ಸಿದ್ದರಾಮೇಶ್ವರ ಜಯಂತಿ ಆಚರಣೆ

ವಿಜಯಪುರ, ಜ.16:ಶರಣಪಡೆ ಮತ್ತು ಲಿಂಗಾಯತ ಜಾಗರಣ ವೇದಿಕೆ ವತಿಯಿಂದ ಸಿದ್ದೇಶ್ವರ ಜಾತ್ರೆಯಲ್ಲಿ ಬಿ.ಎಲ್.ಡಿ.ಇ ವುಮೆನ್ಸ್ ಕಾಲೇಜ್ ಎದುರಿಗೆ ಸಿದ್ಧರಾಮೇಶ್ವರ ಜಯಂತಿ ಮತ್ತು ಲಿಂಗಾಯತ ಧರ್ಮ ಸಂಸ್ಥಾಪನಾ

ದಿನವನ್ನಾಗಿ ಆಚರuÀ ಮಾಡಲಾಯಿತು.

ಇದರ ಅಂಗವಾಗಿ ಜಾತ್ರೆಗೆ ಬಂದಂತ ಶರಣರಿಗೆ ಕೋಡ ಬೇಳೆ ಮತ್ತು ಚಕ್ಕಲಿ ಪ್ರಸಾದ ರೂಪದಲ್ಲಿ ವಿತರಿಸಲಾಯಿತು.

ಮೂಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ ಜೆ. ಎಸ್. ಪಾಟೀಲ ಉದ್ಘಾಟಿಸಿ ಮಾತನಾಡಿ, ಲಿಂಗಾಯತರು ಧರ್ಮವನ್ನು ಮರೆತ್ತಿದ್ದಾರೆ ಎಂದು ವಿಷಾದಿಸಿದರು.

ಅಪ್ಪಾಸಾಹೆಬ ಯರನಾಳ ಮಾತನಾಡಿ, ಲಿಂಗಾಯತರು ವೈದಿಕರಾಗಲು ಹಂಬಲಿಸುತ್ತಿದ್ದಾರೆ. ಇದು ಶೂದ್ರರನ್ನು ಲಿಂಗಾಯತರನ್ನು ಮಾಡಿದ ಬಸವಣ್ಣನವರಿಗೆ ಅವಮಾನ ಮಾಡಿದಂತಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಮಿಲಿಂದ ಚಂಚಲಕರ, ಪ್ರಭುಗೌಡ ಪಾಟೀಲ ಮಾತನಾಡಿದರು. ಶರಣ ಪಡೆ ಲಿಂಗಾಯತ ಜಾಗರಣ ವೇದಿಕೆ ಅಧ್ಯಕ್ಷ ಕೆ.ಆರ್. ಕಡೇಚೂರ ಮತ್ತಿತರರು ಇದ್ದರು.