ಸಿದ್ದೇಶ್ವರ ದೇವಾಲಯ ನಿರ್ಮಾಣದ ಅಡಿಗಲ್ಲು ಸಮಾರಂಭ

ಕಲಬುರಗಿ: ನ.15:ಆಳಂದ ತಾಲೂಕಿನ ಧರ್ಮವಾಡಿ ಗ್ರಾಮದಲ್ಲಿ ಶ್ರೀ ಮಹಾರಾಯ ಸಿದ್ದೇಶ್ವರ ಸೇವಾ ಸಂಘ ಧರ್ಮವಾಡಿ ವತಿಯಿಂದ ಶ್ರೀ ಮಹಾರಾಯ ಸಿದ್ದೇಶ್ವರ ದೇವಾಲಯ ನಿರ್ಮಾಣದ ಅಡಿಗಲ್ಲು ಸಮಾರಂಭ ಹಾಗೂ ನುರಿತ ತಜ್ಞ ವೈದ್ಯರಿಂದ ಉಚಿತ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಯೆ, ರಕ್ತದಾನ ಶಿಬಿರಕ್ಕೆ ಚಿನ್ಮಯಗಿರಿಯ ಶ್ರೀ ಮಹಾಂತೇಶ್ವರ ಮಠದ ಶ್ರೀ.ಷ.ಬ್ರ.ವೀರಮಹಾಂತ ಶಿವಾಚಾರ್ಯರು ಉದ್ಘಾಟಿಸಿದರು.
ದಂಗಾಪುರದ ಗುರುದಾಸ ನಾಗಪ್ಪ ಮುತ್ಯಾ, ಬಿಜೆಪಿ ಮುಖಂಡ ರಾಮಚಂದ್ರ ಅವರಳ್ಳಿ, ಮಾಜಿ ಜಿ.ಪಂ.ಸದಸ್ಯ ವೀರಣ್ಣ ಮಂಗಾಣಿ, ಕ.ಕ.ರ.ಸಾರಿಗೆ ನಿಗಮದ ಕೂಲಿ ಸಮಾಜದ ಅಧ್ಯಕ್ಷ ಶ್ರೀಮಂತ ಎಸ್.ಜಮಾದಾರ, ಡಿ.ಕೆ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ಗೌಡಪ್ಪಗೌಡ ಜಿ.ಪಾಟಿಲ, ಉಪಾಧ್ಯಕ್ಷ ಬಾಬುರಾವ ಕುಲಕರ್ಣಿ, ಉದ್ಯಮಿ ಸಂದೀಪಕುಮಾರ ಕಿರಣಗಿ, ಬಂಜಾರ ಸಮಾಜದ ಮುಖಂಡ ರಾಜು ಪವಾರ, ಸರ್ಯಕಾಂತ ಎಂ.ಕೆ, ವಿಶಾಲ ಜಮಾದಾರ, ಶಂಕರ ಜಮಾದಾರ, ಅನೀಲ ಜಮಾದಾರ, ವೀರೆಶ ರುಪನೂರ, ಶ್ರೀಪಾದ ಜಮಾದಾರ, ಕೃಷ್ಣಾ ರೇಡ್ಡಿ, ರಾಜೇಂದ್ರ ಜಮಾದಾರ, ಅಪರಾಯಾ ಜಮಾದಾರ, ವಿಠ್ಠಲ ಜಮಾದಾರ, ಚಂದ್ರಾಮಪ್ಪಾ, ಶಿವಾನಂದ ಸಾಗರ ಇದ್ದರು.