ಸಿದ್ದಾಂತ ಶಿಖಾಮಣಿ ತತ್ವಸಂದೇಶ ಅಳವಡಿಸಿಕೊಳ್ಳಿ : ಹೆಡಗಾಪೂರ ಶ್ರೀ

ಔರಾದ :ಮಾ.17: ಆದಿ ಜಗದ್ಗುರು ರೇಣುಕಾಚಾರ್ಯರ ಸಿದ್ದಾಂತ ಶಿಖಾಮಣಿ ಗ್ರಂಥಕ್ಕೆ ವೀರಶೈವ ಧರ್ಮದಲ್ಲಿ ಪೂಜ್ಯನೀಯ ಸ್ಥಾನವಿದೆ, ಶಿವಯೋಗ ಮಾರ್ಗ, ಲಿಂಗಾಗ ಸಾಮರಸ್ಯದ ತತ್ವಸಂದೇಶ ನಾವೆಲ್ಲ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯೋಣ ಎಂದು ಹೆಡಗಾಪೂರ ಮಠದ ಪೂಜ್ಯ ಶ್ರೀ ಶಿವಲಿಂಗ ಶಿವಾಚಾರ್ಯರು ನುಡಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವೀರಶೈವ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸಹಯೋಗದಲ್ಲಿ ಜರುಗಿದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಉತ್ಸವದಲ್ಲಿ ಆಶೀರ್ವಚನ ನೀಡಿದ ಅವರು ಸಮಸ್ತ ಮನುಕುಲಕ್ಕೆ ಉಪದೇಶ ಮಾಡುವ ಗ್ರಂಥ ಸಿದ್ಧಾಂತ ಶಿಖಾಮಣಿ. ವೀರಶೈವ ಧರ್ಮದ ಸಾರವನ್ನು ತಿಳಿಸುವ ಸಿದ್ಧಾಂತ ಶಿಖಾಮಣಿ ಗ್ರಂಥವು 28 ಶಿವಾಗಮಗಳ ಸಾರವನ್ನು ಒಳಗೊಂಡಿದೆ ಎಲ್ಲರೂ ಪಾರಾಯಣ ಮಾಡಬೇಕು ಎಂದು ತಿಳಿಸಿದರು.

ಹಣೇಗಾಂವ ಶ್ರೀ ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಮಾತನಾಡಿ ಮಾನವಿ?ಯ ಉದಾತ್ತ ಮೌಲ್ಯಗಳನ್ನು ಸಂವರ್ಧಿಸಿದ ಕೀರ್ತಿ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ, ಎಲ್ಲ ಧರ್ಮ ಹೇಳುವುದು ಒಂದೇ ಜಗದ್ಗುರು ರೇಣುಕಾಚಾರ್ಯರ ಸಿದ್ದಾಂತ ಶಿಖಾಮಣಿ, ಬಸವಣ್ಣನವರ ವಚನಗಳು, ದಾಸರ ಕೀರ್ತನೆಗಳ, ಎಲ್ಲ ಧರ್ಮದ ಗ್ರಂಥೋಪದೇಶ ಒಂದೇ ಮಾನವ ಧರ್ಮ ದೊಡ್ಡದು, ಧರ್ಮ ರಕ್ಷಣೆ ನಮ್ಮ ಸಂಸ್ಕøತಿ ರಕ್ಷಣೆ. ಧರ್ಮೋ ರಕ್ಷತಿ ರಕ್ಷಿತಃ ಎನ್ನುವಂತೆ ನಾವೆಲ್ಲರೂ ಧರ್ಮ ರಕ್ಷಣೆ ಮಾಡಬೇಕು ಅಂದಾಗ ಮಾತ್ರ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ, ಸ್ವಾರ್ಥಕ್ಕಾಗಿ ನಾವು ಧರ್ಮ ಒಡೆದರೆ, ಅದು ನಮ್ಮನ್ನು ಒಡೆಯುತ್ತದೆ. ಅರಿವು ಮತ್ತು ಆಚಾರಗಳ ಮೂಲಕ ಮಾನವನ ಬದುಕು ಶ್ರೀಮಂತಗೆuಟಿಜeಜಿiಟಿeಜಳ್ಳಬೇಕು, ಸುಖ ಸಮೃದ್ಧಿ ಬದುಕಿಗೆ ಧರ್ಮ ಪರಿಪಾಲನೆ ಮುಖ್ಯ ಎಂದರು.

ಆಂಧ್ರದ ಗುಡಿಮೇಟ ಮಹಾದೇವ ಸ್ವಾಮಿ ಅವರು ಮಾತನಾಡಿ ಜಗತ್ಕಲ್ಯಾಣಕ್ಕಾಗಿ ಶಾಂತಿ ಸಾಮರಸ್ಯ ನಿರ್ಮಾಣಕ್ಕಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಕೊಲನುಪಾಕ ಶ್ರೀ ಸೋಮೇಶ್ವರ ಮಹಾಲಿಂಗದಿ ಆವಿರ್ಭವಿಸಿದರು. ಪರಶಿವನ ಸದ್ಯೋಜಾತ ಮುಖದಿಂದ ಅವತರಿಸಿದ ಪರಮಾಚಾರ್ಯರು. ಮಹಾಮುನಿ ಅಗಸ್ತ್ಯರಿಗೆ ಶಿವಜ್ಞಾನವನ್ನು ಬೋಧಿಸಿ ಉದ್ಧರಿಸಿದವರು. ಜಾತಿ ಮತ ಪಂಥಗಳ ಗಡಿ ಮೀರಿ ಮಾನವೀಯತೆಯ ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿದ ಶ್ರೇಯಸ್ಸು ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಕನ್ನಡಾಂಬೆ ವೃತ್ತದಿಂದ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ಹಿರಿಯರು, ಯುವಕರು ಕುಣಿದು ಕುಪ್ಪಳಿಸಿದರು. ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಾದ ಸಂಜು ಸ್ವಾಮಿ ಉಜನಿ ಹಾಗೂ ಮಲ್ಲಿಕಾರ್ಜುನ ನಾಗಮಾರಪಳ್ಳಿ ಅವರಿಂದ ಸಂಗೀತ ಸುಧೆ ಜರುಗಿತು.

ಈ ಸಂದರ್ಭದಲ್ಲಿ ಕೌಳಾಸ ಬಸವಲಿಂಗ ಶಿವಾಚಾರ್ಯರು, ನಾಗಭೂಷಣ ಸ್ವಾಮಿ, ರಾಜು ಮಹಾರಾಜ, ಶಿವಕುಮಾರ ಸ್ವಾಮಿ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜ ದೇಶಮುಖ, ಗುಂಡಯ್ಯ ಸ್ವಾಮಿ, ಗೋರಕ್ಷಣಾ ಸಮಿತಿ ಅಧ್ಯಕ್ಷ ಶಿವರಾಜ ಅಲ್ಮಾಜೆ, ಗೌರವ ದೇಶಮುಖ, ರಾಜಕುಮಾರ ಏಡವೆ, ಶಂಕು ನಿಸ್ಪತೆ, ಸಂತೋಷ ದ್ಯಾಡೆ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ತಾಲೂಕಾಧ್ಯಕ್ಷ ಆನಂದ ದ್ಯಾಡೆ, ನಗರಾಧ್ಯಕ್ಷ ಅಮರಸ್ವಾಮಿ ಸ್ಥಾವರಮಠ, ದಯಾನಂದ ಸ್ವಾಮಿ ಸೇರಿದಂತೆ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಆಯೋಜಿಸಿದ ಜಗದ್ಗುರು ರೇಣುಕಾಚಾರ್ಯ ಜಯಂತಿಯ ಉತ್ಸವದಲ್ಲಿ ಮೇಘಶ್ರೀ ಬಸವರಾಜ ಶೆಟಕಾರ ಅವರು ಜಗದ್ಗುರು ರೇಣುಕಾಚಾರ್ಯರ ವೇಷದಲ್ಲಿ ಗಮನ ಸೆಳೆದರು.