ಸಿದ್ದಾಂರ್ಥ ಕೋನಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ 7 ಲಕ್ಷ ರೂ ವಶ ಮೂವರ ಬಂಧನ

ಬಳ್ಳಾರಿ ಅ 26 : ನಗರದ ಸಿದ್ದಾರ್ಥ ಕಾಲೋನಿಯ, ಶ್ರೀ ಹರಿ ನಿಲಯ ಅಪಾರ್ಟ್ಮೆಂಟ ಮನೆಯೊಂದರಲ್ಲಿ ಕ್ರಿಕೇಟ್ ಬೆಟ್ಟಿಂಗ್ ನಡೆಸುತ್ತಿದ್ದ ಮೂವರನ್ನು ಅಪರಾಧ ಪತ್ತೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಸಿ.ಇ.ಎನ್. ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಜಿ.ಆರ್.ಷಣ್ಮುಖಪ್ಪ ಹಾಗು ಸಿಬ್ಬಂದಿಯವರು ದಾಳಿ ಮಾಡಿ ಕ್ರಿಕೇಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಎಸ್. ರಮೇಶ್, ಅಲಾಂ ಭಾಷ ಮತ್ತು ಬಾಲಾಜಿ ರವರನ್ನು ವಶಕ್ಕೆ ಪಡೆದುಕೊಂಡು ಅವರಿಂದ 7 ಲಕ್ಷ ರೂ‌ಬನಗದು ಹಾಗು 3 ಮೊಬೈಲ್ಗಳನ್ನು ಜಪ್ತು ಮಾಡಿದ್ದಾರೆ.
ಇನ್ನೂ ಇಬ್ಬರೂ ಆರೋಪಿತರಾದ ಗುಂತಕಲ್ಲು ಹನುಮಂತ ರೆಡ್ಡಿ, ರಾಜು ನಲ್ಲ ರಾಜು ಪರಾರಿಯಾಗಿದ್ದಾರೆ. ಈ ಬಗ್ಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.