ಸಿದ್ದು,ರಾಯರೆಡ್ಡಿ ಬಗ್ಗೆ ಟೀಕಿಸುವಾಗ ಎಚ್ಚರ ತಪ್ಪಿದರೆ ಹುಷಾರ್

ಸಂಜೆವಾಣಿ ವಾರ್ತೆ
ಕುಕನೂರು, ಜೂ.24: ಮೋದಿ ಕರೆಯಿಸಿಕೊಂಡು ತಾಲ್ಲೂಕ ಇಂಜಿನಿಯರಿಂಗ್ ಮತ್ತು ಕುಕನೂರು ಬಸ್ ನಿಲ್ದಾಣವನ್ನು ಉದ್ಘಾಟಿಸಲಿ ಮೊದಲು ಆಗ ಇವರಿಗೆ ಶಿಕ್ಷಣದ ಬಗ್ಗೆ ಎಷ್ಟು ಅರಿವಿದೆಯೆಂದು ತಿಳಿಯುತ್ತದೆ. ಎಂದು ಕಾಂಗ್ರೆಸ್ ಮುಖಂಡ ಶಿವಣ್ಣ ರಾಯರೆಡ್ಡಿ ಪ್ರತಿಕ್ರಿಯಿಸಿದರು.
ಅವರು ಮಂಗಳವಾರ ಪತ್ರಿಕೆಯೊಂದಿಗೆ ಮಾತನಾಡಿ. ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿದೆ ಎಲ್ಲರಿಗೂ ಮಾತನಾಡುವ ಹಕ್ಕನ್ನು ಸಂವಿಧಾನ ಕೊಟ್ಟಿದೆ ಆಡಳಿತದಲ್ಲಿ ಇದ್ದ ಪಕ್ಷವನ್ನು ವಿರೋಧ ಪಕ್ಷಗಳ ಟೀಕೆ ಮಾಡೋದು ಕಾಮನ್ ಇದು ಎಲ್ಲಾ ರಾಜ್ಯಗಳಲ್ಲಿ ಇರೋದೇ ಸತ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮಗೆ ಗೊತ್ತಿರುವ ವಿಷಯವನ್ನು ಕುಕನೂರಿನ ಸಮಾರಂಭದಲ್ಲಿ ಮಾತನಾಡಿದ್ದಾರೆ ಅದು ಅವರ ಸವಿಂಧಾನ ಹಕ್ಕು ಇದನ್ನು ಆಡಳಿತದಲ್ಲಿರುವವರು ಎದುರಿಸಬೇಕೇ ಹೊರತು ರಂಪಾಟ ಮಾಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದು ರಾಯರೆಡ್ಡಿ ಅವರು ಎಲ್ಲಾ ಬಗೆಯ ಫುಡ್ ಕಿಟ್ ಗಳನ್ನು ಜನರಿಗೆ ಅವರ ಸ್ವಂತ ಹಣದಲ್ಲಿ ಕೊಟ್ಟಿದ್ದಾರೆ ಯಲಬುರ್ಗ ಕ್ಷೇತ್ರದ ಜನರಿಗೆ ತಮಗೆ ನೀಗಿದಷ್ಟು ಸಹಾಯ ಮಾಡಿದ್ದಾರೆ ಆದರೆ ನೀವೂ ಕೂಡ ನಿಮ್ಮ ಹಾಲಿ ಸಿಎಂ ಯಡಿಯೂರಪ್ಪ ಅವರನ್ನು ಕರೆಸಿ ಆಹಾರ ಧಾನ್ಯಗಳನ್ನು ನೀಡಬಹುದು ಆದರೆ ಇದನ್ನು ಮಾಡಲಾಗದೆ ಬೇರೆಯವರನ್ನು ಟೀಕೆ ಮಾಡುವುದು ಸರಿಯೇ ನಿಮ್ಮ ಹತಾಶೆ ತೋರಿಸುತ್ದೆ.ಈಗಲೂ ಕಾಲ ಮಿಂಚಿಲ್ಲ ಸಿಎಂ ಕರೆಸಿ ಕಾಂಗ್ರೆಸ್ ಸರ್ಕಾರದಲ್ಲಿ ಮಾಜಿಗಳು ಕಟ್ಟಿರುವ ಹೈಟೆಕ್ ಆಸ್ಪತ್ರೆ ಕುಕನೂರು ಮತ್ತು ತಳಕಲ್ ಬಸ್ ನಿಲ್ದಾಣ. ತಳಕಲ್ ಇಂಜಿನಿಯರಿಂಗ್ ಕಾಲೇಜು.ಸ್ಕಿಲ್ ಕಾಲೇಜ್. ಹೀಗೆ ಅನೇಕ ಕಾಮಗಾರಿಗಳು ಅರ್ಧಕ್ಕೆ ನಿಂತಿರುವ ಸುಂದರವಾದ ಕಟ್ಟಡವನ್ನು ಸುಣ್ಣ ಬಣ್ಣ ಕರೆಂಟು ಒದಗಿಸಿ ನಲ್ಲಿ ಯಡಿಯೂರಪ್ಪ ಮತ್ತು ಮೋದಿಯನ್ನು ತಾಲ್ಲೂಕಿಗೆ ಕರೆಸಿ ಉದ್ಘಾಟನೆ ಮಾಡಿಸಬಹುದು ಸುಂದರ ಸಮಾರಂಭಕ್ಕೆ ನಮ್ಮಂಥವರನ್ನು ಕರೆದರೂ ಗೌರವಿಸಿ ಹೋಗುತ್ತೇವೆ ಆದರೆ ಬಿಜೆಪಿ ಕಾರ್ಯಕರ್ತರು ಎಚ್ಚರದಿಂದ ವರ್ತಿಸಬೇಕೆಂದು ಶಿವಣ್ಣವರು ಭಾಜಪಕ್ಕೆ ಟಾಂಗ್ ನೀಡಿದ್ದಾರೆ