ಸಿದ್ದರಾಮೋತ್ಸವಕ್ಕೆ
300 ಬಸ್, 500 ಟ್ರಾಕ್ಸ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.01: ನಾಡಿದ್ದು ದಾವಣಗೆರೆಯಲ್ಲಿ ನಡೆಯುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಹುಟ್ಟು ಹಬ್ಬ ಸಿದ್ದರಾಮೋತ್ಸವಕ್ಕೆ ಜಿಲ್ಲೆಯಿಂದ ಅವರ ಅಭಿಮಾನಿಗಳನ್ನು ಕರೆದುಕೊಂಡು ಹೋಗಲು 300ಕ್ಕೂ ಹೆಚ್ಚು ಬಸ್ ಗಳು 500ಕ್ಕೂ ಹೆಚ್ಚು ಟ್ರಾಕ್ಸ್ ಮೊದಲಾದ ವಾಹನಗಳ ವ್ಯವಸ್ಥೆ ಮಾಡಿದೆ ಎಂದು ಕಾಂಗ್ರೆಸ್ ಪಕ್ಷದ ನಗರ ಜಿಲ್ಲಾ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫಿಕ್ ಹೇಳಿದ್ದಾರೆ.
ಸಂಜೆವಾಣಿಯೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿ ದೆಶೆಯಿಂದಲೇ ಹೋರಾಟಗಾರರಾಗಿ, ವಕೀಲರಾಗಿ, ಸಾಮಾಜಿಕ ಚಳುವಳಿಯಲ್ಲಿ ತೊಡಗಿಸಿಕೊಂಡು, ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಗಳಾಗಿ, ಪ್ರತಿಪಕ್ಷದ ನಾಯಕರಾಗಿ, ಜನಸೇವೆ ಮಾಡಿ ತಳ ಸಮುದಾಯದ, ಹಿಂದುಳಿದ , ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಅನ್ನಭಾಗ್ಯ, ಇಂದಿರಾ ಕ್ಯಾಂಟಿನ್ ಮೊದಲಾದ ಯೋಜನೆಗಳನ್ನು ಜಾರಿಗೆ ತಂದು ಜನ ಸಮುದಾಯದ ಪ್ರೀತಿಗೆ ಪಾತ್ರರಾಗಿ 75 ವಸಂತಗಳನ್ನು ಕಂಡ ಸಿದ್ದರಾಮಯ್ಯ ಅವರಿಗೆ ನಾಡಿದ್ದು ಆ.3ರಂದು ದಾವಣಗೆರೆಯಲ್ಲಿ ಜನ್ಮದಿನದ ಅಮೃತ ಮಹೋತ್ಸವ ಹಮ್ಮಿಕೊಂಡಿದೆ.
ಈ ಬೃಹತ್ ಸಮಾರಂಭಕ್ಕೆ ತೆರಳಲು ಬಳ್ಳಾರಿ ಜಿಲ್ಲೆಯಿಂದ ಪಕ್ಷದ ಶಾಸಕರು, ಸಂಸದರು, ಮಾಜಿ ಶಾಸಕರು, ಮುಖಂಡರು ಟಿಕೆಟ್ ಆಕಾಂಕ್ಷಿಗಳು ಸೇರಿ ಸಂಡೂರು, ಬಳ್ಳಾರಿ, ಕಂಪ್ಲಿ, ಸಿರುಗುಪ್ಪ, ಮೋಕಾ, ಕುರುಗೋಡಿನಿಂದ ಬಸ್ ಗಳು ಟ್ರಾಕ್ಸ್ ಗಳು ಹೊರಡಲಿವೆ. ಬಳ್ಳಾರಿ ಮೂಲಕ ತೆರಳುವ ಜನತೆಗೆ ನಗರದಲ್ಲಿನ ಕಾಂಗ್ರೆಸ್ ಕಛೇರಿ ಬಳಿ ಉಪಹಾರದ ಪೊಟ್ಟಣ, ನೀರಿನ ಪಾಕೇಟ್ ಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ಸಿದ್ದರಾಮೋತ್ಸವವು ಒಂದು ರೀತಿ ಜನೋತ್ಸವದ ರೀತಿಯಲ್ಲಿ ಪಕ್ಷದ ಮತ್ತು ಅವರ ಅಭಿಮಾನಿಗಳು ತೆರಳಿ ಸಂಭ್ರಮಿಸಲಿದೆಂದರು.

ಮುಂಬರುವ ಚುನಾವಣೆಗೆ ಒಂದು ರೀತಿ ಸಿದ್ಧತೆ ಎಂಬಂತೆ ಸಿದ್ದರಾಮಯ್ಯ ಅವರ ಜನ್ಮದಿನವನ್ನು ಅವರ ಅಭಿಮಾನಿಗಳು ಆಚರಿಸುತ್ತಿದ್ದು ಅದಕ್ಕೆ ಪಕ್ಷ ಸಾಥ್ ನೀಡಿದೆ. ಇದೊಂದು ಸಂಭ್ರಮಾಚರಣೆ.
ಜಿ.ಎಸ್.ಮಹಮ್ಮದ್ ರಫೀಕ್
ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಬಳ್ಳಾರಿ.

ಸಿದ್ದರಾಮಯ್ಯ ಅವರ ಜನ್ಮದಿನದ ಅಮೃತ ಮಹೋತ್ಸವಕ್ಕೆ ಬಳ್ಳಾರಿಯಿಂದ ಅವರ ಅಭಿಮಾನಿಗಳನ್ನು ಕರೆದುಕೊಂಡು ಹೋಗಲು 250 ವಾಹನ, ಟಿಫಿನ್ ಮತ್ತು ಊಟದ ವ್ಯವಸ್ಥೆ ಮಾಡಿದೆ. ಅಲ್ಲದೆ ದಾವಣಗೆರೆ ಸಮಾರಂಭದಲ್ಲಿ ಹಂಚಲು 30 ಸಾವಿರ ನೀರಿನ ಬಾಟಲ್ ವ್ಯವಸ್ಥೆ ಮಾಡಿದೆ.
ನಾರಾ ಭರತ್ ರೆಡ್ಡಿ, ಜಿ.ಪಂ. ಮಾಜಿ ಸದಸ್ಯರು, ಬಳ್ಳಾರಿ.

Attachments area