ಸಿದ್ದರಾಮೇಶ್ವರ ಜಯಂತಿ ಆಚರಣೆ

ಸಿಂದಗಿ:ಜ.14:ಕೆರೆ ಬಾವಿಗಳನ್ನು ನಿರ್ಮಾಣ ಮಾಡುವ ಮೂಲಕ ಪ್ರಾಣಿ, ಪಕ್ಷಿ, ಮಾನವರಿಗೆ ನೀರಿನ ಮಹತ್ವ ಸಾರಿದ ಪವಾಡÀ ಪುರುಷ ಸಿದ್ದರಾಮೇಶ್ವರರು. ಕಾಯಕದ ಕಲ್ಪನೆಯನ್ನು ಜಗತ್ತಿಗೆ ಸಾರಿ ಸ್ವಾವಲಂಬನೆಯ ನೀತಿಯನ್ನು ಪ್ರಸಾರ ಮಾಡಿದವರಲ್ಲಿ ಅಗ್ರಗಣ್ಯರು ಎಂದು ತಾಲೂಕಾ ಭೋವಿ ಸಮಾಜದ ಅಧ್ಯಕ್ಷ ಪಂಡಿತ ಯಂಪೂರೆ ಹೇಳಿದರು.
ಅವರು ಪಟ್ಟಣದ ಭೋವಿ ಕಾಲೋನಿಯಲ್ಲಿ (ಓಐಸಿಸಿ) ತಾಲೂಕಾ ಭೋವಿ ವಡ್ಡರ ಸಮಾಜದವತಿಯಿಂದ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ 849 ನೆಯ ಜಯತ್ಯೋಂತ್ಸವದಲ್ಲಿ ಮಾತನಾಡಿ, 12 ನೇ ಶತಮಾನದಲ್ಲಿ ಕಾಯಕ ಹಾಗೂ ವಚನ ರಚನೆಯ ಮೂಲಕ ಸಾಮಾಜಿಕ ಕ್ರಾಂತಿ ಮಾಡಿ ಅನಿಷ್ಠ ಪದ್ದತಿಗಳನ್ನು ತೊಡೆದು ಹಾಕಿ ಸಾಮಾಜಿಕ ಚಳುವಳಿಯನ್ನು ಮಾಡಿ ಹೆಣ್ಣು ಮಕ್ಕಳಿಗೆ ಸಮಾನತೆ ಅವಕಾಶ ಕಲ್ಪಿಸಿಕೊಟ್ಟವರು ಶಿವಯೋಗಿ ಸಿದ್ದರಾಮರು ಅನುಭವ ಮಂಟಪಕ್ಕೆ ಮೂರನೇಯ ಅಧ್ಯಕ್ಷರಾಗಿ ಶರಣ ತತ್ವÀವನ್ನು ಮೈಗೂಡಿಸಿಕೊಂಡು ಗುರು ಚನ್ನಬಸವಣ್ಣನವರಿಂದ ಲಿಂಗ ದಿಕ್ಷೇ ಪಡೆದುಕೊಂಡು ಕಾಯಕದೊಂದಿಗೆ ವಚನ ಕ್ರಾಂತಿ ಮಾಡಿ ಸುಮಾರು 68 ಸಾವಿರ ವಚನಗಳನ್ನು ರಚಿಸಿ 770 ಅಮರಗಣಂಗಳಲ್ಲಿ ಜೀವಂತ ಸಮಾಧಿಯಾಗಿದ್ದವರು ಸಿದ್ದರಾಮರ ಅವರ ತತ್ವ ಆದರ್ಶಗಳು ಮುಂದಿನ ಪೀಳಿಗೆಗೆ ಪೂರಕವಾಗಬೇಕು. ಎಂದ ಅವರು ಕಾಯಕದದಿಂದ ಬಂದ ಹಣದಿಂದ ಸಿದ್ದರಾಮನ ಜನ್ಮ ಭೂಮಿ ಸೊನ್ನಲಗಿಯಲ್ಲಿ ಪ್ರತಿನಿತ್ಯ ಜ್ಞಾನ ದಾಸೋಹ, ಅನ್ನ ದಾಸೋಹಗಳೆಂಬ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿ ಬರಗಾಲದ ಸಂದರ್ಭದಲ್ಲಿ ರೈತರ, ಬಡವರ ಕಂದಾಯದ ಹಣವನ್ನು ಪಾವತಿಸುವ ಕಾರ್ಯ ಮಾಡುತ್ತಿದ್ದರು ಅಂತಹ ಮಹಾನ ಶರಣರನ್ನು ನೆನೆಯಲು ಅವರ ಜಯಂತಿ ನಿಮಿತ್ಯ ಅನೇಕ ಗ್ರಾಮಗಳಲ್ಲಿ ಕೆಟ್ಟುನಿಂತ ಬೋರವೆಲ್‍ಗಳನ್ನು ದುರಸ್ಥಿಗೊಳಿಸಿ ನೀರು ಕೊಡುವ ಕಾರ್ಯಕ್ಕೆ ಮುಂದಾದರೆ ಈ ಜಯಂತಿಗೆ ಅರ್ಥ ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ದೀಲಿಪ ಆಲಕುಂಟೆ, ತಿರುಪತಿ ಬಂಡಿವಡ್ಡರ, ಸಾಗರ ವಡ್ಡರ, ಭೀಮಾಶಂಕರ ಯಂಪೂರೆ, ಪರಸುರಾಮ ಯಂಪೂರೆ, ಬಸವರಾಜ ಬಂಡಿವಡ್ಡರ, ಯಲ್ಲಪ್ಪ ಗೋಳಸಾರ, ದಯಾನಂದ ಗೊಳಸಾರ, ಮುತ್ತು ಆಲಕುಂಟೆ, ಸಚೀನ ಮಂಜಾಳಕರ, ಅನೀಲ ಯಂಪೂರೆ, ಪರಸುರಾಮ ಬಲಪಟ್ಟಿ, ರವಿ ಬನಪಟ್ಟಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.