ಸಿದ್ದರಾಮೊತ್ಸವದಲ್ಲಿ ಸಾವಿರಾರು ಕಾರ್ಮಿಕರು ಜೊತೆ ಹೆಜ್ಜೆ ಹಾಕಿದ : ಅಯ್ಯಪ್ಪಗೌಡ ಗಬ್ಬೂರು

ಗಬ್ಬೂರು.ಆ.೦೪- ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ೭೫ ಅಮೃತ ಮಹೋತ್ಸವ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ರಾಜ್ಯದ ಪ್ರತಿ ಹಳ್ಳಿಯಿಂದ ನೂರಾರು ಕಾರ್ಮಿಕರು ಬಂದು ಕಾರ್ಯಕ್ರಮ ಯಶಸ್ವಿ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಗಳು ಹಾಗೂ ಯಾದಗಿರಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಹಾಗೂ ಜಿಲ್ಲಾ ಉಪಾಧ್ಯಕ್ಷರು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ ರಾಯಚೂರು ಜಿಲ್ಲೆಯ ಅಯ್ಯಪ್ಪಗೌಡ ಗಬ್ಬೂರು ರಾಜ್ಯದ ಕಾರ್ಮಿಕರಿಗೆ ಅಭಿನಂದನೆಗಳು ತಿಳಿಸಿದ್ದಾರೆ.
ಸಿದ್ದರಾಮಯ್ಯ ರವರ ಅಮೃತ ಸಿದ್ದರಾಮೊತ್ಸವದ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಸುಮಾರು ೧೦ ಲಕ್ಷಕ್ಕೂ ಅಧಿಕ ಜನಸಂಖ್ಯೆಯ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಕಾರ್ಯಕರ್ತರು ಭಾಗವಹಿಸಿದ್ದರು ಎಂದು ತಿಳಿಸಿದರು.
ದಾವಣಗೆರೆ ಸಿದ್ದರಾಮೊತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾಂಗ್ರೆಸ್ ಪಕ್ಷದ ಹಿರಿಯ ಕಿರಿಯ ಮುಖಂಡರು ಸಿದ್ದರಾಮಯ್ಯ ಅಭಿಮಾನಿಗಳು ಸಮಸ್ತ ಸಹೋದರ ಸಹೋದರಿಯರು ನೋಡಿ ಇತಿಹಾಸದಲ್ಲಿ ಪುಸ್ತಕದಲ್ಲಿ ಬರೆದಿಡುವಂತಹ ಹುಟ್ಟು ಹಬ್ಬ ಇಂದಿಗೂ ದೇಶದಲ್ಲಿ ಯಾವ ನಾಯಕರು ಹುಟ್ಟು ಹಬ್ಬ ನೋಡಿರುವುದಿಲ್ಲ.ಈ ಹುಟ್ಟು ಹಬ್ಬ ಐತಿಹಾಸಿಕ ದಾಖಲೆಯಾಗಿದೆ ಎಂದು ಅಯ್ಯಪ್ಪಗೌಡ ಗಬ್ಬೂರು ಸಂತಸ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ಸಾವಿರಾರು ಕಾರ್ಮಿಕ ವಿಭಾಗದ ರಾಜ್ಯ ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಲಕ್ಷಾಂತರ ಸಿದ್ದರಾಮಯ್ಯ ಅಭಿಮಾನಿಗಳು ಉಪಸ್ಥಿತರಿದ್ದರು.