’ಸಿದ್ದುಗೆ ತಲೆ ಕೆಟ್ಟಿದೆ, ಈಶ್ವರಪ್ಪ ವಾಗ್ದಾಳಿ

ಶಿವಮೊಗ್ಗ,ಏ.೫: ’ಸಿದ್ದರಾಮಯ್ಯರಿಗೆ ತಲೆ ಕೆಟ್ಟು ಹೋಗಿದೆ. ರಾಜ್ಯದಲ್ಲಾಗುತ್ತಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆ ಅವರಿಗೆ ಕೇಳುವುದಕ್ಕೆ, ನೋಡುವುದಕ್ಕೆ ಆಗುತ್ತಿಲ್ಲ. ಸಿಎಂ ಹುದ್ದೆ ಕಳೆದುಕೊಂಡ ನಂತರ ಅವರಿಗೆ ಹುಚ್ಚು ಹಿಡಿದಿದೆ’ ಎಂದು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪರವರು ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಗ್ರಾಮೀಣಾಭಿವೃದ್ದಿ-ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ರವರ ಮಾತು ಕೇಳುತ್ತಿಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಸಿದ್ದರಾಮಯ್ಯ ಆಗ್ರಹಕ್ಕೆ ಈಶ್ವರಪ್ಪ ಆರೋಪಗಳ ಸುರಿಮಳೆಗೈದರು.

’ಅಧಿಕಾರಿಗಳು ಮಾತು ಕೇಳುತ್ತಿಲ್ಲ ಎಂಬುವುದರಲ್ಲಿ ಯಾವುದೇ ಹುರುಳಿಲ್ಲ. ಇಷ್ಟರಲ್ಲಿಯೇ ಬೆಂಗಳೂರಿನಲ್ಲಿ ಗ್ರಾಮೀಣ ಇಲಾಖೆಯ ಸಾಧನೆಗಳ ಕುರಿತಂತೆ ಅಧಿಕಾರಿಗಳ
ಸಭೆ ನಡೆಸಿ, ಅದರ ಸಮಗ್ರ ವಿವರವನ್ನು ಸಿದ್ದರಾಮಯ್ಯಗೆ ನೀಡಲಿದ್ದೆನೆ’ ಎಂದರು.

ಇಲಾಖೆಯಲ್ಲಾಗುತ್ತಿರುವ ಅಭಿವೃದ್ದಿ ಕಾರ್ಯಗಳನ್ನು ಸಹಿಸಲಾಗದೆ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ. ಏನು ಮಾತನಾಡುತ್ತಿದ್ದೆನೆಂಬ ಅರಿವಿಲ್ಲದೆ, ಬಾಯಿಗೆ ಬಂದಂತೆ
ಹೇಳುತ್ತಿದ್ದಾರೆ’ ಎಂದು ಟೀಕಾಪ್ರಹಾರ ನಡೆಸಿದರು. ’ಕಾಂಗ್ರೆಸ್ ಪಕ್ಷದಲ್ಲಿ ನಿಮ್ಮ ಮಾತನ್ನೇ ಯಾರು ಕೇಳುತ್ತಿಲ್ಲ. ಮೈಸೂರು ಮೇಯರ್ಚು ನಾವಣೆ ಇದಕ್ಕೆ ಸಾಕ್ಷಿಯಾಗಿದೆ. ನನ್ನ ಮಾತೇ ಕೇಳುತ್ತಿಲ್ಲ ಎಂದು ನೀವೇ ಹೇಳಿಕೊಂಡಿದ್ದಿರಿ. ಕಾಂಗ್ರೆಸ್ ಪಕ್ಷದಲ್ಲಿ ಕಸದ ತೊಟ್ಟಿಯಲ್ಲಿರುವ ವಸ್ತುವಾಗಿ ಪರಿವರ್ತಿತರಾಗಿದ್ದೀರಿ. ಇಂತಹ ಸ್ಥಿತಿಯಲ್ಲಿರುವ ನೀವು ನನ್ನ ಬಗ್ಗೆ ಮಾತನಾಡುತ್ತಿದ್ದಿರಿ’ ಎಂದು ಸಿದ್ದು ವಿರುದ್ದ ಹರಿಹಾಯ್ದರು.