ಸಿದ್ದರಾಮ ಆಧ್ಯಾತ್ಮಿಕ ಬದುಕಿನ ಮಹಾಸಂತ

ದೇವದುರ್ಗ.ಜ.೧೬- ಶಿವಯೋಗಿ ಸಿದ್ದರಾಮೇಶ್ವರರು ಆಧ್ಯಾತ್ಮಿಕ ಬದುಕಿನ ಮಹಾನ್ ಸಂತರಾಗಿದ್ದು ತಮ್ಮ ವಚನಗಳ ಮೂಲಕ ಸಮಾಜದ ಕಲ್ಯಾಣಕ್ಕಾಗಿ ಸತ್ಸಂಗ ಸಂದೇಶ ನೀಡಿದ್ದಾರೆ ಎಂದು ಭೋವಿ ಸಮುದಾಯದ ತಾಲೂಕು ಅಧ್ಯಕ್ಷ ನಾಗರಾಜ ಭೋವಿ ಹೇಳಿದರು.
ಪಟ್ಟಣದ ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕಾಯಕಯೋಗಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಸಿದ್ದರಾಮೇಶ್ವರ ಶರಣರ ಆದರ್ಶಗಳು ನಮ್ಮ ಸಮಾಜಕ್ಕೆ ದಾರಿ ದೀಪವಾಗಿದ್ದು ಅವುಗಳನ್ನು ಅನುಸರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಕಾಯಕಯೋಗಿ ಸಿದ್ದರಾಮೇಶ್ವರರು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಕೆರೆಗಳ ನಿರ್ಮಾಣ ಮಾಡಿ ಸಕಲ ಜೀವಿಗಳ ಬಾಯಾರಿಕೆ ನೀಗಿಸಿದ್ದಾರೆ. ಅನೇಕ ಗುಡಿ ಗುಂಡಾರಗಳು ನಿರ್ಮಾಣ ಮಾಡುವ ಮೂಲಕ ಜನರಲ್ಲಿ ಭಕ್ತಿ ಭಾವನೆ ಮೂಡಿಸಿದ್ದಾರೆ. ಲೋಕ ಕಲ್ಯಾಣ ಕಾರ್ಯಗಳನ್ನು ಮಾಡಿ ಜನಸಾಮಾನ್ಯ ಹೃದಯದಲ್ಲಿ ನೆಲೆಸಿದ್ದಾರೆ. ಶ್ರೀಶೈಲದಿಂದ ಬಂದು ಸೊನ್ನಾಲಿಯಲ್ಲಿ ಈಗಿನ ಸೋಲಾಪುರದಲ್ಲಿ ಅನೇಕ ಜನಪರ ಹಿತ ಕಾರ್ಯಗಳು ಮಾಡಿದ್ದಾರೆ ಎಂದರು.
ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಗ್ರೇಡ್-೨ ತಹಸೀಲ್ದಾರ್ ಗೋವಿಂದ ನಾಯಕ, ಕಂದಾಯ ನಿರೀಕ್ಷಕ ಭೀಮನಗೌಡ ಪಾಟೀಲ್, ಶಿಕ್ಷಕರಾದ ಮಾರೆಪ್ಪ, ಎಂ.ಕುಪಯ್ಯ ಆಲ್ಕೋಡ್, ಹನುಮಂತ ಮುಷ್ಟೂರು, ಭೀಮಣ್ಣ ಕಲ್ಮನಿ, ಸಂತೋಷ್ ಜಿನ್ನಾಪುರ, ಶರಣಯ್ಯ ಸ್ವಾಮಿ, ರಾಕೇಶ್ ನಾಯಕ, ಪ್ರವೀಣ್ ಕುಮಾರ, ಗಣೇಶ್, ಕೃಷ್ಣ, ಸರೋಜಮ್ಮ, ಪಾರ್ವತಿ ದಂಡಪ್ಪ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್ ಇತರರಿದ್ದರು.