
(ಸಂಜೆವಾಣಿ ವಾರ್ತೆ)
ಹುಮನಾಬಾದ:ಆ.20: ಸಿದ್ದಸಿರಿ ಸೌಹಾರ್ದ ಸಹಕಾರಿ ಸಂಘ ಗ್ರಾಹಕರಿಗೆ 24ಗಂಟೆಗಳ ಸೇವೆಸಲ್ಲಿಸುವ ಬ್ಯಾಂಕ ಆಗಿದೆ ಎಂದು ಬಿಜಾಪೂರ ಶಾಸಕರಾದ ಬಸವನಗೌಡ ಪಾಟೀಲ ತಾಲೂಕಿನ ಹಳ್ಳಿಖೇಡ ಬಿ ಪಟ್ಟಣದಲ್ಲಿ 154ಶಾಖೆ ಉದ್ಘಾಟನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಿಳಿಸಿದರು. ರೈತರ ವ್ಯಾಪಾರಸ್ಥರ ಆರ್ಥಿಕ ಮಟ್ಟ ಸುಧಾರಿಸಲು ಬ್ಯಾಂಕ ಶ್ರಮಿಸುತಿದೆ ಎಂದರು. ಕಬ್ಬು ಬೆಳೆಗಾರರಿಗೆ ಸಾಲಾ ಸೌಲಭ್ಯ ನೀಡುತಿದೆ ಇದರ ಸ್ವದುಪಯೊಗ ಪಡೆದುಕೊಳ್ಳಲು ಕರೆ ನೀಡಿದರು. ಹುಮನಾಬಾದ ಶಾಸಕ ಸಿದ್ದು ಪಾಟೀಲ ಶಾಖೆ ಉದ್ಘಾಟಿಸಿ ಮಾತನಾಡಿ ರೈತರು ಈ ಸಂಘದ ಸ್ವದುಪಯೊಗ ಪಡೆದುಕೊಳ್ಳಲು ತಿಳಿಸಿದರು. ಶಾಸಕ ಶರಣುಸಲಗರ, ಮಾಜಿ ಶಾಸಕ ಸುಭಾಷ ಕಲ್ಲೂರ ಮಾತನಾಡಿದರು. ಹಳ್ಳಿಖೇಡ ಚಿಕ್ಕಮಠದ ಪಂಡಿತರಾಧ್ಯ ಶಿವಚಾರ್ಯರು, ಚಳಕಾಪೂರ ಮಠದ ಶಂಕರಾನಂದ ಸ್ವಾಮಿಗಳು ಧಿವ್ಯ ಸಾನಿಧ್ಯ ವಹಿಸಿದರು. ನಿರ್ದೇಶಕರಾದ ಆಕಾಶ ಗುತ್ತೆದ್ದಾರ, ಡಾ. ರಮೇಶ ಬಿರಾದರ, ವ್ಯವಸ್ಥಾಪಕ ನಿರ್ದೇಶಕರಾದ ಜ್ಯೋತಿಬಾ ಖಂಡಗಾಳೆ, ಪ್ರಭಾಂದಕರಾದ ಉಮೇಶ ಹಾರಿವಾಳ, ಸಹಾಯಕ ಪ್ರಭಂದಕರಾದ ಸಂಗಮೇಶ, ಬೀದರ ವಲಯಅಧಿಕಾರಿ ಸುರೇಶ ದಾಡಗಿ ಉಪಸ್ಥಿತರಿದ್ದರು. ಪ್ರಗತಿಪರ ರೈತರಾದ ಮಲ್ಲಪ್ಪಾ ಸಿತಳಗೇರಾ, ವಿಷ್ಣುಕಾಂತ, ದೀಲಿಪಕುಮಾರ ಕಿವಡೆ, ಶಿವಕುಮಾರ ತಿರ್ಥಾ ಸನ್ಮಾನಿಸಿದರು.