ಸಿದ್ದರಾಮಯ್ಯ ಹೇಳಿಕೆಗೆ ‌ಬಾಲಚಂದ್ರ ತೀವ್ರ ಆಕ್ಷೇಪ

ಬೆಂಗಳೂರು, ಮಾ. 23-ಯುವತಿಯ ವಿಡಿಯೋ ಹೇಳಿಕೆ ಆಧರಿಸಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ವಿಧಾನಸಭೆಯಲ್ಲಿ
ಕಾಂಗ್ರೆಸ್ ಧರಣಿ ಮಾಡುತ್ತಿರುವುದಕ್ಕೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತೀವ್ತ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಿನ್ನೆ ಸದನದಲ್ಲಿ ಮಾತನಾಡಬೇಕು ಅಂತ ನಿರ್ಧರಿಸಿದ್ದೆ. ಆದರೆ ಕೆಲವರು ಮಾತನಾಡುವುದು ಬೇಡ ಎಂದು ಸಲಹೆ ನೀಡಿದರು. ಯುವತಿಯ 34 ಸೆಕೆಂಡ್ ವಿಡಿಯೋ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ್ದಾರೆ. ಆದರೆ ಯುವತಿ ಸ್ವಂತ ಇಚ್ಛೆಯಿಂದ ಮಾತನಾಡಿದ್ದಾಳಾ ಅಥವಾ ಒತ್ತಾಯಪೂರ್ವಕವಾಗಿ ಮಾಡಿಸಿದ್ದಾರಾ ಗೊತ್ತಿಲ್ಲ. ಆ ವಿಡಿಯೋ ಆಧರಿಸಿ ರೇಪ್ ಕೇಸ್ ಹಾಕಲು ಒತ್ತಾಯ ಮಾಡುತ್ತಿದ್ದಾರೆ. ಈ ಬಗ್ಗೆ ಎಸ್ಐಟಿ ತನಿಖೆ ಮಾಡುತ್ತಿದೆ. ಸಿಡಿ ರಿಲೀಸ್ ಆದ ನಂತರ ಗೃಹ ಸಚಿವರು ಯುವತಿಗೆ ರಕ್ಷಣೆಗೆ ನೀಡಲು ಸಿದ್ಧರಿದ್ದಾರೆ. ಯುವತಿಯ ಪತ್ತೆಗೂ ಪೊಲೀಸ್ ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಯುವತಿ ಎಲ್ಲಿದ್ದಾಳೆ ಎಂದು ಯಾರಿಗೂ ಗೊತ್ತಿಲ್ಲ ಎಂದು ಹೇಳಿದರು.
ಯುವತಿ ನೇರವಾಗಿ ಬಂದು ಹೇಳಿಕೆ ನೀಡಬಹುದಿತ್ತು. ತನಗಾದ ಅನ್ಯಾಯದ ಬಗ್ಗೆ ತಿಳಿಸಬಹುದಿತ್ತು. ಆದರೆ ಕಾಣದ ಸ್ಥಳದಲ್ಲಿ ಕುಳಿತು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಯಾರೋ ಬಲವಂತದಿಂದ ವಿಡಿಯೋ ಮಾಡಿರಬಹುದಲ್ಲ ಎಂದು ಅಚರು ಶಂಕೆ ವ್ಯಕ್ತಪಡಿಸಿದರು‌.