ಸಿದ್ದೇಶ್ವರರ ಪ್ರವಚನದಲ್ಲಿ ಶಾಂತಿ ಶಿಸ್ತು ಎಂಬುದು ಎದ್ದು ಕಾಣುತ್ತಿತ್ತು :ಕಿಶೋರಕುಮಾರ

ತಾಳಿಕೋಟೆ:ಜ.5: ನಡೆದಾಡುವ ದೇವರೆಂದೇ ಇಡೀ ವಿಶ್ವದ ಜನತೆಯಿಂದ ಕರೆಯಿಸಿಕೊಂಡಿದ್ದ ವಿಜಯಪೂರ ಜ್ಞಾನಯೋಗಿ ಆಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ಅವರು ಹೇಳುತ್ತಿದ್ದ ಪ್ರವಚನಗಳ ಕಾರ್ಯಕ್ರಮಗಳಲ್ಲಿ ಶಾಂತಿ ಸಿಸ್ತು ಎಂಬುದು ಎದ್ದು ಕಾಣುತ್ತಿತ್ತು ಇದರಿಂದ ಸೂಜಿ ಬಿದ್ದರೂ ಸಪ್ಪಳ ಕೇಳಿಸುತ್ತದೆ ಎಂಬ ಭಾವನೆ ಪ್ರವಚನ ಆಲಿಸುತ್ತಿದ್ದ ಭಕ್ತಾಧಿಗಳಲ್ಲಿ ಚರ್ಚೆ ನಡೆಯುತ್ತಿತ್ತೆಂದು ಎಸ್.ಕೆ.ಪ.ಪೂ.ಕಾಲೇಜ್ ಪ್ರಾಚಾರ್ಯ ಕಿಶೋರಕುಮಾರ ಅವರು ನುಡಿದರು.
ಬುಧವಾರರಂದು ತಾಳಿಕೋಟೆ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್‍ವತಿಯಿಂದ ಶ್ರೀ ಸಿದ್ದೇಶ್ವರ ಶ್ರೀಗಳ ಲಿಂಗೈಕ್ಯತೆ ಕುರಿತು ಎಸ್.ಕೆ.ಪ.ಪೂ.ಕಾಲೇಜ್ ಆವರಣದಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಸಿದ್ದೇಶ್ವರಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡುತ್ತಿದ್ದ ಅವರು ಜ್ಞಾನಯೋಗಿ ಶ್ರೀಗಳು ಅಮರರಾಗಿದ್ದಾರೆ ಜ್ಞಾನ ಜ್ಯೋತಿಯಾಗಿ ತತ್ವ ಜ್ಞಾನವನ್ನು ಬೆಳಗಿದ್ದಾರೆ ಅಪ್ರತಿಮ ಸರಳ ಜೀವಿಯಾಗಿದ್ದ ಶ್ರೀಗಳು ಯಾವುದೇ ಫಲಾಪೇಕ್ಷವಿಲ್ಲದೇ ಜನೋದ್ದಾರ ದೇಶೋದ್ದಾರವಾಗಲಿ ಎಂಬ ಅಪೇಕ್ಷೆಯಾಗಿತ್ತೆಂದ ಅವರು ಜನ ಸಾಮಾನ್ಯರಲ್ಲಿ ಜ್ಞಾನ ಬಿತ್ತಿದ ಯೋಗಿಯ ನೆನಪು ಸೂರ್ಯ ಚಂದ್ರ ಇರುವವರೆಗೂ ಅಜರಾಮರವಾಗಿ ಇರಲಿದೆ ಎಂದರು.
ಇನ್ನೋರ್ವ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದ ಎಸ್.ಕೆ.ಪ್ರೌಢ ಶಾಲೆಯ ಉಪ ಪ್ರಾಚಾರ್ಯ ಎಸ್.ಡಿ.ಕರ್ಜಗಿ ಅವರು ಮಾತನಾಡಿ ಈ ಹಿಂದೆ ದಕ್ಷ ಶಿಕ್ಷಣ ಹೊಂದಿದ್ದ ಶ್ರೀಗಳನ್ನು ಅವರು ಹೇಳುವ ಉಪನ್ಯಾಸದಲ್ಲಿ ಮೀರಿಸುವಂತಹ ಶಕ್ತಿ ಯಾರಲ್ಲಿ ಬರಲಿಲ್ಲಾ ಶ್ರೀಗಳು ನೀಡುತ್ತಿದ್ದ ಪ್ರವಚನಗಳಲ್ಲಿಯ ಒಳ್ಳೆಯ ಸಂದೇಶಗಳು ಆಲಿಸುತ್ತಿದ್ದ ಭಕ್ತರೆಲ್ಲರ ಮನದಟ್ಟುತ್ತಿದ್ದವೆಂದ ಅವರು ಯಾವ ಫಲಾಪೇಕ್ಷೆಯಾಗಬಾರದೆಂಬ ಉದ್ದೇಶವೋ ಏನೋ ಶ್ರೀಗಳ ಉಡುಗೆ ತೊಡುಗೆ ಸಾದಾ ಸೀದಾ ಇದ್ದರೂ ಅವುಗಳಲ್ಲಿ ಕಿಸೆ ಎಂಬುದೇ ಇದ್ದಿಲ್ಲಾ ಜನ್ಮ ಇರುವವರೆಗೆ ಮಾನವರಾದ ನಾವು ಹೇಗೆ ಬಧುಕಬೇಕೆಂಬ ಅನೇಕ ಉದಾರಣೆಗಳೊಂದಿಗೆ ಹೇಳಿದ ಅವರು ಶ್ರೀಗಳು ನಿಸರ್ಗಕ್ಕೆ ಅತೀವ ಗೌರವ ನೀಡುತ್ತಿದ್ದರೆಂದರು.
ಶಿಕ್ಷಕರಾದ ಆರ್.ಬಿ.ದಾನಿ ಮತ್ತು ಎ.ಬಿ.ಇರಾಜ ಮಾತನಾಡಿ ಈ ಹಿಂದೆ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹಾತ್ಮಾ ಗಾಂಧಿಜಿ ಅವರನ್ನು ನಾವೇಲ್ಲರೂ ಗೌರವಿಸುತ್ತಾ ಸಾಗಿ ಬಂದಿದ್ದೇವೆ ಅವರಂತೆ ಮರೆಯಲಾರದ ಮಾಣಿಕ್ಯರಾಗಿದ್ದಾರೆಂದ ಅವರು ವಿಜಯಪುರದಲ್ಲಿ ಮೂರು ಗುಮ್ಮಟಗಳ ಹೆಸರು ಹೊರಬರುತ್ತಲಿವೆ ಅದರಲ್ಲಿ ಗೋಳ ಗುಮ್ಮಟ, ವಚನ ಗುಮ್ಮಟ, ಪ.ಗು.ಹಳಕಟ್ಟಿಯವರು, ಜ್ಞಾನ ಗುಮ್ಮಟ ಶ್ರೀ ಸಿದ್ದೇಶ್ವರ ಶ್ರೀಗಳೆಂದರೆ ತಪ್ಪಾಗಲಾರದೆಂದರು.
ಈ ಸಮಯದಲ್ಲಿ ಶಿಕ್ಷಕರಾದ ಎಂ.ಎ.ಬಾಗೇವಾಡಿ, ಆರ್.ಎಚ್.ಬೂದಿಹಾಳ, ಆರ್.ಜಿ.ರಾಠೋಡ, ಎಸ್.ವ್ಹಿ.ಬೆನಕಟ್ಟಿ, ಜೆ.ಎಸ್.ಕಟ್ಟಿಮನಿ, ಎ.ಎಚ್.ಹೂಗಾರ, ಶಿಕ್ಷಕಿಯರಾದ ಶ್ರೀಮತಿ ಬಿ.ಟಿ.ಸಜ್ಜನ, ಅಮೃತಾ ತೊಂಡಿಹಾಳ, ಶ್ರೀದೇವಿ ಬಡಿಗೇರ, ಹೇಮಾ ಕೊಡೇಕಲ್ಲ, ಕೆ.ಎಸ್.ಕೊಣ್ಣೂರ, ಹಾಗೂ ಗಣ್ಯರಾದ ರಾಜು ಹಂಚಾಟೆ, ಶಿವಾನಂದ ಹೂಗಾರ, ಪತ್ರಿಕಾ ಪ್ರತಿನಿಧಿ ಜಿ.ಟಿ.ಘೋರ್ಪಡೆ ಹಾಗೂ ವಿದ್ಯಾರ್ಥಿ, ವಿಧ್ಯಾರ್ಥಿನಿಯರು ಉಪಸ್ಥಿತರಿದ್ದು ಶ್ರೀ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮಿಸಿದರು.ತಾಲೂಕಾ ಕಸಾಪ ಅಧ್ಯಕ್ಷ ಆರ್.ಎಲ್.ಕೊಪ್ಪದ ಸ್ವಾಗತಿಸಿ ವಂದಿಸಿದರು.