಘನೀಯ ಕ್ಯಾಲೆಂಡರ್ ಜೊತೆ ಪಂಚಾಂಗವನ್ನು ಹೊರ ತಂದಿದ್ದಾರೆ. ಬರುವ ದಿನಗಳಲ್ಲಿ ಕುಲಕರ್ಣಿ ಅವರು ಧಾರ್ಮಿಕ ಕ್ಷೇತ್ರದಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಹಾರೈಸಿದರು.
ಜೋತಿಷಿ ಗುರುರಾಜ್ ಕುಲಕರ್ಣಿ ಅವರು ಮಾತನಾಡಿ, ಕ್ಯಾಲೆಂಡರ್ ಬಿಡುಗಡೆಗೆ ಭಕ್ತರ ಸಹಕಾರ ಮುಂದುವರೆಯಲಿ ಎಂದರು. ನಂತರ ಸುಮನಾ ಹಾಗೂ ರಾಘವ ವರ್ಷಿಣಿ ಅವರಿಂದ ಸಂಗೀತ ಕಾರ್ಯಕ್ರಮ ಗಮನಸೆಳೆಯಿತು. ಅನುಜಾ ಕುಲಕರ್ಣಿ, ಶ್ರೀನಿವಾಸ್ ಅವರು ತಬಲಾ ಸಾಥ್ ನೀಡಿದರು. ಇದಕ್ಕೂ ಮುನ್ನ ಶಿಲ್ಪ ಜಡೇಶ್ ಅವರು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಎಂಜಿನಿಯರ್ ಸಂಜಿವ್ ಪ್ರಸಾದ್, ಸಿ.ಕೆ.ನಾಗರಾಜ್, ಕೌಲ್ ಬಜಾರ್ ವ್ಯಾಸರಾಜ ಮಠದ ವ್ಯವಸ್ಥಾಪಕ ಅಶೋಕ್ ಕುಲಕರ್ಣಿ, ನ್ಯಾಯವಾದಿ ರಾಘವೇಂದ್ರ ಮೋಹನ್, ಬದ್ರಿನಾರಾಯಣ ದೇವಾಲಯದ ಗುರುರಾಜ್ ಆಚಾರ್, ಯುವ ಮುಖಂಡ ಡಿ.ಗಿರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.