ಸಿದ್ದು ಜನಪ್ರಿಯತೆ ಸಹಿಸದ ಬಿಜೆಪಿ – ಅಯ್ಯಪ್ಪಗೌಡ ಆರೋಪ

ಗಬ್ಬೂರು.ನ.೭-ದೇವರಾಜ ಅರಸು ನಂತರ ಅಹಿಂದ ವರ್ಗಕ್ಕೆ ಹೆಚ್ಚು ಉಪಕಾರ ಮಾಡಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಸಿದ್ದರಾಮಯ್ಯ ಪಾತ್ರರಾಗಿದ್ದು. ಬಿಜೆಪಿ ಪಕ್ಷ ಅವರ ವಿರುದ್ಧ ಷಡ್ಯಂತ್ರ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಹಾಗೂ ಜಿಲ್ಲಾ ಉಪಾಧ್ಯಕ್ಷರು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ ರಾಯಚೂರು ಅಯ್ಯಪ್ಪಗೌಡ ಗಬ್ಬೂರು ಆರೋಪಿಸಿದ್ದರೆ.
ಅವರು ಪತ್ರಿಕೆ ಹೇಳಿಕೆ ನೀಡಿ ದಲಿತರಿಗೆ ಎಸ್‌ಇಪಿ/ಟಿಎಸ್ ಪಿ ಕಾಯ್ದೆ ಜಾರಿಗೊಳಿಸಿ ಗುತ್ತಿಗೆ ಮೀಸಲಾತಿ ಅವಕಾಶ ಕಲ್ಪಿಸಿ, ಬಡ್ತಿ ಮೀಸಲಾತಿ ಅವಕಾಶ ಕಲ್ಪಿಸಿ, ಸಿದ್ದರಾಮಯ್ಯನವರು ಎಸ್‌ಇಪಿ/ಟಿಎಸ್ ಪಿ ಕಾಯ್ದೆ ಕಾಯ್ದೆಯಡಿ ೩೦. ಸಾವಿರ ಕೋಟಿ ರೂಪಾಯಿಗಳನ್ನು ನಿಗದಿ ಮಾಡಿದರು.
ಬಹುಶಃ ಈಗ ದೊಡ್ಡದಾಗಿ ಅಪ ಪ್ರಚಾರ ಮಾಡುತ್ತಿರುವ ಬಿಜೆಪಿಯ ಯಾವ ನಾಯಕರು ಸಿದ್ದರಾಮಯ್ಯನವರು ಹಾಗೆ ತಮ್ಮ ರಾಜಕೀಯ ಇತಿಹಾಸದಲ್ಲಿ ದಲಿತ ಪರವಾದ ಕಾರ್ಯಕ್ರಮ ಮಾಡಿಲ್ಲ.ಮುಂದೆಯೂ ಯೋಚಿಸಲು ಕೂಡ ಸಾಧ್ಯವಿಲ್ಲ.
ಸಿದ್ದರಾಮಯ್ಯನವರು ಎಂದಿಗೂ ದಲಿತರ ವಿರುದ್ಧವಾಗಿ ಹಗುರವಾಗಿ ಹಿಂದೆಯೂ ಮಾತಾಡಿಲ್ಲ ಮುಂದೆಯೂ ಮಾತನಾಡಲ್ಲ.
ಎಸ್ಟಿ.ಎಸ್ಸಿ.ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಹಾಸ್ಟೆಲ್ ಸೌಲಭ್ಯ,ಸರ್ಕಾರದ ಯೋಜನೆಗಳ ಪರಿಹಾರ ಧನ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ ಸರ್ಕಾರ ಗಮನಹರಿಸಬೇಕಿದೆ.
ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗಿವೆ. ದಲಿತ ವರ್ಗಕ್ಕೆ ಸಾಲ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ.
ಉಪ ಮುಖ್ಯಮಂತ್ರಿ ಸ್ಥಾನ ಶ್ರೀರಾಮುಲುಗೆ ನೀಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಸ್ಥಾನ ನೀಡಲಿಲ್ಲ.
ಬಿಜೆಪಿಯವರು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಶೇಕಡಾ ೭.೫ ಹೆಚ್ಚಳ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದರು ಪರಿಶಿಷ್ಟ ಪಂಗಡ ಸಮುದಾಯದವರಿಗೆ ಮೀಸಲಾತಿ ಹೆಚ್ಚಿಸಿಲಿಲ್ಲ.
ಮೋದಿಯವರು ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿ ಕೊಡುತ್ತೇನೆ ಎಂದರು ನಿರುದ್ಯೋಗ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಿ ಕೊಡಲಿಲ್ಲ.
ಕಪ್ಪು ಹಣ ತರುತ್ತೇನೆ ಎಂದರು ಕಪ್ಪು ಹಣ ಇನ್ನು ತರಲಿಲ್ಲ.
ಬಡವರ ಪ್ರತಿಯೊಬ್ಬರ ಖಾತೆಯಲ್ಲಿ ೧೫ ಲಕ್ಷ ರೂ.ಹಣ ಹಾಕುತ್ತೇನೆ ಎಂದರೂ ಯಾರೊಬ್ಬರ ಖಾತೆಗೂ ಹಣ ಹಾಕಲಿಲ್ಲ.
ಹಾನಗಲ್ ಉಪಚುನಾವಣೆಯಲ್ಲಿ ಜನರು ಉತ್ತರ ನೀಡಿದ್ದು ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಹುಮತದಿಂದ ಗೆಲ್ಲಿಸಲು ಮತದಾರರು ಕಾಯುತ್ತಿದ್ದಾರೆ ಇದನ್ನು ಅರಿತಿರುವ ಬಿಜೆಪಿಯವರು ಸಿದ್ದರಾಮಯ್ಯನವರ ವರ್ಚಸ್ಸು ಕಡಿಮೆ ಮಾಡಲು ಇಲ್ಲ ಸಲ್ಲದ ವಿಷಯವನ್ನು ಮುಂದಿಟ್ಟುಕೊಂಡು ಆರೋಪಿಸುತ್ತಿದ್ದರೆ. ಎಂದು ಅಯ್ಯಪ್ಪಗೌಡ ಗಬ್ಬೂರು ಅವರು ಸಂಜೆ ವಾಣಿಗೆ ತಿಳಿಸಿದ್ದಾರೆ.