ಸಿದ್ಧರಾಮಯ್ಯ ಬಾದಾಮಿಯಲ್ಲಿ ಗೋಲಿ ಆಡುತ್ತಿದ್ರಾ: ಸಿಂಹ

ಚಾಮರಾಜನಗರ ಏ.20- : ಬೆಂಗಳೂರು ಬಿಟ್ಟು ವರುಣಾಗೆ ಏಕೆ ಬಂದಿದ್ದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ಅಭ್ಯರ್ಥಿ ಸೋಮಣ್ಣತೀವ್ರ ವಾಗ್ದಾಳಿ ನಡೆಸಿದರು.
ಚಾಮರಾಜನಗರದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಪ್ರತಾಪ್ ಸಿಂಹ ಮಾತನಾಡಿ, ನಾನು ಗೋಲಿ, ಬುಗುರಿ ಆಡಿ ಬೆಳೆದಿದ್ದು ಸಿದ್ದರಾಮನಹುಂಡಿಯಲ್ಲಿ, ವರುಣಾಗೆಯಾಕೆ ಸೋಮಣ್ಣ ಬಂದ್ರುಎಂದು ಕೇಳುತ್ತಿದ್ದಾರೆ, ಇಂದಿರಾಗಾಂಧಿ ಏಕೆ ಚಿಕ್ಕಮಗಳೂರಿಗೆ ಏಕೆ ಬಂದ್ರು, ಅವರೇನುಅಲ್ಲಿ ಗೋಲಿ-ಬುಗುರಿಆಡಿದ್ರಾ, ಇಟಲಿಯಲ್ಲಿ ಹುಟ್ಟಿದ್ದ ಸೋನಿಯಾ ಗಾಂಧಿ ಬಳ್ಳಾರಿಗೆ ಬಂದ್ರು, ಡೆಲ್ಲಿಯಲ್ಲಿ ಹುಟ್ಟಿದ್ದ ರಾಹುಲ್ ಗಾಂಧಿ ವೈನಾಡಿನಲ್ಲಿ ನಿಂತಿದ್ದರು, ತಾವು ಯಾಕೆ ಬಾದಾಮಿಗೆ ಹೋದ್ರಿ, ಕೋಲಾರ ಹುಡುಕ್ತಾ ಇದ್ರಿ ಎಂದು ಲೇವಡಿ ಮಾಡಿದರು.
ಮೋದಿ ಕರ್ನಾಟಕಕ್ಕೆ ಬಂದರೇ ಅವರ ಗುಂಡಿಗೆಯಲ್ಲಿ ಭಯ ಶುರುವಾಗಲಿದೆ. ಅವರಎದೆಯಲ್ಲಿ ನಡುಕ ಶುರುವಾಗಿದೆ, ಅವರಿಗೆ ಭಯ ಬರಿಸಬೇಕಿತ್ತು, ಬರಿಸಿದ್ದಾಗಿದೆ ನಮಗೆ ಖುಷಿ ಇದೆಎಂದು ವ್ಯಂಗ್ಯ ಮಾಡಿದರು.
ಬಿಜೆಪಿ ಮುಖಂಡ ಬಸವೇಗೌಡಅವರು ಮನೆಗೆ ಹೋಗಿ ಬಾಗಿಲು ಕಾದಿದ್ದೀರಿ, ಅಪ್ಪ, ಮಗ ಇಬ್ಬರೂಕೂಡ ಬಾಗಿಲು ಕಾದಿದ್ದೀರಿ, ನಿಮಗೆ ಈ ಪರಿಸ್ಥಿತಿ ಬರಬಾರದಿತ್ತು, ಸೋಮಣ್ಣ ಹಳೇ ಮೈಸೂರಿಗೆ ಬಂದ ನಂತರ ವಾತಾವರಣ ಬದಲಾಗಿದೆ, ಚಾಮರಾಜನಗರದ ನಾಲ್ಕಕ್ಕೆ ನಾಲ್ಕು ಗೆಲ್ತೀವಿ, ಮೈಸೂರಿನಲ್ಲೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ, ಮಾದಪ್ಪ, ಚಾಮುಂಡೇಶ್ವರಿಇಬ್ಬರ ಸೇವೆಯನ್ನೂ ಸೋಮಣ್ಣ ಮಾಡಿದ್ದಾರೆ.ಆದ್ರಿಂದಎರಡೂಕಡೆ ಗೆಲ್ಲಿಸಿಕೊಳ್ಳುವ ಕೆಲಸ ಮಾಡೋಣಎಂದು ಹೇಳಿದರು.
ಹಳೇ ಮೈಸೂರು ಬಾಗದಲ್ಲಿ ಹೈಕಮಾಂಡ್ ನಮ್ಮಅಭಿಪ್ರಾಯ ಕೇಳಿತ್ತು.ವರುಣಾಗೆ ಸಿದ್ದರಾಮಯ್ಯ ವಾಪಸ್ ಬರ್ತಿದ್ದಾರೆ. ಆ ಉತ್ಸಾಹತಣ್ಣಗಾಗಿಸಲುಯಾರನ್ನೂ ಕಳಿಸಬೇಕು ಅನ್ನೋಚರ್ಚೆಯಿತ್ತು. ಆಗ ನಾವೂ ಹೇಳಿದ್ದು ಸೋಮಣ್ಣ ಹೆಸರು.ಚಾಮರಾಜನಗರ, ವರುಣಾಎರಡಕ್ಕೂಕೂಡಅವರನ್ನು ಕಳಿಸಿದ್ದಾರೆ.
13 ರಂದು ನೀವೂ ಗೆಲ್ಲಿಸಿಕೊಡಿ.ನಾವೂ ಸೋಮಣ್ಣರನ್ನು ವರುಣಾದಲ್ಲಿ ಗೆಲ್ಲಿಸ್ತೀವಿ. ನಂತರ ಅವರು ವರುಣಾದಲ್ಲಿರಬೇಕು, ಚಾಮರಾಜನಗರದಲ್ಲಿರಬೇಕು ಅಂತಾ ತೀರ್ಮಾನ ಮಾಡೋಣ ಎಂದು ಮನವಿ ಮಾಡಿದರು.
ಸಚಿವ ಸೋಮಣ್ಣ ಮಾತನಾಡಿ, ಇಂದಿರಾಗಾಂಧಿಗೂ, ರಾಹುಲ್‍ಗಾಂಧಿಗೂಕರ್ನಾಟಕಕಕ್ಕೂ ಕೇರಳಕ್ಕೂ ಏನು ಸಂಬಂಧಅದೇರೀತಿ ನಾನು ವರುಣದಲ್ಲಿ ಸ್ಪರ್ಧೆ ಮಾಡಿದ್ದೇನೆಎಂದು ಸಿದ್ದು ವಿರುದ್ಧಆಕ್ರೋಶ ಹೊರಹಾಕಿದರು.
ನಿನ್ನೇಒಂದೇ ದಿನ ವರುಣಾದ 24 ಗ್ರಾಮಗಳನ್ನು ಸುತ್ತಿದ್ದೇನೆ, ಜನರು ಬದಲಾವಣೆ ಬಯಸಿದ್ದಾರೆ. ಅದೇರೀತಿ, ಚಾಮರಾಜನಗರದ ಜನರು ಕೂಡ ಈ ಬಾರಿ ನನಗೆ ಆಶೀರ್ವಾದ ಮಾಡಬೇಕು, 3 ಬಾರಿಕಾಂಗ್ರೆಸ್ ಗೆ ಆಶೀರ್ವಾದ ಮಾಡಿದ್ದೀರಿ, ನನಗೆ 5 ವರ್ಷ ಅವಕಾಶ ಕೊಡಿ, ರಾಜ್ಯದಲ್ಲೇ ನಂ 1 ತಾಲೂಕು ಮಾಡುವೆ ಎಂದು ಕೋರಿದರು.