ಸಿದ್ದು ವಿರುದ್ದ ಸ್ಪರ್ಧಿಸದಂತೆ ವರ್ತೂರುಗೆ ಸೂಚನೆ

ಕೋಲಾರ,ಜ,೧೯- ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ರಾಜ್ಯದ ಯಾವೂದೇ ಕ್ಷೇತ್ರದಲ್ಲಿ ಕುರುಬ ಸಮಾಜದವರು ಸ್ಪರ್ಧಿಸಬಾರದು ಎಂದು ಬೆಂಗಳೂರಿನಲ್ಲಿರುವ ರಾಜ್ಯ ಕುರುಬರ ಸಂಘದಿಂದ ಅದೇಶ ಜಾರಿ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಿದ್ದರಾಮಯ್ಯ ಅವರು ಮಾಜಿ ಮುಖ್ಯ ಮಂತ್ರಿಗಳಾಗಿದ್ದು ಕುರುಬ ಸಮುದಾಯದ ನಾಯಕರಾಗಿದ್ದಾರೆ. ಈ ಚುನಾವಣೆ ನಮ್ಮ ಕುರುಬ ಜಾತಿಯ ಪ್ರತಿಷ್ಠಯ ಪ್ರಶ್ನೆಯಾಗಿರುತ್ತದೆ. ನಾವುಗಳು ಸಮುದಾಯಕ್ಕೆ ಪ್ರಥಮ ಅಧ್ಯತೆ ನೀಡಿ ನಂತರ ಪಕ್ಷದ ವಿಷಯವನ್ನು ಪರಿಗಣಿಸ ಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ.
ಸಮುದಾಯದ ಈ ಅದೇಶವನ್ನು ಗೌರವಿಸಿ ವರ್ತೂರು ಪ್ರಕಾಶ್ ಅವರು ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ನಿರ್ಧಾರಿಸಿರುವುದನ್ನು ಹಿಂಪಡೆದು ಸಿದ್ದರಾಮಯ್ಯ ಅವರನ್ನು ಬೆಂಬಲಿಸುವರೇ ಅಥಾವ ಸಮುದಾಯದ ಅದೇಶವನ್ನು ಧಿಕ್ಕರಿಸಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ವಿರುದ್ದ ಸ್ಪರ್ಧಿಸುವರೇ ಎಂಬುವುದು ಸ್ಥಳೀಯ ಕುರುಬ ಸಮುದಾಯದಲ್ಲಿ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಈಗಾಗಲೇ ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ್ತು ವರ್ತೂರು ಪ್ರಕಾಶ್ ಬಣವೆಂದು ಇಬ್ಬಾಗವಾಗಿದೆ. ಜಿಲ್ಲಾ ಕುರುಬರ ಸಂಘದಲ್ಲಿ ಎರಡು ಭಾಗವಾಗಿ ಪತ್ರಿಕಾ ಹೇಳಿಕೆ ಮೂಲಕ ಸಿದ್ದರಾಮಯ್ಯ ಅವರ ಪರ ಮತ್ತು ವಿರೋಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಚುನಾವಣಾ ವೇಳೆಗೆ ಬೀದಿಗೆ ಬರಬಹುದೆಂಬ ಭೀತಿ ಸಮುದಾಯದ ಹಿರಿಯರಲ್ಲಿ ಭೀತಿ ಪ್ರಾರಂಭವಾಗಿದೆ.
ಚುನಾವಣೆಗೆ ಇನ್ನು ೩-೪ ತಿಂಗಳು ಇರುವಾಗಲೇ ಸಮುದಾಯದಲ್ಲಿ ಪರ-ವಿರೋಧಗಳ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು ೩೦ ಸಾವಿರ ಮತದಾರರು ಇದ್ದಾರೆನ್ನಲಾಗಿದೆ. ಅದರೆ ಖಚಿತವಾಗಿ ಜಾತಿವಾರು ಮತದಾರರನ್ನು ಖಚಿತವಾಗಿ ಅಂಕಿ ಅಂಶವನ್ನು ಸ್ಪಷ್ಟ ಪಡೆಸಿಲ್ಲ.
ಈಗಾಗಲೇ ವರ್ತೂರು ಪ್ರಕಾಶ್ ಅವರಿಗೆ ಎರಡು ಭಾರಿ ಆಯ್ಕೆ ಮಾಡಿದ್ದೇವೆ. ಸಮುದಾಯದವರಿಗೂ ಏನು ಮಾಡಿಲ್ಲ. ಕ್ಷೇತ್ರಕ್ಕೂ ಏನೂ ಮಾಡಿಲ್ಲ. ಕನಿಷ್ಠ ಸಮುದಾಯದ ವಿದ್ಯಾರ್ಥಿಗಳಿಗೆ ಒಂದು ವಸತಿ ನಿಲಯವನ್ನು ನಿರ್ಮಿಸಲು ಅಗಲಿಲ್ಲ. ಇನ್ನು ಮೂರನೇ ಭಾರಿ ಇವರನ್ನು ಆಯ್ಕೆ ಮಾಡಿದರೂ ಸಹ ಕ್ಷೇತ್ರದಲ್ಲಿ ಎಷ್ಟು ಮಾತ್ರ ಉದ್ದಾರವನ್ನು ನಿರೀಕ್ಷಿಸ ಬಹುದು ಎಂಬ ಪ್ರಶ್ನೆಗಳು ಕೇಳಿ ಬರುತ್ತಿದೆ.
ಸಿದ್ದರಾಮಯ್ಯ ಅವರಿಗೂ ಒಂದು ಅವಕಾಶ ಕೊಡೋಣಾ. ಅವರು ಕೋಲಾರಕ್ಕೆ ಬಂದರೆ ಕ್ಷೇತ್ರವು ಅಭಿವೃದ್ದಿಯಾಗಲಿದೆ, ಸಮುದಾಯವರು ಉದ್ದಾರವಾಗುತ್ತಾರೆ, ರಾಜ್ಯಕ್ಕೆ ಕೋಲಾರದಿಂದ ಅವಕಾಶ ಸಿಕ್ಕರೆ ಎರಡನೇ ಮುಖ್ಯ ಮಂತ್ರಿಯನ್ನು ನೀಡಿದಂತ ಹೆಗ್ಗಳಿಕೆಗೆ ಪಾತ್ರವಾಗುತ್ತದೆ ಎಂಬುವುದು ಸಮುದಾಯದವರ ಪ್ರತಿಪಾದನೆಯಾಗಿದೆ.
ಸಿದ್ದರಾಮಯ್ಯ ಅವರಿಗೆ ಕುರುಬ ಸಮುದಾಯದ ಜೂತೆಗೆ ಅಲ್ಪಸಂಖ್ಯಾತರು, ದಲಿತರು ಸೇರಿದಂತೆ ಹಿಂದುಳಿದ ವರ್ಗದವರ ಅಪಾರ ಬೆಂಬಲ ಸಿಗಲಿದೆ. ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಎಲ್ಲಾ ವರ್ಗದವರಿಗೂ ಸಮಾನತೆ, ಸಾಮಾಜಿಕ ನ್ಯಾಯ ಸಿಗುವ ವಿಶ್ವಾಸವಿದೆ ಎಂಬ ನಂಬಿಕೆ ಜನತೆಯಲ್ಲಿದೆ.
ವರ್ತೂರು ಪ್ರಕಾಶ್ ಅವರು ಕೋಲಾರಕ್ಕೆ ಸಿದ್ದರಾಮಯ್ಯ ಅವರ ಹೆಸರನ್ನು ಹೇಳಿಕೊಂಡು ಪರಿಚಯರಾದವರು, ಸಿದ್ದರಾಮಯ್ಯ ಅವರಿಗೆ ಕೋಲಾರದಲ್ಲಿ ಸನ್ಮಾನ ಮತ್ತು ಅವರನ್ನು ಮುಖ್ಯ ಮಂತ್ರಿ ಮಾಡುವುದೇ ತಮ್ಮ ಗುರಿ ಎಂದು ಹೇಳಿ ಕೊಂಡು ಬಂದವರು.ಅವರೇನು ಸ್ಥಳಿಯರಲ್ಲ ಅದರೆ ಅವರ ತಾಯಿ ತವರು ಕೋಲಾರವಾಗಿದೆ.
ಈ ಹಿಂದೆ ಸಿದ್ದರಾಮಯ್ಯ ಅವರ ಚುನಾವಣೆಯಲ್ಲಿ ಚಾಮುಂಡಿ ಕ್ಷೇತ್ರಕ್ಕೆ ವರ್ತೂರಿನಿಂದ ಪ್ರಚಾರಕ್ಕೆ ತಮ್ಮ ಪಡೆಯನ್ನು ಕರೆದು ಕೊಂಡು ಹೋಗಿದ್ದದಂತ ಕಟ್ಟಾ ಬೆಂಬಲಿಗ ಅಭಿಮಾನಿಯಾಗಿದ್ದರು. . ಅದರೆ ಇಂದು ಸಿದ್ದರಾಮಯ್ಯ ಅವರ ವಿರುದ್ದ ತೊಡೆ ತಟ್ಟಿ ನಿಂತಿದ್ದಾರೆ. ಸಿದ್ದರಾಮಯ್ಯ ಏನು ಮಾಡಿಲ್ಲ. ಯಾರನ್ನು ಬೆಳೆಯಲಿಕ್ಕೆ ಬಿಟ್ಟಿಲ್ಲ. ಕಾಂಗ್ರೇಸ್ ಪಕ್ಷದಲ್ಲಿನ ದಲಿತ ನಾಯಕರನ್ನು ಕುತಂತ್ರದಿಂದ ಸೋಲುವಂತೆ ಮಾಡಿದವರು, ಸಮುದಾಯದ ಅಭಿವೃದ್ದಿ ಕೆಲಸಗಳು ಯಾವೂದು ಮಾಡಿಲ್ಲ , ಯಾರನ್ನು ಮಂತ್ರಿ ಮಾಡಿಲ್ಲ ಎಂಬುವುದು ಅವರ ಆರೋಪವಾಗಿದೆ.