ಸಿದ್ದಾಪುರ ಗ್ರಾಮದಲ್ಲಿ ವಾಂತಿ ಭೇದಿ ಹತೋಟಿಗೆ – ಡಾ. ಭರತ್


ಸಂಜೆವಾಣಿ ವಾರ್ತೆ
ಸಂಡೂರು: ಜು: 2  ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ವಾಂತಿ ಭೇದಿ ಹತೋಟಿಗೆ ಬಂದಿದ್ದು ಇಡೀ ಗ್ರಾಮದಲ್ಲಿ ನಿತ್ಯ ಜಾಗೃತಿ ಹಾಗೂ ಸ್ವಚ್ಚತಾ ಕಾರ್ಯವನ್ನು ಭರದಿಂದ ಕೈಗೊಂಡಿದ್ದು ಸಾರ್ವಜನಿಕರ ಸಹಕಾರವೂ ಸಹ ಅತಿ ಅಗತ್ಯವಾಗಿದೆ ಎಂದು ಟಿ.ಹೆಚ್.ಓ ಡಾ.ಭರತ್ ತಿಳಿಸಿದರು.
ಅವರು ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ವಾಂತಿ ಬೇಧಿ ಪ್ರಕರಣ ಹೆಚ್ಚಾದ ಹಿನ್ನಲೆಯಲ್ಲಿ ಶಾಸಕರು ಹಾಗೂ ಇಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು ಅದಕ್ಕೆ ಬೇಕಾದ ಎಲ್ಲಾ ಸೂಕ್ತ ವ್ಯವಸ್ಥೆ ಮಾಡಿದ ಪರಿಣಾಮ ಹಾಗೂ ನಿತ್ಯ ಕ್ರಮ ಕೈಗೊಂಡ ಪರಿಣಾಮ ಇಂದು ಕೇವಲ ಒಂದು ಪ್ರಕರಣ ಮಾತ್ರ ವರದಿಯಾಗಿದ್ದು, ಸಂಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ವಾಪಸ್ಸು ಗ್ರಾಮಕ್ಕೆ ಬಂದಿದ್ದಾರೆ, ಮತ್ತೆ ಈ ಸಂಜೆವರೆಗೂ ಯಾವುದೇ ಪ್ರಕರಣ ವರದಿಯಾಗಿಲ್ಲ, ನಿಯಂತ್ರಣ ಕ್ರಮಗಳು ಮುಂದುರೆಸಲಾಗಿದೆ ಕ್ಲೋರಿನೇಟೆಡ್ ನೀರು ಟ್ಯಾಂಕರ್ ಮೂಲಕ ಸಿಂಪಡಿಸಲಾಗುತ್ತಿದೆ, ಪೈಪ್ ಲೈನ್ ದುರಸ್ತಿ ಕಾರ್ಯ ಮಾಡಲು ಸೂಚಿಸಲಾಗಿದೆ,
ಈ ಸಂದರ್ಭದಲ್ಲಿ ಗ್ರಾಮದಲ್ಲಿ ಆಶಾ ಮತ್ತು ಆರೊಗ್ಯ ಸಿಬ್ಬಂದಿಯವರಿಂದ ಮನೆ ಮನೇ ಸಮೀಕ್ಷೆ ಮುಂದುವರೆಸಲಾಗಿದೆ, ಶುಧ್ಧ ಕುಡಿಯುವ ನೀರಿನ ಕುರಿತು ಜಾಗೃತಿ ಜಾಥ ನಡೆಸಲಾಯಿತು, ಜಾಥದಲ್ಲಿ ಡಾ.ಅಕ್ಷಯ್, ಸಂತೋಷ, ದೀಪಾ,ಅನಿತಾ, ನೀರು ಮತ್ತು ನೈರ್ಮಲ್ಯ ತಾಲೂಕು ವಿಭಾಗದ ಕೊಟ್ರೇಶ್,ಬಂಡೆಗೌಡ,ಆಶಾ ಕಾರ್ಯಕರ್ತೆ ಪರಿಮಳ,ರೇಣುಕಾ,ಗಿತಾ,ಅಂಗನಾವಾಡಿ ಕಾರ್ಯಕರ್ತೆ ಲಕ್ಷ್ಮಿ, ಕೃಷ್ಣಾನಗರ ಎಮ್.ಎಮ್.ಯು ತಂಡದ ವೈದ್ಯರು ಮತ್ತು ಸಿಬ್ಬಂದಿಯವರು ಹಾಜರಿದ್ದರು.

One attachment • Scanned by Gmail