ಸಿದ್ದಾರಾಮೋತ್ಸವದ ಕಾರ್ಯಕ್ರಮಕ್ಕೆ ದಾವಣಗೆರೆ ಚಲೋ

ಶಹಾಪೂರ:ಜು.28:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಗಸ್ಟ್ ಮೂರರಂದು ದಾವಣಗೆರೆಯಲ್ಲಿ ನಡೆಯಲಿರುವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಕುರಿಗಾರರು ಭಾಗವಹಿಸಬೇಕು ಎಂದು ಕರ್ನಾಟಕ ಕುರಿ ಮತ್ತು ಮೇಕೆ ಮಹಾಮಂಡಳಿಯ ಮಾಜಿ ಅಧ್ಯಕ್ಷ ಪಂಡಿತ್ ರಾವ್
ಛಿದ್ರಿ ಹೇಳಿದರು.

ನಗರದ ಪಶು ವೈದ್ಯಕೀಯ ಸಭಾಂಗಣದಲ್ಲಿ ಕುರಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಕುರಿಗಾರರಿಗೆ ಅಪಾರ ಸಹಾಯ ಮಾಡಿದ್ದಾರೆ ಸತ್ತ ಕುರಿಗಾರರ ಅನುಗ್ರಹ ಯೋಜನೆಯ ಹಣ ಹೆಚ್ಚಳ ಕುರಿ ಸಂಘಗಳ ವಿಶೇಷ ಘಟಕ ಯೋಜನೆ ಸತ್ತ ಕುರಿಗಾರರ ಅನುಗ್ರಹ ಯೋಜನೆಯ ಹಣ ಹೆಚ್ಚಳ. ಒಂದಾವರ್ತಿ ಹಣ ಸಂಘಗಳಿಗೆ ನೀಡುವಿಕೆ ಸೇರಿದಂತೆ ಹಲವಾರು ಯೋಜನೆಗಳನ್ನು ನೀಡಿದ್ದಾರೆ ಕರ್ನಾಟಕದ ಕುರಿ ಮತ್ತು ಮೇಕೆಗಳ ಮಹಾಮಂಡಳಿ ಸ್ಥಾಪನೆಗೆ ನೆರವಾಗಿದ್ದು ಪ್ರತಿ ಜಿಲ್ಲೆಗೆ ಒಂದರಂತೆ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ನಿರ್ದೇಶಕರ ಕಚೇರಿಯನ್ನು ಸ್ಥಾಪಿಸಲಾಗಿದೆ. ವರ್ಸಿ ಕುರಿಗಾರಿಗೆ ಅನುಕೂಲವಾಗಲೆಂದು ಟೆಂಟ್ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿದ್ದಾರೆ . ಕುರಿ ಸಂಘಗಳಿಗೆ ಔಷಧಿಗಳನ್ನು ನೇರವಾಗಿ ತಲುಪಿಸುವ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಿಂದ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಕುರಿಗಾರರು ಭಾಗವಹಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿಯ ನಿಗಮದ ನಿರ್ದೇಶಕರಾದ ಶಾಂತಗೌಡ ನಾಗನಟಗಿ, ಮಾಳಪ್ಪ ಸುಂಕದ್, ಬಸವರಾಜ್ ಕರೆಗಾರ್ ನಿಂಗಣ್ಣ ರಾಜಪುರ, ಮಲ್ಲಣ್ಣ ಅಲಿಪುರ್, ಮುನಿಯಪ್ಪ ಗೌಡ, ಬೀರಲಿಂಗ ಪೂಜಾರಿ, ಬಲಭೀಮ ಮಡ್ನಾಳ್, ಸೇರಿದಂತೆ ಇತರರು ಇದ್ದರು.