ಸಿದ್ದೇಶ್ವರ ದೇವಸ್ಥಾನ ಕಟ್ಟಡ ಉದ್ಘಾಟನಾ

ಅಫಜಲಪುರ :ಮಾ.13: ತಾಲೂಕಿನ ಸುಕ್ಷೆತ್ರ ದೇಸಾಯಿ ಕಲ್ಲೂರ್ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನ ಕಟ್ಟಡ ಉದ್ಘಾಟನಾ ಹಾಗು ಲಕ್ಷ ದಿಪೆÇೀತ್ಸವ ಮತ್ತು ಅಡ್ಡಪಲ್ಲಕಿ ಮಹೋತ್ಸವ ಕಾರ್ಯಕ್ರಮವನ್ನು ಶ್ರೀಮದ್ ಉಜ್ಜಯಿನಿ ಸದ್ದರ್ಮ ಸಿಂಹಾಸನದಿಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಅಮೃತ ಹಸ್ತದಿಂದ ಉದ್ಘಾಟಿಸಿದರು.
ಸಂದರ್ಭದಲ್ಲಿ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು,ಶಾಸಕ ಎಂ. ವೈ ಪಾಟೀಲ್,ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ,ಪ್ರಥಮ ದರ್ಜೆ ಗುತ್ತಿಗೆದಾರ ಎಸ್ ವೈ ಪಾಟೀಲ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ನಿತೀನ್ ಗುತ್ತೇದಾರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅರುಣಕುಮಾರ್ ಎಂ. ವೈ . ಪಾಟೀಲ್, ಮಖಂಡರಾದ ನಾನಾಸಾಹೇಬಗೌಡ ಪಾಟೀಲ್ , ದೇಶಮುಖ ಮನೆತನದ ಎಲ್ಲಾ ಮುಖಂಡರು ಶ್ರೀ ಸಿದ್ದೇಶ್ವರ ದೇವಸ್ಥಾನ ಕಮಿಟಿಯ ಎಲ್ಲಾ ಸಕಲ ಪದಾಧಿಕಾರಿಗಳು ಮತ್ತು ತಾಲೂಕಿನ ಎಲ್ಲಾ ಸ್ವಾಮೀಜಿಗಳು ಹಾಗು ರಾಜಕೀಯ ಮುಖಂಡರು. ಮತ್ತು ಸಮಸ್ತ ದೇಸಾಯಿ ಕಲ್ಲೂರ ಗ್ರಾಮದ ಎಲ್ಲಾ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ಧರು.