ಸಿದ್ದೇಶ್ವರಸ್ವಾಮಿ ದೇಗುಲದ ಲೋಕಾರ್ಪಣೆ

ಸಂಜೆವಾಣಿ ವಾರ್ತೆ
ತಿ.ನರಸೀಪುರ: ಸೆ.04:- ತಾಲೂಕಿನ ಚಿದ್ರವಳ್ಳಿ ಗ್ರಾಮದಲ್ಲಿ 2 ಕೋಟಿ ರೂಗಳ ವೆಚ್ಚದಲ್ಲಿ ಜೀರ್ಣೋದ್ದಾರಗೊಂಡ ಶ್ರೀ ಸಿದ್ದೇಶ್ವರ ದೇವಾಲಯವು ಇಂದು ಲೋಕಾರ್ಪಣೆಗೊಂಡಿತು
ಕಳೆದ ಮೂರು ದಿನಗಳಿಂದಲೂ ದೇಗುಲದ ಉದ್ಘಾಟನೆಗಾಗಿ ಹಲವು ಪೂಜೆ ಪುನಸ್ಕಾರ ಕಾರ್ಯಕ್ರಮಗಳು ನಡೆದು ಇಂದು ಅದ್ದೂರಿಯಾಗಿ ಲೋಕಾರ್ಪಣೆಗೊಂಡಿತು.ದೇವಾಲಯ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಸಿದ್ದೇಶ್ವರಸ್ವಾಮಿ ಭಕ್ತರು ಸಚಿವರಾಗಿದ್ದ ಸಾ.ರಾ. ಮಹೇಶ್ ಅವರಿಗೆ ದೇಗುಲದ ದುರಸ್ಥಿಗಾಗಿ ಮನವಿ ಸಲ್ಲಿಸಿದ್ದರು.ಸಚಿವರು ದೇಗುಲ ಪುನರ್ ನಿರ್ಮಾಣಕ್ಕಾಗಿ ಸರ್ಕಾರದ ವತಿಯಿಂದ 1ಕೋಟಿ ರೂಗಳ ಅನುದಾನ ಬಿಡುಗಡೆಗೊಳಿಸಿದ್ದರು.ಅಲ್ಲದೆ ಸ್ಥಳೀಯರು ಮತ್ತು ದಾನಿಗಳ ಧನ ಸಹಾಯದೊಂದಿಗೆ ಸುಮಾರು 2ಕೋಟಿಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಸುಂದರ ದೇಗುಲ ಇಂದು ಉದ್ಘಾಟನೆಗೊಂಡಿತು.
ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಭಾವಪುನೀತರಾದರು.ದೇವಾಲಯದ ಟ್ರಸ್ಟ್ ವತಿಯಿಂದ ಸಾವಿರಾರು ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಯನ್ನು ನಡೆಸಲಾಯಿತು.
ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದ್ರಶೇಖರ್,ಸದಸ್ಯ ಮಹೇಶ್, ಮುಖಂಡರಾದ ನವೀನ್,ನಂಜುಂಡಯ್ಯ, ರಾಮಚಂದ್ರ, ಶಂಕರ, ರೇವಣ್ಣ, ಪುಟ್ಟಸ್ವಾಮಿ, ಸಿದ್ದರಾಜು,ಶ್ರೀನಿವಾಸ್, ಚನ್ನೇಗೌಡ, ಮಹದೇವಣ್ಣ, ಶಿವಣ್ಣ, ಮಾಧು ಭಾಗವಹಿಸಿದ್ದರು.