ಸಿದ್ಧಗಂಗಾಶ್ರೀ ಹುಟ್ಟುಹಬ್ಬ: ಹಣ್ಣುಹಂಪಲು ವಿತರಣೆ

ಚಿಂಚೋಳಿ,ಏ.1: ಪಟ್ಟಣದ ಚಂದಾಪುರದ ಸಾರ್ವಜನಿಕರ ಸರ್ಕಾರಿ ಆಸ್ಪತ್ರೆಯಲ್ಲಿ ಪದ್ಮಭೂಷಣ, ತ್ರಿವಿಧ ದಾಸೋಹಿ
ಸಿದ್ದಗಂಗಾ ಡಾ. ಶಿವಕುಮಾರ ಮಹಾಸ್ವಾಮಿಗಳವರ 116 ನೆಯ ಹುಟ್ಟುಹಬ್ಬದ ಅಂಗವಾಗಿ ಚಿಂಚೋಳಿ ತಾಲೂಕ ವೀರಶೈವ ಸಮಾಜ ವತಿಯಿಂದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ತಾಲೂಕ ಅಧ್ಯಕ್ಷಸಂಜೀವಕುಮಾರ ಪಾಟೀಲ್, ಬಸವ ಸೇವಾ ಸಮಿತಿಯ ಅಧ್ಯಕ್ಷ ನೀಲಕಂಠ ಸೀಳಿನ್, ಆಸ್ಪತ್ರೆ ಆಡಳಿತಾಧಿಕಾರಿ ಡಾ. ಸಂತೋಷ್ ಪಾಟೀಲ್, ಗೋಪಾಲರಾವ ಕಟ್ಟಿಮನಿ, ನರಸಪ್ಪ, ವೀರಶೈವ ಸಮಾಜದ ಮುಖಂಡರಾದ ವೀರೇಶ ದೇಸಾಯಿ ಚಿಮ್ಮಾಇದಲಾಯಿ, ವೀರೇಶ ಯ0ಪಳ್ಳಿ, ಬಸವರಾಜ್ ಚೆನ್ನೂರ, ಸಂಜು ಪಾಟೀಲ ಯ0ಪಳ್ಳಿ, ಪವನ ಕುಮಾರ ಪಾಟೀಲ, ಸಂತೋಷ್ ಕಶೆಟ್ಟಿ, ಸಂತೋಷ್ ಪಾಟೀಲ್ ಮೋಘಾ, ಮಲ್ಲಿನಾಥ ಮೇಲಗಿರಿ,ಕೈಲಾಸ್ ಬಿರಾದಾರ, ವಿಜಯ ಕುಮಾರ್ ಬಿರಾದಾರ, ಪ್ರಕಾಶ ಹಡಪದ, ಲಕ್ಷ್ಮಿಕಾಂತ್ ಜಮಾದಾರ್ ಸೇರಿದಂತೆ ಹಲವರಿದ್ದರು