ಇಂಡಿ:ಜೂ.17: ವಿಜಯಪೂರ ಜ್ಞಾನ ಯೋಗಾಶ್ರಮದ ಪರಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಕುರಿತು ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಮುಖ್ಯ ಮಂತ್ರಿಗಳಿಗೆ ಹಾಗೂ ಪ್ರಾಥಮಿಕ ,ಪ್ರೌಢ ಶಿಕ್ಷಣ ಸಚಿವರಿಗೆ ಆಗ್ರಹಿಸಿದ್ದಾರೆ.
ನಡೇದಾಡುವ ದೇವರೆಂದು ಖ್ಯಾತರಾದ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳು ವಿಶ್ವದ ಜ್ಞಾನಕೋಶವಿದ್ದಂತೆ , ಮಹಾಸ್ವಾಮಿಗಳ ಜ್ಞಾನ ದಾಸೋಹದಿಂದ ಇಡೀ ವಿಶ್ವದ ಜನತೆ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಸತ್ಯ,ನ್ಯಾಯ, ನೀತಿ,ಧರ್ಮದ ದಾರಿಯಲ್ಲಿ ಬಾಳುತ್ತಿದ್ದಾರೆ. ಇಂತಹ ಮಹಾಂತರನ್ನು ಎರಡನೆ ವಿವೇಕಾನಂದರು ಎಂದರೆ ತಪ್ಪಾಗಲಾರದು ಪೂಜ್ಯ ಮಹಾಸ್ವಾಮಿಗಳು ನಿಸರ್ಗ, ಪ್ರಕೃತಿಯಲ್ಲಿನ ಚರಾಚರ ವಸ್ತುಗಳನ್ನು ಪ್ರೀತಿಸುತ್ತಿದ್ದರು ದೇವರನ್ನು ನಿಸರ್ಗದಲ್ಲಿ ಪ್ರತಿ ಜೀವಿಗಳಲ್ಲಿ ಕಾಣಿ ಎನ್ನುವ ಸಂದೇಶ ಅವರದಾಗಿತ್ತು ಇಂದಿನ ಯುವ ಪಿಳಿಗೆ ಒಳ್ಳೇಯ ದಾರಿಯಲ್ಲಿ ಸಾಗಬೇಕಾದರೆ ಇಂತಹ ಮಹಾನ್ ದಾರ್ಶನಿಕ ಪುರುಷರ ಜೀವನ ಆಧಾರಿತ ಹಾಗೂ ಪ್ರವಚನಗಳ ಸಾರಂಶಗಳನ್ನು ಕರ್ನಾಟಕ ಸರಕಾರ ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು ಎಂದು ಹೇಳಿದರು.