ಸಿದ್ದು ಅಮೃತಮಹೋತ್ಸವ ಬನ್ನಿ …… ಭಾಗವಹಿಸಿ ರೇವಣ್ಣ ಆಹ್ವಾನ

ದಾವಣಗೆರೆ.ಆ.೨; ರಾಜ್ಯದಲ್ಲಿ ಐದು ವರ್ಷ ಉತ್ತಮ ರಾಜ್ಯಭಾರ ಮಾಡಿ ಜನನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ೭೫ ವಸಂತಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ನಾಳೆ ನಡೆಯಲಿರುವ ಸಿದ್ದರಾಮಯ್ಯ ಅಮೃತಮಹೋತ್ಸವ ಯಶಸ್ವಿಗಾಗಿ ಸರ್ವಸಿದ್ದತೆ ನಡೆದಿದ್ದು, ನಾಳೆ ಕಾಂಗ್ರೆಸ್ ರಾಷ್ಟ್ರೀಯ ಮುಖಂಡರಾದ ರಾಹುಲ್ ಗಾಂಧಿಯವರು ಆಗಮಿಸಲಿದ್ದಾರೆ ಎಂದು ಮಾಜಿ ಸಚಿವರಾದ ಹೆಚ್.ಎಂ ರೇವಣ್ಣ ಹೇಳಿದರು.ಪತ್ರಿಕಾಗೋಷ್ಠಿ ಮಾತನಾಡಿದ ಅವರು ಸಿದ್ದರಾಮಯ್ಯಅವರು ನಡೆದು ಬಂದ ದಾರಿ ಎಲ್ಲರಿಗೂ ಮಾದರಿಯಾಗಿದೆ. ರಾಜಕೀಯದಲ್ಲಿ ೪೦ ವರ್ಷ ಪೂರೈಸಿದ್ದಾರೆ. ಸಚಿವರಾಗಿ ಉಪಮುಖ್ಯಮಂತ್ರಿಗಳಾಗಿ,ಮುಖ್ಯಮಂತ್ರಿಗಳಾಗಿ ೧೩ ಬಜೆಟ್ ನೀಡಿ ಜನಮೆಚ್ಚುಗೆ ಗಳಿಸಿದವರು ಭಾರತದ ಅರ್ಥಶಾಸ್ತ್ರಜ್ಞರಿಂದ ಮೆಚ್ಚುಗೆ ಪಡೆದವರು.ಅವರ ಜನ್ಮದಿನದ ಪ್ರಯುಕ್ತ ಪಕ್ಷದ ಅಭಿಮಾನಿಗಳ ಬಳಗ, ಸ್ನೇಹಿತರ ಬಳಗದಿಂದ ನಾಳೆ ಅಮೃತಮಹೋತ್ಸವವನ್ನು ಆಯೋಜಿಸಿದ್ದೇವೆ ಎಂದರು.ಸುಮಾರು ೬ ರಿಂದ ೭ ಲಕ್ಷ ಜನ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸುಮಾರು ೩೦೦ ಎಕರೆ ಜಾಗದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗಾಗಿ ಮಧ್ಯಾಹ್ನದ ಭೋಜನ ವ್ಯವಸ್ಥೆ ಸಿದ್ದವಾಗಿದೆ
ಸುಮಾರು ೫೦ ಎಕರೆ ವಿಸ್ತಾರವಾದ ಜಾಗದಲ್ಲಿ ದೊಡ್ಡ ಪ್ರಮಾಣದ ಪೆಂಡಾಲ್ ಹಾಕಲಾಗಿದೆ ನಾಲ್ಕು ಲಕ್ಷ ಚೇರು ಹಾಕಲಾಗಿದ್ದು ೧೫೦೦ ಅಡುಗೆ ತಯಾರಕರಿಂದ ಬೋಜನ ಸಿದ್ದವಾಗುತ್ತಿದೆ. ಈಗಾಗಲೇ ಆರು ಲಕ್ಷ ಮೈಸೂರು ಪಾಕು ಸಿದ್ದವಾಗಿದೆ.
ಯಾವುದೇ ಗೊಂದಲವಿಲ್ಲದೇ ಸಮರ್ಪಕವಾಗಿ ಯುವಕರ ಪಡೆಯನ್ನು ಭೋಜನದ ವ್ಯವಸ್ಥೆಗಾಗಿ ನಿಯೋಜಿಸಲಾಗಿದೆ ಅಚ್ಚುಕಟ್ಟಾಗಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವರಾದ ಅಪ್ಪಾಜಿ ನಾಡಗೌಡರು, ಅಶೋಕ್ ಪಟ್ಟಣ್ಣ,ಕೆ.ಎಂ ರಾಮಚಂದ್ರ
ಪ್ಪ, ಪ್ರಕಾಶ್ ರಾಥೋಡ್ ,ಸೋಮಣ್ಣ ಬಸವರಾಜ್,ಶ್ರೀಶೈಲ ದಳವಾಯಿ,ಸುಬ್ಬಣ್ಣ, ಕೃಷ್ಣಮೂರ್ತಿ,ಜಗದೀಶ್ ,ಪರಿಷತ್ ಸದಸ್ಯರಾದ
ಅಬ್ದುಲ್ ಜಬ್ಬಾರ್,ಸುಭಾಷ್ ಚಂದ್ರ,ಬಳ್ಳಾರಿ ಷಣ್ಮುಖಪ್ಪ ಮತ್ತಿತರರಿದ್ದರು.ಅಮೃತಮಹೋತ್ಸವದ ವೇದಿಕೆ ಕಾರ್ಯಕ್ರಮ ನಾಳೆ ಬೆಳಗ್ಗೆ ೧೦ ಕ್ಕೆ ಚಲನಚಿತ್ರ ಸಂಗೀತ ನಿರ್ದೇಶಕರಾದ ಹಂಸಲೇಖ, ಸಾಧುಕೋಕಿಲ ಸಂಗೀತ ಕಟ್ಟಿಮನಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
೧೫೦೦ ಕೆಎಸ್ ಆರ್ ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ.ಸಮಾರಂಭದಲ್ಲಿ ರಾಷ್ಟ್ರ ನಾಯಕರಾದ ಕೆ.ಸಿ ವೇಣುಗೋಪಾಲ, ಸುರ್ಜಿವಾಲ,ಹರಿಪ್ರಸಾದ್ ಮಲ್ಲಿಕಾರ್ಜುನ್ ಖರ್ಗೆ ಹಾಗೂ ರಾಜ್ಯ ನಾಯಕರಾದ ಡಿ.ಕೆ ಶಿವಕುಮಾರ್ ಸೇರಿದಂತೆ ಎಲ್ಲಾ ಮುಖಂಡರು ಆಗಮಿಸಲಿದ್ದಾರೆ.ಪಕ್ಷದ ಸಂಘಟನೆಗೆ ಇದು ಪೂರಕವಾಗಿದೆ. ನಮ್ಮಲ್ಲಿ ಬಣ ಯಾವುದು ಇಲ್ಲ. ಸಿದ್ದರಾಮಯ್ಯ ಸಿಎಂ ಆಗಲಿ ಎಂಬ ಅಭಿಪ್ರಾಯ ಕೆಲವರಲ್ಲಿದೆ.ಅದೇ ರೀತಿ ಹಲವು ಮುಖಂಡರು, ಅವರವರ ನಾಯಕರು ಸಿಎಂ ಆಗಲಿ ಎಂದು ಅಪೇಕ್ಷಿಸುತ್ತಿರುವುದು ಸಹಜ ಎಂದರು.
೭೫ ನೇ ವರ್ಷದ ಸಿದ್ದರಾಮಯ್ಯ ಅವರ ಅಮೃತಮಹೋತ್ಸವ ಮಾತ್ರ ಇದು ಯಾವುದೇ ಕಾರಣಕ್ಕೂ ಸಿದ್ದರಾಮೋತ್ಸವ ಅಲ್ಲ ಎಂದು ಸ್ಪಷ್ಟಪಡಿಸಿದರು.