ಸಿದ್ಧರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ:ನೀಲಹಳ್ಳಿ

ಸೈದಾಪುರ:ಆ.1:ಇದೆ ತಿಂಗಳು 3 ರಂದು ದಾವಣಗೆರಿಯಲ್ಲಿ ನಡೆಯಲಿರುವ ಸಿದ್ಧರಾಮೋತ್ಸವ ಕಾರ್ಯಕ್ರಮದಲ್ಲಿ ಈ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸೈದಾಪುರ ಬ್ಲಾಕ ಕಾಂಗ್ರೆಸ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ ಅಭಿಪ್ರಾಯಪಟ್ಟರು.

ಪಟ್ಟಣದ ಪ್ರವಾಸಿ ಮಂದಿರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡರಾದ ಸಿದ್ಧಾರಾಮಯ್ಯನವರ 75ನೇಯ ಜನ್ಮದಿನದ ಅಂಗವಾಗಿ ಬೃಹತ ಕಾರ್ಯಕ್ರಮ ಜರುಗಲಿದೆ. ಈ ಭಾಗದಿಂದ ವಾಹನಗಳ ಅನುಕೂಲತೆ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಇದೆ ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿ ಕುರಿತು ಆತಂಕ ವ್ಯಕ್ತಪಡಿಸಿದ ಅವರು, ರಾಜ್ಯ ಸರಕಾರದಲ್ಲಿ ಭ್ರಷ್ಟತೆ ತಾಂಡವಾಡುತ್ತಿದೆ. ಕೆಲಸ ಕಾರ್ಯಗಳು ಸುಲಭ ಆಗುತ್ತಿಲ್ಲ. ಬೆಳೆಗಳು ಗಗನಕ್ಕೆರಿವೇ. ಅಚ್ಛೇದಿನ ಎಂದು ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿಯವರು, ಪೆಟ್ರೋಲ್, ಡಿಸೆಲ್, ಸಿಲೇಂಡರ ಬೆಳೆಗಳನ್ನು ಹೆಚ್ಚು ಮಾಡಿದ್ದಾರೆ. ಇದರಿಂದ ಡಬಲ ಇಂಜಿನ ಸರಕಾರ ಮತದಾರರ ಭರವಸೆಯನ್ನು ಕಳೆದುಕೊಂಡಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ. ಪಕ್ಷವನ್ನು ಬಲ ಪಡೆಸಬೇಕಾದ ಜವಬ್ದಾರಿ ಪ್ರತಿಯೊಬ್ಬರ ಮೇಲೆದ್ದೂ, ಇದಕ್ಕಾಗಿ ಕಾರ್ಯಕರ್ತರನ್ನು ತಯಾರು ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಶರಣಿಕಕುಮಾರ ದೋಖಾ, ಮುಖಂಡರಾದ ಮಹಿಪಾಲರೆಡ್ಡಿ ದುಪ್ಪಲ್ಲಿ, ವಿಜಯ ಕಂದಳ್ಳಿ, ತಿಮ್ಮರೆಡ್ಡಿ ಬೆಳಗುಂದಿ ಉಪಸ್ಥಿತರಿದ್ದರು.