ಸಿದ್ದೇಶ್ವರ ಸ್ವಾಮಿಗಳ ಆದರ್ಶ ನಮಗೆ ದಾರಿದೀಪ


ಸಂಜೆವಾಣಿ ವಾರ್ತೆ
ಹರಪನಹಳ್ಳಿ :ಜ,5- ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳ ವ್ಯಕ್ತಿತ್ವ, ಸಿದ್ಧಾಂತ ನಮ್ಮೆಲ್ಲರಿಗೂ ಆದರ್ಶವಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಭಾರತಿ ಹೇಳಿದರು.ಅವರು ಪಟ್ಟಣದ ನ್ಯಾಯಾಲಯದ ಆವರಣದಲ್ಲಿನ ವಕೀಲರ ಸಂಘದ ಕಚೇರಿಯಲ್ಲಿ ವಕೀಲರ ಸಂಘ ಹಾಗೂ ಕಾನೂನು ಸೇವಾ ಸಮಿತಿ ವತಿಯಿಂದ ಬುಧವಾರ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಯವರ ನಿಧನಕ್ಕೆ ಶ್ರದ್ಧಾಂಜಲಿ ಹಾಗೂ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಎರಡನೇ ವಿವೇಕಾನಂದ ಬಸವಣ್ಣಯಾರಾದರೂ ಇದ್ದರೆ ಅದು ಸಿದ್ದೇಶ್ವರ ಸ್ವಾಮೀಜಿ ಆಗಿದ್ದರು ಎಂದ ಅವರು ಯಾರಲ್ಲಿ ಶಾಂತಿ, ಪರಿಶುದ್ಧತೆ, ಆಧಾತ್ಮಕತೆ, ಪ್ರಾಮಾಣಿಕತೆ ಇರುತ್ತದೆ. ಅಂತಹ ವ್ಯಕ್ತಿಯನ್ನು ಭೂಮಂಡಲದಲ್ಲಿ ಯಾರು ಅಲುಗಾಡಿಸಲು ಆಗುವುದಿಲ್ಲ ಅಂತ ವ್ಯಕ್ತಿ ಸಿದ್ದೇಶ್ವರ ಸ್ವಾಮಿಜಿ ಆಗಿದ್ದರು. ಯಾವುದೇ ಧರ್ಮಗಳ ನಡುವೆ ಕಂದಕ ಸೃಷ್ಟಿ ಮಾಡಲಿಲ್ಲ. ಜ್ಞಾನ ಯೋಗಿಯಾಗಿ ನಮ್ಮನ್ನು ಅಗಲಿದ್ದಾರೆ ಎಂದು ತಿಳಿಸಿದರು.
ಸಿವಿಲ್ ಕಿರಿಯ ನ್ಯಾಯಾಧೀಶ ಫಕ್ಕಿರಪ್ಪ ಕೆಳಗೆರಿ ಮಾತನಾಡಿ, ನಾನೂ ಅವರ ಪ್ರವಚನಗಳಿಂದ ಪ್ರಭಾವಿತಳಾದ, ಅದು ಮರೆಯಲಾಗದ ದಿನವಾಗಿದೆ. ಬಡವರಿಗೆ ಹೆಚ್ಚಿನ ಅದ್ಯತೆ ನೀಡುತ್ತಿದ್ದರು, ಅವರೊಬ್ಬ ಜ್ಞಾನ ಯೋಗಿಯಾಗಿದ್ದರು. ಅವರನ್ನು ಕಾಣಲು ಅಪಾರ ಜನಸ್ತೋಮ ಸೇರುತ್ತಿತ್ತು ಅವರ ಪ್ರವಚಕ್ಕೆ ಹೋದರೆ ಊಟ ಸಹ ಮಾಡುವುದಿಲ್ಲ. ಅವರ ಮಾತುಗಳು ಅರ್ಥಗರ್ಬಿತವಾಗಿರುತ್ತಿದ್ದವು ಎಂದರು.
ವಕೀಲರ ಸಂಘದ ಅಧ್ಯಕ್ಷ ಮತ್ತಿಹಳ್ಳಿ ಅಜ್ಜಪ್ಪ ಮಾತನಾಡಿ, ತನಗಾಗಿ ಬದುಕದೆ, ಸಮಾಜಕ್ಕಾಗಿ ಬದುಕಿದ ಮಹಾನ್ ಸಂತ್ ಸಿದ್ದೇಶ್ವರ ಶ್ರೀಗಳಾಗಿದ್ದು, ಅವರ ಸರಳತೆಯ ಜೀವನದ ಶೈಲಿ ಮೈಗೂಡಿಸಿಕೊಳ್ಳಬೇಕು ಎಂದ ಅವರು ಪದವಿ, ಸಂಪತ್ತು ಎ0ದು ಅಪೇಕ್ಷಮಾಡದೆ ಅವರಿಗಾಗಿ ಬಂದ ಪ್ರಶಸ್ತಿ, ಗೌರವಗಳನ್ನು ನಯವಾಗಿ ತಿರಸ್ಕರಿಸಿದವರು ಎಂದರು.
ವಕೀಲ ಸಂಘದ ಮಾಜಿ ಅಧ್ಯಕ್ಷ ಕೆ.ಜಗಪ್ಪ ಮಾತನಾಡಿ, ಶ್ರೀಗಳ ಕುರಿತಾಗಿ ಅವರ ಹಾಡುಗಳು, ಪ್ರವಚನಗಳು ಸಹ ನನನ್ನು ಆಕರ್ಷಿಸಿತು.ಯೋಗದ ಜೊತೆಗೆ ದೇಹ, ಮನಸ್ಸು ಮೂಲಕ ಜ್ಞಾನದ ಕಡೆಗೆ ಹೋಗಿದ್ದ ಅವರು ಸರಳ ಅದ್ಭುತ ವ್ಯಕ್ತಿಗಳಾಗಿದ್ದರು. ಎಂದರು.
ಸಂಗೀತ ಶಿಕ್ಷಕ ಬಸವರಾಜ ಭಂಡಾರಿ ಭಕ್ತಿಯ ಸಂಗೀತ ಸೇವೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶಗೌಡ, ವಕೀಲರಾದ ತಿಮ್ಮಾಪುರ ತಿಪ್ಪೇಶ್, ಸಿ.ಹನುಮಂತಪ್ಪಪಿ. ಜಗದೀಶಗೌಡ,ತೆಲಗಿ ಮಠದ ಉಮಾಯ್ಯ, ಕಣಿವಿಹಳ್ಳಿ ಮಂಜುನಾಥ, ರಾಮನಗೌಡ, ಚಂದ್ರೇಗೌಡ, ಯ, ಐಗೋಳ ಚಿದಾನಂದ, ಕೆ.ಲಿಂಗಾನಂದ, ವೀರುಪಾಕ್ಷಪ್ಪ, ಮುತ್ತಣ್ಣ, ಸೇರಿದಂತೆ ಇತರರು ಇದ್ದರು.