ಸಿದ್ದೇಶ್ವರ ಶ್ರೀಗಳ ಜೀವನ ಎಲ್ಲರಿಗೂ ಆದರ್ಶ


ಶಿರಹಟ್ಟಿ,ಜ.8: ಜ್ಞಾನ ಸಂತ ವಿಜಯಪುರದ ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿಗಳು ಇನ್ನಿಲ್ಲ ಎನ್ನುವುದು ಅರಿಗಿಸಿಕೊಳ್ಳಲಾಗದ ಸಂಗತಿಯಾಗಿದ್ದು, ಜಗತ್ತಿನಾದ್ಯಂತವಾಗಿ ಬದುಕಿನ ಅರಿವಿನ ಜ್ಞಾನವನ್ನು ಉಣಬಡಿಸಿದ ಸಂತನಿಗೆ ವಿದಾಯ ಹೇಳುವುದು ಕಷ್ಟವಾಗುತ್ತಿದೆ ಎಂದು ವರ್ತಕ ಸಂಘದ ಅಧ್ಯಕ್ಷ ಸುರೇಶ ಕಪ್ಪತ್ತನವರ ಹೇಳಿದರು.
ಅವರು ಪಟ್ಟಣದ ಗಾಂಧಿ ವೃತ್ತದಲ್ಲಿ ಶಿರಹಟ್ಟಿ ವರ್ತಕ ಸಂಘದಿಂದ ಶ್ರೀ ಶಿದ್ದೇಶ್ವರ ಮಹಾಸ್ವಾಮಿಜಿಗಳಿಗೆ ಶೃದ್ದಾಂಜಲಿ ನಿಮಿತ್ಯ ಮೇಣದ ಬತ್ತಿ ಬೆಳಗಿಸುವ ಮೂಲಕ ಶೃದ್ದಾಂಜಲಿಯನ್ನು ಅರ್ಪಿಸಿ ಮಾತನಾಡಿದರು.
ಶಿರಹಟ್ಟಿ ಯ ಭಾಗದಲ್ಲಿ ಮುಳಗುಂದ ಪಟ್ಟಣದ ಪ್ರವಚನ ಕಾರ್ಯಕ್ರಮ ಜರುಗಿತ್ತಿರುವ ಸಂದರ್ಭದಲ್ಲಿ ಶಿರಹಟ್ಟಿ ಆಗಮಿಸಿ ಶ್ರೀ,.ಜ.ಫಕ್ಕಿರೇಶ್ವರ ಸಂಸ್ಥಾನ ಮಠಕ್ಕೆ ಬೇಟಿ ನೀಡಿದ್ದ ಪಟ್ಟಣದ ಜನರಗೆ ಆಶಿರ್ವಚನವನ್ನು ದಯಪಾಲಿಸಿದ್ದರು. ಅವರ ಜ್ಞಾನಕ್ಕೆ ಸರಿದೂಗುವ ವ್ಯೆಕ್ತಿ ಪ್ರಸ್ತುತ ಸಮಾಜದಲ್ಲಿ ವಿರಳವಾಗಿದ್ದು, ಸಮಾಜವನ್ನು ಸನ್ಮಾರ್ಗದತ್ತ ಕೊಂಡಯ್ಯಲು ತಮ್ಮ ಉತ್ತಮವಾದ ಮಾತುಗಳ ಮೂಲಕ ಪರಿವರ್ತನೆಗೊಳಿಸಿಕಲೆಯನ್ನು ಹೊಂದಿದವರಾಗಿದ್ದರು. ಇವರು ತಮ್ಮ ಜೀವನ ಅತ್ಯಂತ ಸರಳ ಮತ್ತು ವಿರಳ ರೀತಿಯಲ್ಲಿ ಬದುಕಿರುವುದು ನಮೆಗೆಲ್ಲ ಮಾಧರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ, ವಿಶ್ವನಾಥ ಕಪ್ಪತ್ತನವರ, ವಾಯ್.ಎಸ್.ಪಾಟೀಲ್.ಚಂದ್ರಣ್ಣ ನೂರಶೆಟ್ಟರ, ಪ್ರಕಾಶ ಬೋರಶೆಟ್ಟರ, ಉಮೇಶ ತೇಲಿ, ಬಸವರಾಜ ಹೊಸೂರ, ಫಕ್ಕಿರೇಶ ರಟ್ಟಿಹಳ್ಳಿ, ಮುತ್ತಣ್ಣ ಮಜ್ಜಗಿ, ದೊಡ್ಡಬಸಪ್ಪ ಪಾಟೀಲ್, ಜಿ.ಆರ್.ಸರ್ಜಾಪೂರ, ಹೆಚ್.ಎಮ್.ಪಲ್ಲೇದ, ಬಸವರಾಜ ಭೋರಶೆಟ್ಟರ, ಸಂದೇಶ ಗಾಣಿಗೇರ, ಪ್ರಭು ಹಲಸೂರ, ಬಕ್ಸದ, ಕೆ.ಎ.ಬಳಿಗೆರ,ರಾಜು ಅಕ್ಕಿ,ಡಾ.ರಮೇಶ ಕಪ್ಪತ್ತನವರ, ಗೌತಮ ಕಪ್ಪತ್ತನವರ, ಮುಂತಾದವರು ಉಪಸ್ಥಿತರಿದ್ದರು.