ಸಿದ್ದು ಗೆಲುವು ಖಚಿತ

ಕೋಲಾರ,ಏ,೫- ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಸ್ವರ್ಧಿಸಿದರೆ ತಮ್ಮ ಎದುರಾಳಿಗಿಂತ ಸುಮಾರು ೫೦ ಸಾವಿರ ಅಧಿಕ ಮತಗಳಿಂದ ವಿಜೇತರಾಗುವುದು ಖಚಿತ ಎಂದು ಶಾಸಕ ಕೆ. ಶ್ರೀನಿವಾಸಗೌಡ ಭವಿಷ್ಯ ನುಡಿದರು.
ನಗರದಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಮಾದ್ಯಮದವರೊಂದಿಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಾ ಕಳೆದ ೨೨ ವರ್ಷಗಳಿಂದ ಸಮರ್ಪಕವಾದ ಮಳೆಗಳಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರು, ಕೆರೆಗಳ ಬತ್ತಿಬರಡಾಗಿ ಹೋಗಿದ್ದವು ಕೋಲಾರವನ್ನು ಬರದ ಜಿಲ್ಲೆ ಎಂದು ಕಪ್ಪು ಪಟ್ಟಗೆ ಸೇರಿತ್ತು, ಹಾಗಾಗಿ ಕೋಲಾರವು ಬೆಂಗಳೂರಿಗೆ ಹತ್ತಿರವಾಗಿದ್ದರೂ ಸಹ ಯಾವೂದೇ ಅಭಿವೃದ್ದಿ ಹೊಂದಿರಲಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಜನರು ಉದ್ಯೋಗವನ್ನು ಆರಿಸಿ ಕೊಂಡು ನಗರ ಪ್ರದೇಶಗಳಿಗೆ ಗುಳೇ ಹೋಗುವಂತಾಗಿತ್ತು ಎಂದರು,
ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಶಾಸಕ ರಮೇಶ್ ಕುಮಾರ್,ಕೃಷ್ಣ ಬೈರೇಗೌಡ ಸೇರಿದಂತೆ ನಾವೆಲ್ಲಾರು ಕೆ.ಸಿ.ವ್ಯಾಲಿ ನೀರು ತಮಿಳು ನಾಡಿಗೆ ಹರಿದು ಹೋಗುತ್ತಿದ್ದನ್ನು ಶುದ್ದೀಕರಿಸಿ ಕೋಲಾರ ಜಿಲ್ಲೆಗೆ ಹರಿಸಲು ಮಾಡಿ ಕೊಂಡ ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ ಮಂಜೂರಾತಿ ನೀಡಿದರು, ಇದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಹೆಚ್.ಎನ್. ವ್ಯಾಲಿ ಯೋಜನೆರೂ ಅನುಮತಿ ನೀಡಿ ಅನುದಾನ ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ ಎರಡು ಜಿಲ್ಲೆಗಳಲ್ಲೂ ಅಂತರ್ಜಲ ಅಭಿವೃದ್ದಿ ಹೊಂದಿದೆ ಎಂದರು.
ಎರಡು ಜಿಲ್ಲೆಯಲ್ಲಿ ಸುಮಾರು ೨ ಸಾವಿರ ಪಾತಳ ಹೊಕ್ಕರೂ ನೀರು ಸಿಗದ ಸಂದರ್ಭದಲ್ಲಿ ಇಂದು ಕೆ.ಸಿ.ವ್ಯಾಲಿ ಹಾಗೂ ಹೆಚ್.ಎನ್. ವ್ಯಾಲಿ ಯೋಜನೆಯಿ ಸಂಸ್ಕರಣ ನೀರಿನಿಂದ ಕೆರೆಗಳನ್ನು ತುಂಬಿಸಿದ ಫಲವಾಗಿ ಇಂದು ೩೦೦ -೪೦೦ ಅಡಿಗಳಿಗೆ ನೀರು ಸಿಗುವಂತಾಗಿದೆ.ರೈತರ ಪಾಲಿಗೆ ಸಿದ್ದರಾಮಯ್ಯ ಅವರು ವರದಾನದ ದೇವರೇ ಎಂಬ ಭಾವನೆ ಇದ್ದು ನಮ್ಮ ಜಿಲ್ಲೆಗೆ ನೀರು ನೀಡಿದ ಪುಣ್ಯತ್ಮನ ಋಣವನ್ನು ತೀರಿಸಿ ಕೊಳ್ಳುವ ಅವಕಾಶಕ್ಕಾಗಿ ನಾವು ಕಾಯುತ್ತಿದ್ದೇವೆ. ಹಾಗಾಗಿ ಸಿದ್ದರಾಮಯ್ಯ ಅವರ ಗೆಲವು ಕೋಲಾರದಲ್ಲಿ ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಸಮರ್ಥಿಸಿ ಕೊಂಡರು,
ಇಷ್ಟೆ ಅಲ್ಲ ಸಿದ್ದರಾಮಯ್ಯ ಅವರ ಆಡಳಿತ ಅವಧಿಯಲ್ಲಿ ಅಕ್ಕಿ ಭಾಗ್ಯ, ಕ್ಷೀರ ಭಾಗ್ಯ. ಪಿಂಚಣಿ ಭಾಗ್ಯ ಸೇರಿದಂತೆ ಅನೇಕ ಭಾಗ್ಯಗಳನ್ನು ಜಾರಿ ಮಾಡಿದ್ದಾರೆ. ಕಾಂಗ್ರೇಸ್ ಪಕ್ಷವು ನೀಡಿದ್ದ ಭರವಸೆಯಲ್ಲಿ ಶೇಕಡ ೯೯ ರಷ್ಟು ಈಡೇರಿಸಿ ನುಡಿದಂತೆ ನಡೆದಿದ್ದಾರೆ. ಯರ್ ಗೋಳ್ ಯೋಜನೆ, ಎತ್ತಿನಹೊಳೆ ಯೋಜನೆಗೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದರು, ಕೋಲಾರದಲ್ಲಿ ಅವರು ಸ್ವರ್ಧಿಸುತ್ತಿರುವುದು ನಮ್ಮ ಭಾಗ್ಯವಾಗಿದೆ. ಕೋಲಾರ ಮುಂದಿನ ದಿನಗಳಲ್ಲಿ ಮಾದರಿ ಜಿಲ್ಲೆಯಾಗಿ ಹೆಚ್ಚಿನ ಅಭಿವೃದ್ದಿ ಹೊಂದಲಿದೆ. ಕಾಂಗ್ರೇಸ್ ಪಕ್ಷವು ಅಧಿಕಾರಕ್ಕೆ ಬಂದರೆ ಎರಡನೇ ಭಾರಿ ರಾಜ್ಯಕ್ಕೆ ಮುಖ್ಯ ಮಂತ್ರಿ ನೀಡಿದ ಹೆಗ್ಗಳಿಕೆ ಕೋಲಾರಕ್ಕೆ ಸಲ್ಲಲಿದೆ, ಕೋಲಾರಕ್ಕೆ ಮತ್ತಷ್ಟು ನೀರಾವರಿ ಯೋಜನೆಗಳು ಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತ ಪಡೆಸಿದರು,