ಸಿದ್ದರಾಮೇಶ್ವರರ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ: ರೇವೂರ್

ಕಲಬುರಗಿ,ಜ.15:12ನೇ ಶತಮಾನದ ಶರಣರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ತುಂಬಿರುವ ಅಜ್ಞಾನ, ಮೂಡನಂಬಿಕೆ ಹೋಗಲಾಡಿಸಿ ಸಮಾನತೆಗಾಗಿ ಶ್ರಮಿಸಿದ ಮಹಾಶರಣರಲ್ಲಿ ಸೊಲ್ಲಾಪುರದ ಕಾಯಕಯೋಗಿ ಶ್ರೀಸಿದ್ದರಾಮೇಶ್ವರರು ಒಬ್ಬರಾಗಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ್ ಅಭಿಪ್ರಾಯ ಪಟ್ಟರು.

ನಗರದ ಎಸ್.ಎಂ ಪಂಡಿತ ರಂಗ ಮಂದಿರದಲ್ಲಿ ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕøತಿ ಇಲಾಖೆ,ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯೋತ್ಸವ ಸಮಿತಿಯ ಆಶ್ರಯದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಆಚರಣೆ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.

ಸಿದ್ದರಾಮೇಶ್ವರರು ಕಾಯಕಯೋಗಿ ಸಾಕ್ಷಾತ ಶಿವನನ್ನೆ ಧರಗೆ ಇಳಿಸಿದ ಮಹಾತ್ಮರಾಗಿದ್ದಾರೆ. ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು, ನಗರದಲ್ಲಿ ಸಿದ್ದರಾಮೇಶ್ವರ ಭವನ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಭೋವಿ ಸಮಾಜದ ಏಳ್ಗೆಗಾಗಿ ನಾವು ಬದ್ದರಾಗಿದ್ದೇವೆ ಸಮಾಜದ ಮುಖ್ಯವಾಹಿನಿಗೆ ತರಲು ಸರಕಾರದ ಸೌಲಭ್ಯಗಳನ್ನು ತಲುಪಿಸಲು ಸಾವು ಸದಾ ಸಿದ್ದರಾಗಿದ್ದೇವೆ ಎಂದು ಹೇಳಿದರು.

ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕುಸ್ತಿ ಮಾತನಾಡಿ, ಸಮಾಜವು ತೀರಾ ಹಿಂದೆ ಉಳಿದಿದ್ದು , ಸರಕಾರ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ನಮಗೆ ದೊರಕುವಂತೆ ಮಾಡಬೇಕು ನಮ್ಮ ಸಮಾಜಕ್ಕೆ ಸಭೆ ನಡೆಸಲು ಯಾವುದೇ ಭವನಗಳು ಇಲ್ಲ ಶೀಘ್ರವಾಗಿ ಭವನ ನಿರ್ಮಾಣಕ್ಕೆ ಮುಂದಾಗಬೇಕು ಜಿ.ಪಂ ಚುನಾವಣೆ ಸಂದರ್ಭದಲ್ಲಿ ನಮ್ಮ ಸಮಾಜದ ಜನರಿಗೆ ಪ್ರಾತಿನಿದ್ಯ ನೀಡಬೇಕು ಎಂದು ಮನವಿ ಮಾಡಿದರು.

ಸಾನಿಧ್ಯವಹಿಸಿ ಮಾತನಾಡಿದ ಸಿದ್ದಬಸವ ಕಬೀರ ಮಹಾಸ್ವಾಮಿಗಳು, ಶಿವಯೋಗಿ ಸಿದ್ದರಾಮೇಶ್ವರರು ಕೇವಲ ಸೊನ್ನಲಿಗೆ ಸಿಮೀತರಾಗಿದ್ದವರನ್ನು ಇಡಿ ನಾಡಿಗೆ ಪರಿಚಯಿಸಿ ಸರಕಾರವೇ ಅವರ ಜಯಂತಿಯನ್ನು ಎಲ್ಲ ಕಡೆ ಆಚರಿಸುವಂತೆ ಮಾಡಿರುವ ಕೀರ್ತಿ ಭೋವಿ ಸಮಾಜಕ್ಕೆ ಸಲ್ಲುತ್ತದೆ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಶರಣ ಸಿದ್ದರಾಮೇಶ್ವರ ವೈಚಾರಿಕ ಚಿಂತನೆಗಳ ಕುರಿತು ಡಾ.ಗಣೇಶ ಜಿ.ಪವಾರ ಉಪನ್ಯಾಸ ನೀಡಿದರು. ಈ ಸಮಯದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಅವಿನಾಶ ಕುಲಕರ್ಣಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಹೊನ್ನಮ್ಮ ಬಾಬು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪಾ ಸಾಗನೂರು ಸರಕಾರಿ ಸೌಕರ ಸಂಘದ ಜಿಲ್ಲಾ ಅಧ್ಯಕ್ಷ ರಾಜು ಲೇಂಗಟಿ ಕಲಬುರಗಿ ಗ್ರೇಡ-1 ತಹಸೀಲ್ದಾರ್ ಮಾಧುರಾಜ ಕೂಡಲಗಿ ವೇದಿಕೆಯಲ್ಲಿ ಇದ್ದರು.