ಸಿದ್ದುರಿಂದ ಸೀಟು ಖರೀದಿ ಬಿಜೆಪಿ ಟೀಕೆ

ಬೆಂಗಳೂರು,ಜ.೧೩- ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಕೋಲಾರದಿಂದ ಸ್ಪರ್ಧಿಸಲು ಸೀಟು ಖರೀದಿಸಿರುವುದು ನಾಚಿಕೆಗೇಡು ಎಂದು ಬಿಜೆಪಿ ಟೀಕಿಸಿದೆ.ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸಲು ಜೆಡಿಎಸ್‌ನ ಶಾಸಕ ಶ್ರೀನಿವಾಸಗೌಡ ಅವರು ಕ್ಷೇತ್ರ ತ್ಯಾಗ ಮಾಡುತ್ತಿದ್ದು, ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ತಮ್ಮನ್ನು ಎಂಎಲ್‌ಸಿ ಮಾಡಿ ಸಚಿವರನ್ನಾಗಿಸುತ್ತಾರೆ ಎಂದು ಶ್ರೀನಿವಾಸಗೌಡ ಆಪ್ತರ ಬಳಿ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. ಇದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ, ಸಿದ್ದರಾಮಯ್ಯರವರು ಶ್ರೀನಿವಾಸಗೌಡ ಅವರಿಂದ ಸೀಟು ಖರೀದಿಸಿದ್ದಾರೆ ಎಂದು ಟೀಕಿಸಿದೆ.ಇಷ್ಟು ದಿನ ಹುಡುಕಾಟ ನಡೆಸಿ ಸಿದ್ದರಾಮಯ್ಯರವರು ಚುನಾವಣೆ ಸ್ಪರ್ಧೆಗೆ ಸೀಟು ಖರೀದಿಸಿರುವುದು ನಿಜಕ್ಕೂ ನಾಚಿಕೆಗೇಡು, ಶ್ರೀನಿವಾಸಗೌಡರ ಜತೆ ೧೭ ಕೋಟಿ ರೂ.ಗೆ ಡೀಲ್ ಮಾಡಿಕೊಂಡಿರುವುದು ಪ್ರಜಾಪ್ರಭುತ್ವದ ದುರಂತ. ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟಿಕೆಟ್ ಮಾರಾಟಕ್ಕಿಟ್ಟರೆ ವಿರೋಧ ಪಕ್ಷದ ನಾಯಕರು ಸೀಟನ್ನೇ ಖರೀದಿಸುತ್ತಾರೆ. ಚುನಾವಣಾ ರಾಜಕಾರಣದಲ್ಲಿ ಹಿಂದೆಂದೂ ಕಂಡುಕೇಳರಿಯದ ಅಕ್ರಮ-ಸಕ್ರಮ ಯೋಜನೆಗಳನ್ನು ಕಾಂಗ್ರೆಸ್ ಚಾನಲೆಗೆ ತಂದಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.ಹಲವು ಕೆಟ್ಟ ಪರಂಪರೆ ಹುಟ್ಟುಹಾಕಿದ ಕೀರ್ತಿ ಇರುವ ಕಾಂಗ್ರೆಸ್‌ನ ಕಿರೀಟಕ್ಕೆ ಕೋಲಾರ ಸೀಟು ಖರೀದಿ ಪ್ರವಸನ ಮತ್ತೊಂದು ಗರಿ, ಅಸ್ಥಿತ್ವಕ್ಕಾಗಿ ಮಾಡುವ ಕೊನೆಯ ಹೋರಾಟದಲ್ಲಿ ಎಲ್ಲ ನೀತಿಗಳನ್ನು ಬದಿಗೊತ್ತುವುದಿಲ್ಲ. ಆದರೆ, ಈ ಪ್ರಮಾಣದಲ್ಲಿ ಆಗುತ್ತಿರುವುದು ಪ್ರಜಾಸತ್ತಾತ್ಮತೆಗೆ ಮಾರಕ. ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯ, ಬಾದಾಮಿಯಲ್ಲಿ ಹಣಬಲ ಬಳಸಿ ಅತೀ ಕಡಿಮೆ ಅಂತರದಿಂದ ಗೆದ್ದಿದ್ದರು. ಪ್ರತಿಬಾರಿ ಹೊಸ ಹೊಸ ಮಂದಿಗೆ ಮೋಸ ಮಾಡುವ ಸಿದ್ದರಾಮಯ್ಯ, ಈ ಬಾರಿ ಕೋಲಾರ ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಕುಟೀಲತನವನ್ನು ಕೋಲಾರದ ಜನ ಆರಂಭದಲ್ಲೇ ನೋಡಿದ್ದಾರೆ ಎಂದು ಬಿಜೆಪಿ ಅಧಿಕಾರದ ಮದದಲ್ಲಿ ಡಿ.ಕೆ. ರವಿ ಅವರ ದನಿ ಅಡಗಿಸಿದ್ದೀರಿ.ಹಣ ಬಲದಿಂದ ಪ್ರಕರಣದ ಸೊಲ್ಲನಡಗಿಸಿದ್ದೀರಿ. ಈಗ ಕ್ಷೇತ್ರ ಖರೀದಿಸಿದ್ದೀರಿ. ಆದರೆ, ಮತದಾರರಖರೀದಿ ಸಾಧ್ಯವಿಲ್ಲ, ಕೋಲಾರದ ಜನತೆ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಸಿದ್ದರಾಮಯ್ಯರವರನ್ನು ಗುರಿಯಾಗಿಸಿ ಟ್ವೀಟ್ ಮಾಡಿದೆ.