ಸಿದ್ಧಶ್ರೀ ಶಾಲೆಯಲ್ಲಿ ಯೋಗ ದಿನಾಚರಣೆ

ಕಲಬುರಗಿ,ಜೂ.22. ಕೋಟನೂರ(ಡಿ) ಜಿಡಗಾ ಮಠದ ಸಿದ್ಧಶ್ರೀ ಡಿವೈನ್ ಪ್ಯಾಲೇಸ್‍ನಲ್ಲಿ ವಿಶ್ವ ಯೋಗ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ವಿದ್ಯಾರ್ಥಗಳು ಯೋಗದ ವಿವಿಧ ಆಸನಗಳನ್ನು ಮಾಡಿ ಗಮನ ಸೆಳೆದರು.
ವಿಜಯವಾಣಿ,ದಿಗ್ವಿಜಯ ನ್ಯೂಸ್ ಮಾಧ್ಯಮ ಸಹಯೋಗದಲ್ಲಿ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್ ಮತ್ತು ಸಿದ್ಧಶ್ರೀ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿತ್ತು.
ಭಾರತ ಸ್ವಾಭಿಮಾನ ಟ್ರಸ್ಟ್ ಜಿಲ್ಲಾಧ್ಯಕ್ಷ, ಯೋಗ ಗುರು ಶಿವಾನಂದ ಸಾಲಿಮಠ ಅವರು ಮಕ್ಕಳಿಗೆ ವಿವಿಧ ಆಸನಗಳ ಜೊತೆಗೆ ಮೇರೆ ರಂಗ ದೇ ಬಸಂತಿ ಹಾಡಿನೋಂದಿಗೆ ಯೋಗಿಂಗ್ ಜಾಗಿಂಗ್ ಮಾಡಿಸಿದರು. ಅಧ್ಯಕ್ಷತೆ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಸಿ.ಹಿರೇಮಠ ವಹಿಸಿದ್ದರು.
ವಿದ್ಯಾರ್ಥಿಗಳಿಂದ ತಂದೆಯ ಮಹತ್ವ ಸಾರುವ ಕಿರು ನಾಟಕ ಗಮನ ಸೆಳೆಯಿತು.
ವಿಜಯವಾಣಿ ಸ್ಥಾನಿಕ ಸಂಪಾದಕ ಸದಾನಂದ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯವಾಣಿ ಮುಖ್ಯ ವರದಿಗಾರ ಜಯತೀರ್ಥ ಪಾಟೀಲ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ರಾಘವೇಂದ್ರ ಕುಲಕರ್ಣಿ, ಪ್ರಾಂಶುಪಾಲರಾದ ಅಮೃತಾ ಪಿ. ಕೋರಳ್ಳಿ, ರುದ್ರಯ್ಯಾ ಮಠಪತಿ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಶ್ವಿನಿ ಕಾರ್ಯಕ್ರಮ ನಿರೂಪಣೆ ಮಾಡಿದರೆ, ರೇಖಾ ವಂದಿಸಿದರು.