ಸಿದ್ಧಗಂಗಾ ಮಠದ ಸ್ವಾಮೀಜಿಗೆ ಸ್ವಾಗತ

ಬೀದರ್: ಡಿ.3:ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಶನಿವಾರ ಹೈದರಾಬಾದ್ ಮೂಲಕ ಬೀದರ ಜಿಲ್ಲೆಗೆ ಪ್ರಪ್ರಥಮ ಬಾರಿಗೆ ಆಗಮಿಸಿದ ತುಮಕೂರಿನ ಸಿದ್ಧಗಂಗಾ ಮಠದ ಅಧ್ಯಕ್ಷರಾದ ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಅವರಿಗೆ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದಿಂದ ಬೀದರ ನಗರದ ದೇವ ದೇವ ವನದ ಬಳಿಯ ರಿಂಗ್ ರಸ್ತೆಯಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ಶ್ರೀಗಳಿಗೆ ಪುಷ್ಪಗುಚ್ಛ ನೀಡಿ, ಶಾಲು ಹೊದಿಸಿ ಸತ್ಕರಿಸಿ ಬರಮಾಡಿಕೊಳ್ಳಲಾಯಿತು.
ಮುಖಂಡರಾದ ಪ್ರಕಾಶ ಟೊಣ್ಣೆ, ಅಶೋಕ ಖೂಬಾ, ಅಪ್ಪಾರಾವ್ ಖೂಬಾ, ಡಾ. ಬಸವರಾಜ ಬಲ್ಲೂರ, ಸಿದ್ಧಾರೆಡ್ಡಿ ನಾಗೋರಾ, ಬಲವಂತರಾವ ಪಾಂಡ್ರೆ, ಸಂಘದ ನಾಗಭೂಷಣ ಹುಗ್ಗೆ, ರಮೇಶ ಪಾಟೀಲ ಪಾಶಾಪುರ, ಶಿವಕುಮಾರ ಪಾಟೀಲ ತೇಗಂಪುರ, ದೇವೇಂದ್ರ ಕರಂಜೆ, ಶಶಿಕಾಂತ ಪಾಟೀಲ್ ತೇಗಂಪೂರ್, ಮಹಾದೇವ ಪಟ್ನೆ, ಬಸವರಾಜ ಕೊಳ್ಳೂರ್, ಗುರುಪಾದಪ್ಪ ಸಿರ್ಸೆ, ಮಂಜುನಾಥ ಪಾಟೀಲ್, ರಾಜಕುಮಾರ ನಾಯಕೊಡೆ ಮತ್ತಿತರರು ಇದ್ದರು.