ಚನ್ನಮ್ಮನ ಕಿತ್ತೂರ- 27 ಸಿದ್ದೇಶ್ವರಂತಹ ಶ್ರೀಗಳು ಇದ್ದಾಗಲ್ಲೇ ಈ ದೇಶಕ್ಕೆ ಬೆಲೆ ಬಂದಿದೆ ಎಂದು ವಿರಕ್ತ ಶೆಗುಣಸಿಯ ಡಾ. ಮಹಾಂತ ಸ್ವಾಮಿಜೀ ಹೇಳಿದರು.
ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಅನುಭವ ಮಂಟಪದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ ನುಡಿ ನಮನ ಮತ್ತು ರೈತ ಸಮಾವೇಶ ಕಾರ್ಯಕ್ರಮದ ಸಾನಿಧ್ಯ ವಹಿಸಿ ಉದ್ಘಾಟಿಸಿ ಮಾತನಾಡಿದ ಆವರು. ಈ ಭೌತಿಕ ಶರೀರವು ಬೆಂಕಿಯಲ್ಲಿ ಕರಗಿಹೋಗುತ್ತದೆ. ಆದರೆ ಸಿದ್ದೇಶ್ವರ ಶ್ರೀಗಳ ಶರೀರ ಬೆಂಕಿಯಲ್ಲಿ ಬೆಂದರು ಅವರ ಆತ್ಮ ಉಳಿದಿದೆ. ಸ್ವಾತಿಮುತ್ತು ಕರಗದ ಹಾಗೇ ತಮ್ಮ ಜೀವನ ನಡೆಸಿದವರು. ಎಷ್ಟೋ ಮಹನೀಯರಲ್ಲಿ ಸಿದ್ದೇಶ್ವರರೊಬ್ಬರು ಯಾರಿಗೂ ಬೇಸರ ಮತ್ತು ನೋವಾಗದಂತೆ 80 ವರ್ಷಗಳ ಕಾಲ ಬದುಕಿದವರು ಅವರಲ್ಲಿರುವ ಜ್ಞಾನ ಬೋಧನಾತ್ಮಕವಲ್ಲ ಅದು ವಚನಾತ್ಮಕವಾಗಿತ್ತು. ಶ್ರೀಗಳು ಗುರುಮನೆ ಕಟ್ಟಿಲ್ಲಿಲ್ಲ, ಅರಿವಿನ ಮನೆ ಕಟ್ಟಿದವರು ಒಳ್ಳೆಯ ಜ್ಞಾನಿಯ ಜೊತೆಗಿದ್ದರೆ ಒಳ್ಳೆಯ ಜ್ಞಾನ ಪಡೆಯಬಹುದು ಎಂದರು.
ಜಗತ್ತಿನಲ್ಲಿ ಏನ್ನೆಲ್ಲಾ ಇಲ್ಲದಿದ್ದರೂ ಬದುಕಲು ಸಾಧ್ಯ. ಆದರೆ ರೈತನಿಲ್ಲದ್ದಿದ್ದರೆ ಬದುಕಲು ಸಾಧ್ಯವಿಲ್ಲಾ. ಅದಕ್ಕಾಗಿ ಇಂದಿನ ಸರ್ಕಾರಗಳು ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಅವರಿಗೆ ಸಾವಯವದ ತಿಳಿಹೇಳಿ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು. ಅಂದಾಗ ಮಾತ್ರ ರೈತ ಬದುಕಲು ಸಾಧ್ಯವೆಂದರು.
ಪ್ರಾಸ್ತಾವಿಕವಾಗಿಡಾ|| ಜಗದೀಶ ಹಾರೂಗೊಪ್ಪ ಮಾತನಾಡಿದರು.
ಈ ವೇಳೆ ನಿಡಸೋಸಿಯ ನಿಜಲಿಂಗ ದೇವರು ó, ಶಿರೂರದ ಡಾ. ಬಸವಲಿಂಗ ಸ್ವಾಮಿಜಿ, ದೇವರಕೊಂಡ ಬಾವಿಹಾಳದ ಮಾಣಿಕ್ಯಚನ್ನವೃಷಬೇಂದ್ರ ಸ್ವಾಮಿಜೀ, ಹೂಲಿಕಟ್ಟಿ ಲಿಂಗಾನಂದ ಸ್ವಾಮಿಜಿ, ಮಲ್ಲಾಪೂರ ನೇಸರಗಿ ವಿದಾನಂದ ಸ್ವಾಮಿಜೀ, ನೇಗಿಹಾಳದ ಅದ್ವೈತಾನಂದ ಭಾರತಿ ಸ್ವಾಮಿಜೀ, ಹೋಳಿಹೂಸುರ ಪ್ರಭುದೇವ ಸ್ವಾಮಿಜೀ, ದೇಗುಲಹಳ್ಳಿ ವೀರೇಶ್ರರ ಸ್ವಾಮಿಜಿ, ಧಾರವಾಡ ನಗೆಮಾರಿ ಬಿ.ಜಿ.ಪಾಟೀಲ ಗುರುಜಿ, ಡಾ. ಬಸವರಾಜ ಪರವಣ್ಣವರ, ಡಾ/ ಜ್ಯೋತಿ ಹಾರುಗೊಪ್ಪ, ಮಾಜಿ ಜಿಪಂ ಸದಸ್ಯೆ ರಾಧಾ ಕಾದ್ರೋಳ್ಳಿ, ಬಸವರಾಜ ಚಿನಗುಡಿ, ಕಮಲಾ ಗಣಾಚಾರಿ, ವಿಠ್ಠಲ ಮಿರಜಕರ, ಕಾಶವ್ವಾ ಹಾರುಗೊಪ್ಪ, ಅದೃಶ್ಯಪ್ಪ ಹಾರುಗೊಪ್ಪ, ಬಾಬು ಕಟ್ಟಿ, ಸಿದ್ರಾಮ್ ತಳವಾರ, ರಮೇಶ ಗದ್ದಿಹಳ್ಳಿ ಉಪಸ್ಥಿತರಿದ್ದರು.