ಸಿದ್ದರಾಮೋತ್ಸವಕ್ಕೆ ಪೂರ್ವ ಭಾವಿ ಸಭೆ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು, ಜು.28 ಪಟ್ಟಣದ ಎಸ್ ಎಲ್ ವಿ ವಸತಿ ಸಭಾಂಗಣದಲ್ಲಿ ಇಂದು ಮಾಜಿ ಶಾಸಕರಾದ ಎಸ್. ತಿಪ್ಪೇಸ್ವಾಮಿ ನೇತೃತ್ವದಲ್ಲಿ ಸಿದ್ದರಾಮೋತ್ಸವಕ್ಕೆ ಪೂರ್ವ ಬಾವಿ ಸಭೆ ನಡೆಯಿತು.
 ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಮಾಜಿ ಶಾಸಕರಾದ ಎಸ್. ತಿಪ್ಪೇಸ್ವಾಮಿ, ಮುಂದಿನ ತಿಂಗಳ 3ನೇ ತಾರೀಖಿನಂದು ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮೋತ್ಸವಕ್ಕೆ ನಮ್ಮ ಮೊಳಕಾಲ್ಮೂರು ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತಿಯ ಪ್ರತಿ ಗ್ರಾಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಹೋಗಬೇಕೆಂದು ತಿಳಿಸಿದರು.
 ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Attachments area