ಸಿದ್ದರಾಮೇಶ್ವರ ಜೀವನ ಮೌಲ್ಯಗಳು ಇಂದಿನ ಪೀಳಿಗೆಗೆ ಆದರ್ಶವಾಗಿದೆ

ದಾವಣಗೆರೆ.ಜ.26; ಶಿವಯೋಗಿ ಸಿದ್ದರಾಮರು ಬಸವಣ್ಣ, ಅಲ್ಲಮಪ್ರಭುಗಳ ಕಾಲದ ಮಹಾನ್ ಪವಾಡ ಪುರುಷರು 12ನೇ ಶತಮಾನದಲ್ಲೆ ಕಾಯಕದ ಮೂಲಕ ಆಧ್ಯಾತ್ಮ ಕಂಡುಕೊAಡವರು. ಇವರ ಆದರ್ಶಗಳನ್ನು ಇಂದಿನ ಪೀಳಿಗೆಗೆ ಆದರ್ಶವಾಗ ಬೇಕು ಎಂದು ಜಿಲ್ಲಾಧಿಕಾರಿ ಡಾ. ಶಿವಾನಂದ ಕಪಾಶಿ ತಿಳಿಸಿದರು. ಜಿಲ್ಲಾಡಳಿತ ಭವನ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಭೋವಿ ಸಮಾಜ ಇವರ ಸಂಯುಕ್ತಶ್ರಯದಲ್ಲಿ, ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ನಡೆದ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಲೌಕಿಕತೆಯಿಂದ ಅಲೌಕಿಕತೆಯ ಕಡೆಗೆ, ಮುಗ್ದತೆಯಿಂದ ಲೋಕಕಲ್ಯಾಣಕ್ಕಾಗಿ ಜೀವತ್ತೆತ್ತವರು ಸಿದ್ದರಾಮರು ಎಂದು ಹೇಳಿದರು ಫ. ಗು ಹಳಕಟ್ಟಿಯವರು ಸಿದ್ದರಾಮೇಶ್ವರ ವಚನಗಳನ್ನು ಸೇರಿ, ಶರಣರ ವಚನಗಳನ್ನು ಸಂಗ್ರಹಿಸಿದ್ದಾರೆ. ಇವರನ್ನು ಸೊನ್ನಲ್ಲಿಗೆ ಸಿದ್ದ ರಾಮೇಶ್ವರರು ಎಂತಲೂ ಕೂಡ ಕರೆಯುತ್ತಾರೆ. ಆ ಶತಮಾನದಲ್ಲೆ ಸಾವಿರಾರು ಕೆರೆಕಟ್ಟೆಗಳನ್ನು ನಿರ್ಮಿಸಿದ್ದಾರೆ. ಅವರ ವಚನ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಧಿಕಾರಿ ಡಾ. ಎ ಚನ್ನಪ್ಪ, ಮಹಾನಗರ ಪಾಲಿಕೆಯ ಮಹಾಪೌರರು ಜಯಮ್ಮ ಆರ್ ಗೋಪಿನಾಥ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿಎನ್ ಲೋಕೇಶ್, ಜಿಲ್ಲಾ ಪೊಲೀಸ್ ವಸಿಷ್ಠಾಧಿಕಾರಿ ಸಿ ಬಿ ರಿಷ್ಯಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಮತ್ತು ಭೋವಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.