ಸಿದ್ದಲಿಂಗಶ್ರೀಗಳ ಜನ್ಮದಿನ ಮಹಾಪ್ರಸಾದ ವಿತರಣೆ

ತಾಳಿಕೋಟೆ:ಜೂ.9: ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರ 22ನೇ ವರ್ಷದ ಜನ್ಮದಿನದ ನಿಮಿತ್ಯವಾಗಿ ಭಕ್ತವೃಂದದವರಿಂದ ಪಟ್ಟಣದ ಶ್ರೀ ನಿಮಿಶಾಂಭಾದೇವಿ ಮಂದಿರದ ಮುಂಭಾಗದಲ್ಲಿ ಶನಿವಾರರಂದು ಮಹಾ ಪ್ರಸಾದದ ವ್ಯವಸ್ಥೆ ಕಲ್ಪಿಸಿ ತಮ್ಮ ಭಕ್ತಿಯನ್ನು ಶ್ರೀಮಠಕ್ಕೆ ಮತ್ತು ಶ್ರೀಗಳಿಗೆ ಅರ್ಪಿಸಿದರು.
ಮಹಾ ಪ್ರಸಾದ ವಿತರಣಾ ಕಾರ್ಯಕ್ಕೆ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಅವರು ಚಾಲನೆ ನೀಡಿದರು. ಈ ಸಮಯದಲ್ಲಿ ಮಾತನಾಡಿದ ಅವರು ಉತ್ತರ ಕರ್ನಾಟಕ ಭಾಗದ ಪುರಾತನ ಮಠವಾದ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗಶ್ರೀಗಳ ಜನ್ಮದಿನದ ನಿಮಿತ್ಯವಾಗಿ ಭಕ್ತಾಧಿಗಳಿಗೆ ಮಹಾ ಪ್ರಸಾದ ವಿತರಿಸುವ ಮೂಲಕ ಜನರಲ್ಲಿ ದಾಸೋಹದ ಪರಿಕಲ್ಪನೆ ಮೂಡಿಸಲು ಮುಂದಾಗಿರುವದು ಶ್ಲಾಘನೀಯವಾಗಿದೆ ಕಳೆದ ವರ್ಷ ಶ್ರೀಗಳ ಜನ್ಮದಿನದ ಆಚರಣೆ ಸಮಯದಲ್ಲಿ ಮನೆ ಮನೆಗೆ ತೆರಳಿ ಸಸಿಗಳನ್ನು ವಿತರಿಸುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಲಾಗಿತ್ತು ಈ ಭಾರಿ ದಾಸೋಹದ ವ್ಯವಸ್ಥೆ ಮಾಡಿ ಶ್ರೀಮಠದ ಮೇಲೆ ಪ್ರೀತಿ ತೋರಿಸಿರುವದು ಶ್ಲಾಘನೀಯವಾಗಿದೆ ಸಿದ್ದಲಿಂಗ ಶ್ರೀಗಳ ಜನ್ಮದಿನದ ಸಂದರ್ಬದಲ್ಲಿ ಈ ಭಾಗದಲ್ಲಿ ಉತ್ತಮ ಮಳೆಯಾಗುವದರೊಂದಿಗೆ ಎಲ್ಲ ರೈತ ವರ್ಗಕ್ಕೆ ಸಂತಸವನ್ನು ಮೂಡಿಸಲಿ ಎಂದು ಹಾರೈಸಿದರು.
ಈ ಸಮಯದಲ್ಲಿ ನೂರಾರು ಯುವ ಭಕ್ತವೃಂದದವರು ಪಾಲ್ಗೊಂಡಿದ್ದರು.