ಸಿದ್ದು ಡಿಕೆಶಿ ಇಬ್ಬರ ಕೈಯಲ್ಲೂ ಚೂರಿ ಇದೆ, ಚುಚ್ಚೋಕೆ ಕಾಯ್ತಾ ಇದಾರೆ: ಈಶ್ವರಪ್ಪ ವ್ಯಂಗ್ಯ

ಚಾಮರಾಜನಗರ, ಮಾ.03:- ರಾಹುಲ್ ಗಾಂಧಿ ಬಲವಂತದಿಂದ ಒಬ್ಬರಿಗೊಬ್ಬರು ಅಪ್ಪಿಕೊಂಡರು ಅμÉ್ಟೀ ಆದರೆ ಇಬ್ಬರ ಕೈಯಲ್ಲೂ ಚಾಕು ಇದೆ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಬಲವಂತದಿಂದ ಅಪ್ಪಿಕೊಂಡ ಡಿಕೆಶಿ ಹಾಗೂ ಸಿದ್ದರಾಮಯ್ಯ ಕೈಯಲ್ಲಿ ಚಾಕು ಇದೆ, ಚುಚ್ಚೋದಕ್ಕೆ ಕಾಯ್ತಾ ಇದಾರೆ ಅμÉ್ಟೀ, ಸಿದ್ದು ಸಿಎಂ ಎಂದು ಘೋಷಣೆ ಕೂಗಿದರೇ ಡಿಕೆಶಿ ಸಿಡಿಮಿಡಿಯಾಗುತ್ತಾರೆ, ಡಿಕೆಶಿ ಸಿಎಂ ಎಂದರೆ ಖುಷಿಯಾಗುತ್ತಾರೆ ಎಂದು ಕಾಂಗ್ರೆಸ್ ನಲ್ಲಿ ಎರಡು ಬಣಗಳಿದೆ ಎಂದು ಪರೋಕ್ಷವಾಗಿ ವ್ಯಂಗ್ಯ ಮಾಡಿದರು.
ಸಿದ್ದರಾಮಯ್ಯ ತಾವೊಬ್ಬರು ಮಾತ್ರ ಹಿಂದುಳಿದ, ದಲಿತರ ನಾಯಕ ಎಂದುಕೊಂಡಿದ್ದಾರೆ. ಆದರೆ, ದಲಿತ ಮುಖಂಡ ಪರಮೇಶ್ವರ್ ಅವರನ್ನು ಸೋಲಿಸಿದ್ದು ಯಾರು..? ಮುನಿಯಪ್ಪ ಅವರನ್ನು ಸೋಲಿಸಿದ್ದಿ ಸಿದ್ದರಾಮಯ್ಯ ಶಿಷ್ಯರೇ ಅಲ್ಲವೇ..? ಅವರ ಸೋಲಿಗೆ ಯಾರು ಕಾರಣ ಎಂದು ಹೇಳಲಿ..? ದಲಿತ ನಾಯಕರು, ಹಿಂದುಳಿದ ನಾಯಕರು ಸಿದ್ಧರಾಮಯ್ಯರವರನ್ನು ಸೋಲಿಸಲು ಹಾತೊರೆಯುತ್ತಿದ್ದಾರೆ ಎಂದು ಅವರು ಕಿಡಿ ಕಾರಿದರು.
ಸೋಮಣ್ಣಗೆ ಹುμÁರಿಲ್ಲ: ರಥಯಾತ್ರೆಗೆ ಸಚಿವ ಸೋಮಣ್ಣ ಗೈರಾದ ಬಗ್ಗೆ ಮಾತನಾಡಿ, ಸೋಮಣ್ಣ ಅವರಿಗೆ ಆರೋಗ್ಯ ಸರಿಯಿಲ್ಲ, ಆದ್ದರಿಂದ ಅವರು ಬಂದಿಲ್ಲ ಅμÉ್ಟೀ, ಬಿಎಸ್ ವೈ ಹಾಗೂ ಸೋಮಣ್ಣ ನಡುವೆ ಯಾವುದೇ ಗುದ್ದಾಟ ಇಲ್ಲ, ಕಾರ್ಯಕ್ರಮಕ್ಕೆ ಬರಲಿಲ್ಲವೆಂಬ ಕಾರಣಕ್ಕೆ ಭಿನ್ನಮತ ಇರಲ್ಲ, ವಿಪಕ್ಷಗಳು ಇದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ಇದೇ ವೇಳೆ, ಚಾಮರಾಜನಗರದಲ್ಲಿ ಸ್ಥಳೀಯರಿಗೆ ಟಿಕಟ್ ಸಿಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಕೊಡುತ್ತೇವೆ, ಎಲ್ಲರೂ ಭಾರತೀಯರು, ಹೊರಗಿನವರು-ಒಳಗಿನವರು ಎಂಬುದಿಲ್ಲ ಎಂದರು.
ಸುದ್ಧಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ, ಶಾಸಕರುಗಳಾದ ಎನ್. ಮಹೇಶ್, ನಿರಂಜನ್‍ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾರಾಯಣಪ್ರಸಾದ್, ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ಜಿಲ್ಲಾ ಮಾಧ್ಯಮ ಪ್ರಮುಖ್ ಮಂಜುನಾಥ್ ಇದ್ದರು.