
ವಿಜಯಪುರ, ಜ. ೧- ಜ್ಞಾನಯೋಗಾಶ್ರಮದ ಪೂಜ್ಯರ ಹೆಲ್ತ್ ರಿಪೋರ್ಟ್ ಬಿಡುಗಡೆ ಆಗಿದೆ. ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಎಸ್. ಬಿ. ಪಾಟೀಲ್ ಹೇಳಿಕೆ ನೀಡಿದ್ದು ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಪಲ್ಸ್ ರಕ್ತದೊತ್ತಡ ಸ್ಥಿರವಾಗಿದ್ದು, ಭಕ್ತರು ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಹಾರ ಸೇವನೆ ಕಡಿಮೆ ಆಗಿದೆ ಎಂದರು. ಗಂಜಿ ನೀರು ಸೇವಿಸುತ್ತಿದ್ದಾರೆ.
ಆರೋಗ್ಯ ಸ್ಥಿರವಾಗಿರುವ ಹಿನ್ನಲೆಯಲ್ಲಿ ಚಿಕಿತ್ಸೆಯಲ್ಲಿ ಬದಲಾವಣೆ ಇಲ್ಲ. ಡಾ.ಎಸ್.ಬಿ. ಪಾಟೀಲ್ ತಿಳಿಸಿದರು.
ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಶ್ರೀಗಳ ದರ್ಶನವನ್ನು ವಚನಾನಂದ ಶ್ರೀಗಳು ಪಡೆದರು. ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದು ಸಿದ್ಧೇಶ್ವರ ಶ್ರೀಗಳೊಂದಿಗೆ ನಾಲ್ಕೈದು ಗಂಟೆ ಇದ್ದೇವೆ, ಅವರು ಆರಾಮವಾಗಿದ್ದಾರೆ, ಯಾವುದೇ ತೊಂದರೆ ಇಲ್ಲ. ಸುಮ್ಮನೇ ಊಹಾಪೂಹ ಬೇಡ, ಶ್ರೀಗಳು ಆರೋಗ್ಯವಾಗಿದ್ದಾರೆ. ಎಲ್ಲೆಡೆ ಆರೋಗ್ಯಪೂರ್ಣ ವಾತಾವರಣ ಇದೆ ಎಂದಿದ್ದಾರೆ. ಸ್ವಾಮೀಜಿಗಳು ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಉಸಿರಾಟಕ್ಕಾಗಿ ಆಮ್ಲಜನಕದ ಕೊರತೆ ಇದೆ, ಹಾಗಾಗಿ ಆಗಾಗ ಆಕ್ಸಿಜನ್ ನೀಡಲಾಗುತ್ತಿದೆ ಎಂದರು.ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಅನಾರೋಗ್ಯ ಹಿನ್ನೆಲೆಯಲ್ಲಿ ವಿಜಯಪುರಕ್ಕೆ ನಾಡಿನಾದ್ಯಂತ ಹೆಚ್ಚಿನ ಭಕ್ತರು ಆಗಿಮಿಸುತ್ತಿರುವ ಬೆನ್ನಲ್ಲೇ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ. ವಿಜಯಪುರದ ಜ್ಞಾನಯೋಗಾಶ್ರಮ ಸುತ್ತಲೂ ಹೆಚ್ಚಿನ ಭದ್ರತೆಗಾಗಿ ಖಾಕಿ ಪಡೆ ನಿಯೋಜನೆ ಮಾಡಿದೆ. ಗದಗ, ಬಾಗಲಕೋಟೆ ಜಿಲ್ಲೆಯಿಂದ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ. ಗದಗ ಬಾಗಲಕೋಟೆ ಜಿಲ್ಲೆಯಿಂದ ಹೆಚ್ಚಿನ ಪೊಲೀಸ್ ಪಡೆ ಆಗಮಿಸುತ್ತಿದೆ.ಡಿಎಸ್ಪಿ -೫,ಸಿಪಿಐ -೨೦, ಪಿಎಸ್ಐ -೫೦, ಎಎಸ್ಐ -೧೦೦,ಸಿಎಚ್ ಸಿ-ಸಿಪಿಸಿ-೧೦೦೦ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.ಇನ್ನೂ ಆಶ್ರಮಕ್ಕೆ ಆಗಮಿಸುತ್ತಿರುವ ಭಕ್ತರಿಗೆ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿದೆ.
ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ವ್ಯವಸ್ಥೆ ಮಾಡ ಲಾಗಿದೆ. ಸಾವಿರಾರು ಭಕ್ತರು ಆಶ್ರಮಕ್ಕೆ ಆಗಮಿಸುತ್ತಿರೊದ್ರಿಂದ ಪ್ರಸಾದ ವಿತರಣೆಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ.