ಸಿದ್ಧರಾಮೇಶ್ವರರ ಜಯಂತಿ ಆಚರಣೆ

ಚಿಟಗುಪ್ಪ,ಜ.17-ಶಿವಯೋಗಿ ಸಿದ್ಧರಾಮೇಶ್ವರರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಭೋವಿ ಸಮಾಜದ ತಾಲ್ಲೂಕ ಅಧ್ಯಕ್ಷ ಲಕ್ಷಣ ಭೋವಿ ಕರೆ ನೀಡಿದರು.
ಪಟ್ಟಣದ ವಾರ್ಡ್ ನಂಬರ್ 23ರಲ್ಲಿ ಬರುವ ಫಾತ್ಮಪುರದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಸಮಾರಂಭದಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಭೋವಿ ಸಮಾಜದ ಜಿಲ್ಲಾ ಸಂಚಾಲಕ ಹಣಮಂತ ಭೋವಿ, ಜಿಲ್ಲಾ ಉಪಾಧ್ಯಕ್ಷ ಅಂಬಾಜಿ ಪವರ್, ಕಿರಣ್ ಭೋವಿ, ನಾಗೇಶ್ ಭೋವಿ, ರಾಜು ಭೋವಿ, ಅಂಬಣ್ಣ ಸಂಪಂಗಿ, ವೀರೇಶ್ ಸಂಪಂಗಿ, ಭೀಮಣ್ಣ, ಅಶೋಕ್, ಜಗನ್ನಾಥ್, ಗೋಪಾಲ್ ಸೇರಿದಂತೆ ಭೋವಿ ಸಮಾಜ ಬಾಂಧವರು ಸಮಾರಂಭದಲ್ಲಿ ಭಾಗವಹಿಸಿದ್ದರು.