ಸಿದ್ದಾರೂಢರ ರಥೋತ್ಸವಕ್ಕೆ ಚಾಲನೆ ನೀಡಿದ ಕಡದಳ್ಳಿ ದಂಪತಿಗಳು

ಲಿಂಗಸುಗೂರ,ಮಾ.೩೧- ಪಟ್ಟಣದ ಕರಡಕಲ್ ಗ್ರಾಮದ ಆರಾಧ್ಯ ದೈವ ಸಿದ್ದಾರೂಢರ ರಥೋತ್ಸವಕ್ಕೆ ಚಾಲನೆ ನೀಡಿದ ಪಟ್ಟಣದ ಖ್ಯಾತ ಮಕ್ಕಳ ತಜ್ಞರಾದ ಡಿ.ಎಚ್ ಕಡದಳ್ಳಿ ದಂಪತಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು.
ನಿನ್ನೆ ನಡೆದ ವೇದಾಂತ ಪರಿಷತ್ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಪ್ರತಿ ವರ್ಷ ಯುಗಾದಿ ನಂತರ ರಾಮನವಮಿ ದಿನದಂದು ಶ್ರೀ ಸಿದ್ಧಾರೂಢ ಸ್ವಾಮಿಗಳ ರಥೋತ್ಸವ ಜರುಗುತ್ತದೆ. ಅದರಂತೆ ಕರಡಕಲ್ ಗ್ರಾಮದ ಜನರು ಸಿದ್ದಾರೂಢ ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಭಕ್ತರು ಬಂದು ಸಿದ್ದಾರೂಢರ ರಥೋತ್ಸವದಲ್ಲಿ ಪಾಲ್ಗೊಂಡು ಜಯಘೋಷ ಹಾಕಿದರು.
ಕರಡಕಲ್ ಸಿದ್ದಾರೂಢ ಮಠದ ಪೀಠಾಧಿಪತಿ ಸಹಜಾನಂದ ಅವಧೂತರು ಹಾಗೂ ಕೃಷ್ಣಾ ನಂದ ಅವಧೂತರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗುತ್ತದೆ .
ಈ ಸಂದರ್ಭದಲ್ಲಿ ಭೂಪನಗೌಡ ಪಾಟೀಲ್, ಕರಡಕಲ್ ಗಿರಿಮಲ್ಲನಗೌಡ ಮಾಲಿ ಪಾಟೀಲ್, ಕರಡಕಲ್ ಶರಣಗೌಡ ಮಾಲಿಪಾಟೀಲ, ಡಾ. ಸುದರ್ಶನ್ ಸಜ್ಜನ್, ಡಾ. ರಂಗನಾಥ ಸಂಗೆ ಪಾಂಗೆ, ಡಿ.ಎಸ್ ಹೂಲಗೇರಿ, ಸಿದ್ದು ಬಂಡಿ, ಈಶ್ವರ ವಜ್ಜಲ್, ಪಾಮಯ್ಯ ಮುರಾರಿ ಸಂದೀಪ್ ಮುರಾರಿ ಪರುಶುರಾಮ ಕೆಂಭಾವಿ ಗುರುಲಿಂಗಪ್ಪ ಹೊಸಮನಿ ತಿಪ್ಪಣ್ಣ ಮ್ಯಾಗಳಮನಿ ಬಸವರಾಜ ಮ್ಯಾಗೇರಿ, ಸುರೇಶ್ ಕೋರೆ, ನಾಗರಾಜ್ ತೇಳಿಗೇರಿ, ರಮೇಶ್ ಮ್ಯಾಗಳಮನಿ, ಮೋಹನ್ ಗೋಸಲೆ, ಅಮರೇಶ ಮ್ಯಾಗೇರಿ, ಶ್ರೀರಾಂ ಮ್ಯಾಗಳಮನಿ ಸೇರಿದಂತೆ ಇತರರು ರಥೋತ್ಸವದಲ್ಲಿ ಭಾಗವಹಿಸಿದ್ದರು.