ಸಿದ್ದು ಸಿಎಂ:ಹರಕೆ ತಿರಿಸಿದ ಬೆಂಬಲಿಗರು

ಕೋಲಾರ,ಮೇ,೧೮:ನಗರದ ಅದಿದೇವತೆ ಕೋಲಾರಮ್ಮ ಅವರ ಕೃಪಾಶಿರ್ವಾದದಿಂದ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯ ಮಂತ್ರಿಯಾಗಿ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಕೋಲಾರಮ್ಮ ದೇವತೆಗೆ ವಿಶೇಷ ಪೂಜೆ ಸಲ್ಲಿಸಿ ೧೦೧ ಈಡುಗಾಯಿ ಹೊಡೆಯುವ ಮೂಲಕ ಹರಕೆಯನ್ನು ತೀರಿಸಿರುವುದಾಗಿ ನಗರಸಭಾ ಮಾಜಿ ಸದಸ್ಯ ಸಿ.ಸೋಮಶೇಖರ್ ತಿಳಿಸಿದರು,
ನಗರದ ಶ್ರೀ ಕೋಲಾರಮ್ಮ ದೇವಾಲಯದಲ್ಲಿ ಸಿದ್ದರಾಮಯ್ಯ ಅವರ ಅಭಿಮಾನಿಗಳ ಬಳಗ ಹಾಗೂ ಕಾಂಗ್ರೇಸ್ ಮುಖಂಡರ ಸಹಯೋಗದಲ್ಲಿ ಕೋಲಾರಮ್ಮ ದೇವತೆಗೆ ೧೦೧ ತೆಮಗಿನಕಾಯಿಗಳನ್ನು ಅರ್ಪಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರನ್ನು ಮುಖ್ಯ ಮಂತ್ರಿ ಮಾಡಿರುವುದು ಅಹಿಂದ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿದಂತಾಗಿದೆ. ಮುಖ್ಯ ಮಂತ್ರಿಯನ್ನಾಗಿ ಮಾಡಿದಂತ ಎ.ಐ.ಸಿ.ಸಿ. ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಹಾಗೂ ರಾಹುಲ್ ಗಾಂಧಿಯವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ, ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ವರ್ಧಿಸಿದ್ದರೆ ರಾಜ್ಯಕ್ಕೆ ಎರಡನೇ ಮುಖ್ಯ ಮಂತ್ರಿ ನೀಡಿದಂತ ಕೀರ್ತಿ ಕೋಲಾರಕ್ಕೆ ಸಲ್ಲುತ್ತಿತ್ತು ಎಂದರು.
ಕೋಲಾರದಿಂದ ಆಯ್ಕೆಯಾಗಿರುವ ಕೊತ್ತೂರು ಮಂಜುನಾಥ್ ಅವರು ಪ್ರಚಂಡ ಬಹುಮತದಿಂದ ಆಯ್ಕೆಯಾಗಿದ್ದಾರೆ. ಅವರನ್ನು ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡಿ ಕೊಂಡು, ಮುಂದಿನ ಲೋಕಸಭಾ ಚುನಾವಣೆಗೆ ಕೋಲಾರ ಜಿಲಾ ಉಸ್ತುವಾರಿಯನ್ನಾಗಿಸ ಬೇಕೆಂದು ಮನವಿ ಮಾಡಿದರು,
ಸಿದ್ದರಾಮಯ್ಯ ಅಭಿಮಾನಿ ಬಳಗದ ಮುಖಂಡ ಎ.ಅನಂತಪ್ಪ ( ಚಿನ್ನಿ) ಮಾತನಾಡಿ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಅಗಮಿಸಿದಾಗ ನಗರದ ಅದಿ ದೇವತೆಯ ಕೋಲಾರಮ್ಮ ದೇವಾಲಯಕ್ಕೆ ಅಗಮಿಸಿ ಪ್ರಾರ್ಥನೆ ಸಲ್ಲಿಸಿದ್ದರು ಅವರು ವರುಣಾದಲ್ಲಿ ಸ್ವರ್ಧಿಸಿದರೂ ಸಹ ಕೋಲಾರಮ್ಮ ಕೃಪ ಕಟಾಕ್ಷದಿಂದ ಶಾಸಕರಾಗಿ ರಾಜ್ಯದ ಮುಖ್ಯ ಮಂತ್ರಿಯಾಗಿಯೋ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ದೇವತೆಯ ಸಮ್ಮುಖದಲ್ಲಿ ೧೦೧ ತೆಂಗಿನ ಕಾಯಿಗಳನ್ನು ಅರ್ಪಿಸಲಾಗಿದೆ ಎಂದರು,
ಕಾಂಗ್ರೆಸ್ ಮುಖಂಡ ಚಂದ್ರಮೌಳಿ ಮಾತನಾಡಿ ಸಿದ್ದರಾಮಯ್ಯ ಅವರ ನಾಯಕತ್ವ ರಾಜ್ಯಕ್ಕೆ ಅತ್ಯವಶ್ಯಕವಾಗಿದೆ. ಸಾರ್ವಜನಿಕರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದು ಪರಿಹಾರಕ್ಕಾಗಿ ಸಿದ್ದರಾಮಯ್ಯ ಅವರ ಜನಪರ ಆಡಳಿತ ಬೇಕಾಗಿತ್ತು ಹಾಗಾಗಿ ರಾಜ್ಯದ ಜನತೆ ಕಾಂಗ್ರೇಸ್ ಪಕ್ಷಕ್ಕೆ ಸ್ವಂತ ಬಲದಿಂದ ಸುಭದ್ರ ಆಡಳಿತ ನೀಡಲು ಬಹುಮತ ನೀಡಿ ಆಶೀರ್ವಾದಿಸಿದ್ದಾರೆ ಎಂದರು,
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗದ ಅಂಚೆ ಅಶ್ವಥ್, ಮುನಿವೆಂಕಟೇಶ್, ಕೈಲಾಸ್, ಆಶ್ವಥಪ್ಪ, ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಸಾದ್‌ಬಾಬು, ಪೋಟೋ ಮಂಜುನಾಥ್, ಮೋಹನ್ ಪ್ರಸಾದ್ ಬಾಬು, ಜಯಣ್ಣ, ಸಾಧಿಕ್ ಪಾಷ,ಕಿಲಾರಿ ಪೇಟೆ ಮಣಿ, ಕನಕನಪಾಳ್ಯ ಬಾಬು,ಬಸವನತ್ತ ಮುನಿಯಪ್ಪ, ವೆಂಕಟೇಸ್, ಮೂರ್ತಿ ಮುಂತಾದವರು ಇದ್ದರು.