ಸಿದ್ದೇಶ್ವರ ಸ್ವಾಮಿಗಳಿಗೆ ಜನರ ಬಗ್ಗೆ ಬಹಳ ಕಾಳಜಿ ಇತ್ತು ; ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ

ವಿಜಯಪುರ : ಜ.10:”ಎಲ್ಲರೂ ಮನುಷ್ಯರಾಗಿ ಹುಟ್ಟುತ್ತಾರೆ, ಮನುಷ್ಯರಾಗಿ ಸಾಯುತ್ತಾರೆ. ಆದರೆ, ಸಿದ್ದೇಶ್ವರ ಸ್ವಾಮಿಗಳು ಮನುಷ್ಯರಾಗಿ ಜನಿಸಿವರು ಇಂದು ದೇವರಾಗಿ ದೇಹತ್ಯಾಗ ಮಾಡಿದವರು. ಮನುಷ್ಯ ದೇವರಾಗುವುದು ಅಷ್ಟು ಸುಲಭವಲ್ಲ ಅದಕ್ಕೆ ಸಾಧನೆ ಬೇಕು, ಕೇವಲ ಒಂದೆರಡು ದಿನಗ¼ ,ವರ್ಷಗಳ ಸಾಧನೆ ಸಾಕಾಗೋಲ್ಲ , ಸಾಧನೆ, ನಿಂತರವಾಗಿರಬೇಕು. ಹಾಗೆಯೇ ಬದುಕಿ ದೇವರೆಂದು ಕರೆಸಿಕೊಂಡವರು ಶ್ರೀ ಸಿದ್ದೇಶ್ವರ ಸ್ವಾಮಿಗಳು, ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಅಖ್ಯಾಂತ ಭಕ್ತಸ್ತೋಮವೇ ಇದನ್ನು ಸಾಕ್ಷೀಕರಿಸುತ್ತದೆ” ಎಂದು ಸಂಜೀವಾಚಾರ್ಯ ಮಧಬಾವಿ ಹೇಳಿದರು.

ದಿನಾಂಕ 8, ರವಿವಾರದಂದು ನಗರದ ಬಿ.ಡಿ.ಈ ಸೊಸೈಟಿ ನಲ್ಲಿ ನಡೆದ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ(ರಿ) ನೇತೃತ್ವದಲ್ಲಿ ವಿಜಯಪುರ ಬ್ರಾಹ್ಮಣ ಸಮುದಾಯ ವತಿಯಿಂದ ನಡೆದ ಸಿದ್ದೇಶ್ವರ ಸ್ವಾಮಿಗಳ ಶ್ರದ್ಧಾಂಜಲಿ ಸಭೆಯಲ್ಲಿ ಮಾತಾಡಿದ ಅವರು “ನುಡಿದಂತೆ ನಡೆಯಬೇಕು , ಬದುಕಿದಂಗತೆ ನುಡಿಯಬೇಕು , ನಿರ್ಮೋಹಿ, ವೈರಾಗಿಗಳಾಗಿ ಬದುಕಿದ ಸಿದ್ದೇಶ್ವರ ಸ್ವಾಮಿಗಳು ಶತಮಾನದ ಸಂತರಾಗಿದ್ದಾರೆ ಎಂದರು. ಖ್ಯಾತ ಸಂಶೋಧಕರಾದ ಕೃಷ್ಣ ಕೊಲ್ಹಾರಕುಲಕರ್ಣಿ ಮಾತಾಡಿ – “ಸಿದ್ದೇಶ್ವರ ಸ್ವಾಮಿಗಳು ಎಂದಿಗೂ ಕಾವಿ ಧರಿಸಲಿಲ್ಲ, ಶುಭ್ರತೆಯ ಸಂಕೇತವಾಗಿ ಯಾವಾಗಲೂ ಶ್ವೇತವಸ್ತ್ರಗಳನ್ನು ಧರಿಸಿತ್ತಿದ್ದರು. ಒಬ್ಬ ಸಾಧಾರಣ ವ್ಯಕ್ತಿ ತನ್ನ ಸದ್ಗುಣಗಳಿಂದ , ನಿರ್ಮೋಹದಿಂದ , ಆಡಂಬರವಿಲ್ಲದ ಜೀವನ ಶೈಲಿ ಹಾಗೂ ನಾಲ್ಕು ಒಳ್ಳೆಯ ಮಾತುಗಳಿಂದ ದೇವರಾಗಬಲ್ಲರು ಎಂಬುದನ್ನು ಸಿದ್ದೇಶ್ವರ ಸ್ವಾಮಿಗಳು ತೋರಿಕೊಟ್ಟಿದ್ದಾರೆ. ವೇದ , ಉಪನಿಷತ್ತು ,ಭಗವದ್ಗೀತೆ, ಪುರಾಣ, ವಚನಗಳನ್ನು ಅತ್ಯಂತ ಸರಳವಾಗಿ ಅನಕ್ಷರಸ್ಥರಿಗೂ ತಿಳಿಯುವಂತೆ ಪಕ್ಷಿ, ಪ್ರಾಣಿಗಳ ಕಥೆಗಳ ಮೂಲಕ ಹೇಳುವ ಅವರ ಪ್ರವಚನ ಶೈಲಿ ಭಕ್ತರನ್ನು ಮಂತ್ರಮುಗ್ಧರನ್ನಾಗಿ ಮಾಡಿಸುತ್ತಿತ್ತು.ವೈರಾಗಿಗಾಳದ ಅವರಿಗೆ ಜನರು, ಜಿಲ್ಲೆ , ರಾಜ್ಯ ದೇಶಗಳ ಕುರಿತು ಅಪಾರ ಅಭಿಮಾನ ಮತ್ತು ಕಾಳಜಿ ಇತ್ತು. ವಿಜಯಪುರ ಜಿಲ್ಲೆಯ ನೀರಾವರಿ ಮತ್ತು ಕುಡಿಯುವ ನೀರಿಗಾಗಿ ಚಿಂತನೆ ಮಾಡುತ್ತಿದ್ದರು’ ಎಂದು ಸಿದ್ದೇಶ್ವರ ಸ್ವಾಮಿಗಳೊಂದಿಗಿನ ನಲವತ್ತು ವರ್ಷಗಳ ಒಡನಾಟವನ್ನು ಹಂಚಿಕೊಂಡರು.

ಪತ್ರಕರ್ತರಾದ ವಾಸು ಹೆರಕಲ್ ಮಾತನಾಡಿ ‘ಬಿಜ್ಜರಗಿಯ ಭಾಸ್ಕರಾಚಾರ್ಯರ ಕುರಿತು ಬರೆದ ಸಣ್ಣ ಲೇಖನ ನೋಡಿ ಭಾಸ್ಕರಾಚಾರ್ಯ 900 ನೇ ಜಯಂತಿ ಆಚರಿಸುವಂತೆ ಪ್ರೇರಣೆ ತುಂಬಿದರು, ದೇಹ ತ್ಯಜಸುವ ಮುನ್ನದಿನ ಭಾಸ್ಕರಾಚಾರ್ಯ ಕ್ಯಾಲೆಂಡರ ಬಿಡುಗಡೆ ಮಾಡಿದರ ಕುರಿತು ಸ್ಮರಿಸಿಕೊಂಡರು. ವೇದಮೂರ್ತಿ ಪಂ. ಅಜಿತಾಚಾರ್ಯ ಹನಗಂಡಿ , ಕೃಷ್ಣ ಭಟ ಗಲಿಗಲಿ ಹಾಗೂ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಜಿಲ್ಲಾಧ್ಯಕ್ಷರಾದ ಮುಕುಂದ ಕುಲಕರ್ಣಿ ಸಿದ್ದೇಶ್ವರ ಸ್ವಾಮಿಗಳ ಜೀವನದ ಸಂಗತಿಗಳನ್ನು ನೆನಪಿಕೊಂಡರು. ಮನೋಜ ಗಿರಗಾಂವಿ ನಿರೂಪಣೆ ಮಾಡಿದರು. ಯುವ ಸಾಹಿತಿ ರಾಹುಲ್ ಮರಳಿ ಸಿದ್ದೇಶ್ವರ ಸ್ವಾಮಿಗಳ ಕುರಿತು ಬರೆದ ಕವನ ವಾಚನ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಕೃಷಾಜಿ ಕುಲಕರ್ಣಿ ಪ್ರ.ಕಾರ್ಯದರ್ಶಿ ಪವನ್ ಕುಲಕರ್ಣಿ, ಜಿಲ್ಲಾ ಖಜಾಂಚಿ ವೆಂಕಟೇಶ್ ಗುಡಿ , ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಮೀರ ಕುಲಕರ್ಣಿ,ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಮೀನಾಕ್ಷಿ ಸಾವಳಗಿ , ಮಹಿಳಾ ಪ್ರ. ಕಾರ್ಯದರ್ಶಿ ಮೀತಾ ದೇಸಾಯಿ , ನಗರ ಅಧ್ಯಕ್ಷ ಪ್ರಶಾಂತ ದೇಶಪಾಂಡೆ,ನಗರ ಉಪಾಧ್ಯಕ್ಷ ರಮೇಶ ಕುಲಕರ್ಣಿ,ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಮಹೇಶ ದೇಶಪಾಂಡೆ,ನಗರ ಮಹಿಳಾ ಅಧ್ಯಕ್ಷ ಮನೀಷಾ ಕುಲಕರ್ಣಿ,ನಗರ ಯುವ ಅಧ್ಯಕ್ಷ ವಾರೀಶ ಕುಲಕರ್ಣಿ, ಶ್ರೀರಂಗ ಪುರಾಣಿಕ ,ವಾದಿರಾಜ ರಘುವೀರ,ಸುಧೀಂದ್ರ ಇಲ್ಲಾಳ,ಪ್ರಭಂಜನ್,ಶಂಕರ್,ವರುಣ,ಶ್ರೀರಾಕ್ಷ ಸೊನ್ನ, ಲಕ್ಷೀ ಆಲಮೇಲ್ , ಹಾಗೂ ಎಲ್ಲ ಪದಾಧಿಕಾರಿಗಳು ಹಾಗೂ “ಆಲ್ ಇಂಡಿಯಾ ಬ್ರಾಹ್ಮನ್ ಆರ್ಗನೈಸೇಶನ್” ಪದಾದಿಕಾರಿಗಳಾದ ದೀಪಕ ಕುಲಕರ್ಣಿ , ರಜನಿಕಾಂತ ಕುಲಕರ್ಣಿ , ಸಂತೋಷ ದೇಶಪಾಂಡೆ ವ, ಗೋವಿಂದ ದೇಶಪಾಂಡೆ ಹಾಗೂ ಡಾ.ಬಿಂದು ಮಾಧವ ಯಂಡಿಗೇರಿ , ಕಿರಣ ಹರಿದಾಸ , ಬಾಬಾಚಾರ್ಯ ಪುರಾಣಿ, ಪಿ.ಬಿ ಹಂಗರಗಿ, ದೀಪಕ ಕುಲಕರ್ಣಿ , ಗಿರೀಶ ಕಾಟವಿ ಕುಲಕರ್ಣಿ , ತ್ರಿಭಾಷಾ ಸಾಹಿತಿ ಜಿ.ಆರ್ . ಕುಲಕರ್ಣಿ ಸೇರಿದಂತೆ ಬ್ರಾಹ್ಮಣ ಸಮುದಾಯದ ಅನೇಕರು ಉಪಸ್ಥಿತರಿದ್ದರು.