ಸಿದ್ದರಾಮಯ್ಯ ಸ್ವರ್ಧಿಸಿದರೆ ಹೃದಯ ಪೂರ್ವಕವಾಗಿ ಕೆಲಸ ಮಾಡುತ್ತೇವೆ- ಕೆ.ಹೆಚ್.ಮುನಿಯಪ್ಪ

ಕೋಲಾರ,ಜ,೧೦-ಕೋಲಾರ ವಿಧಾನಸಭೆ ಚುನಾವಣೆಯಲ್ಲಿ ನೀವು ಸ್ವರ್ಧಿಸಿದರೆ ನಾವೆಲ್ಲಾ ಹೃದಯ ಪೂರ್ವಕವಾಗಿ ಕೆಲಸ ಮಾಡುತ್ತೇವೆಂದು ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಘೋಷಿಸಿದರು
ನಗರದ ಮಿನಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ ಕೋಲಾರಕ್ಕೆ ಕೆ.ಸಿ.ವ್ಯಾಲಿ ಮಂಜೂರಾತಿ,ರಾಜ್ಯದಲ್ಲಿ ಎತ್ತಿನ ಹೊಳೆ, ವೇಮಗಲ್ ಮತ್ತು ನರಸಾಪುರದಲ್ಲಿ ಕೈಗಾರಿಕೆಗಳ ಅಭಿವೃದ್ದಿಯಿಂದ ಒಂದು ಲಕ್ಷ ಮಂದಿಗೆ ಉದ್ಯೋಗ ಲಭಿಸಿದೆ, ಕೈಗಾರಿಕೆಗಳಿಗೆ ವಿದ್ಯುತ್ ನೀರು ಸೌಲಭ್ಯದ ಭರವಸೆ ಮೇರೆಗೆ ಕೈಗಾರಿಕೆಗಳು ಹೆಚ್ಚಾಗಿ ಬರಲು ಸಾಧ್ಯವಾಯಿತು ಇದಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಎಂದು ಶ್ಲಾಘಿಸಿದರು,
ಬಿಜೆಪಿಯಿಂದ ರೈತರಿಗೆ ನಯಾ ಪೈಸೆ ಸಾಲ ಮನ್ನ ಇಲ್ಲ-
ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ದೀಕರಣವನ್ನು ಬಿಜೆಪಿ ಸರ್ಕಾರ ಮಾಡದೆ ಉದ್ದೇಶ ಪೂರ್ವಕವಾಗಿ ನಿಲ್ಲಕ್ಷಿಸಿದೆ. ಕಾಂಗ್ರೇಸ್ ಪಕ್ಷದ ಆಡಳಿತದಲ್ಲಿ ನೀಡಿದಂತ ಎಲ್ಲಾ ಭರವಸೆಗಳು ಈಡೇರಿಸಿದೆ.ಮನಮೋಹನ್ ಸಿಂಗ್ ಆಡಳಿತದಲ್ಲಿ ೭೨ ಸಾವಿರ ಕೋಟಿ ,ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ೩೬೦ ಕೋಟಿ ರೂ ರೈತರ ಸಾಲ ಮಾಡಿದೆ. ಅದರೆ ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ ನಯಾ ಪೈಸೆ ಸಾಲ ಮನ್ನ ಮಾಡಿಲ್ಲ ಎಂದರು,
ಡಿಸಿಸಿ ಬ್ಯಾಂಕ್‌ಗೆ ಬಡ್ಡಿ ರಹಿತ ಸಾಲ ಸೌಲಭ್ಯಗಳಿಂದ ಸ್ವಸಹಾಯ ಮಹಿಳಾ ಸಂಘಗಳು, ರೈತರಿಗೆ ಹೆಚ್ಚಿನ ಅನುವುಂಟಾಗಿದೆ. ರಾಹುಲ್ ಗಾಂಧಿ ಅವರು ದೇಶದ ಐಕ್ಯತೆಗಾಗಿ ರಾಷ್ಟ್ರದಲ್ಲಿ ಈವರೆಗೆ ೩೫೭೦ ಕಿ.ಮಿ. ಜೋಡೋ ಯಾತ್ರೆ ಮಾಡಿರುವುದು ವಿಶ್ವದ ದಾಖಲೆಯಾಗಿದೆ ಎಂದು ತಿಳಿಸಿದರು,
ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಪಕ್ಷದ ಆಡಳಿತ ಸಂಪೂರ್ಣ ಕುಸಿದಿದೆ. ಜನತೆ ಕಾಂಗ್ರೇಸ್ ಪಕ್ಷದ ಸಿದ್ದರಾಮಯ್ಯ ಅವರ ಜನಪರ ಆಡಳಿತವನ್ನು ನೆನಪಿಸಿ ಕೊಳ್ಳುತ್ತಾ ಮುಂದಿನ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಕೈಗೆ ಆಡಳಿತ ಚುಕ್ಕಾಣಿ ನೀಡಲು ಬಹು ಮತದಿಂದ ಆಯ್ಕೆ ಮಾಡಲು ಜನತೆ ಕಾತರಿಸುತ್ತಿದ್ದಾರೆ ಎಂದರು
ಈ ಹಿಂದೆ ದೇವರಾಜ ಅರಸು ಅವರು ಅಧಿಕಾರದಿಂದ ಇಳಿದ ನಂತರವೇ ಜನತೆಗೆ ಅರಸು ಅವರ ಆಡಳಿತದ ಮೌಲ್ಯವು ಅರ್ಥವಾಯಿತು. ಅದೇ ಮಾದರಿಯಲ್ಲಿ ಸಿದ್ದರಾಮಯ್ಯ ಅವರ ಅಭಿವೃದ್ದಿಯ ಸಾಧನೆಗಳ ಬಗ್ಗೆ ಜನತೆ ಈಗಾ ನೆನಪಿಸಿ ಕೊಳ್ಳುವಂತಾಗಿದೆ.ಬಿಜೆಪಿ ಸರ್ಕಾರವು ಜನತೆಯ ದಿಕ್ಕು ತಪ್ಪಿಸಲು ಹಲವಾರು ಗೊಂದಲಗಳನ್ನು ಸೃಷ್ಠಿಸುತ್ತಿದೆ ಎಂದು ದೂರಿದರು,
ಅರಸು ಅವರು ೫ ವರ್ಷಗಳ ಆಡಳಿತ ನಂತರ ಸಿದ್ದರಾಮಯ್ಯ ಅವರು ತಮ್ಮ ಆಡಳಿತವನ್ನು ಪೂರೈಸಿದರು ಪ್ರಸ್ತುತ ರಾಜ್ಯದಲ್ಲಿ ಜನತೆ ಬದಲಾವಣೆ ಬಯಸಿದ್ದಾರೆ. ಭವಿಷ್ಯದಲ್ಲಿ ಕೋಲಾರದ ಕಲ್ಪನೆಯ ಜವಾಬ್ದಾರಿಯನ್ನು ಸಿದ್ದರಾಮಯ್ಯ ಅವರು ವಹಿಸಿ ಕೊಳ್ಳ ಬೇಕಾಗಿದೆ ಎಂದ ಅವರು ಜಿಲ್ಲೆಯಲ್ಲಿ ಸಿದ್ದರಾಮಯ್ಯ ಅವರ ಆಡಳಿತದಲ್ಲಿನ ಅಭಿವೃದ್ದಿಯ ಸಾಧನೆಗಳನ್ನು ಶ್ಲಾಘಿಸಿದರು,
ಕೋಲಾರ ನಗರವು ಮೇಲ್ದರ್ಜೆಗೆ ಏರಿಕೆ ಮಾಡಿ ನಗರಸಭೆ ಹೋಗಿ ಕಾರ್ಪೂರೇಷನ್ ಅಗಬೇಕಾಗಿದೆ. ಕೈಗಾರಿಕೆ ಪ್ರದೇಶಗಳು ಮತ್ತಷ್ಟು ಅಭಿವೃದ್ದಿ ಪಡೆಸ ಬೇಕು, ಅಂಚೆ ಸ್ನಾತಕೋತ್ತರದ ವಿಶ್ವವಿದ್ಯಾಲಯವಾಗ ಬೇಕು, ವೇಮಗಲ್ ಕುರಗಲ್ ಪಟ್ಟಣ ಪಂಚಾಯಿತಿಯಾಗಿ ಮಾರ್ಪಡ ಬೇಕು, ಮೇಕೆದಾಟು ಯೋಜನೆ ಅನುಷ್ಠನಕ್ಕೆ ತರುವಂತಾಗ ಬೇಕು, ಕೆ.ಸಿ.ವ್ಯಾಲಿ ಮೂರನೇ ಹಂತದ ಸಂಸ್ಕರಣೆ ಮಾಡ ಬೇಕು,ಓ.ಬಿ.ಸಿ. ವರ್ಗಗಳಿಗೆ ಮೀಸಲಾತಿ ಹಾಗೂ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸ ಬೇಕಾಗಿದೆ. ಹಸುಗಳ ಮಾದರಿಯಲ್ಲಿ ಕುರಿಗಳ ಸಾಕಾಣಿಕೆಗೂ ಅದ್ಯತೆ ನೀಡ ಬೇಕು, ಡಿಸಿಸಿ ಬ್ಯಾಂಕ್ ಮತ್ತಷ್ಟು ಅಭಿವೃದ್ದಿಗೆ ನೆರವು ನೀಡ ಬೇಕು, ಕೃಷಿ ಮತ್ತು ತೋಟಗಾರಿಗೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸ ಬೇಕು, ಇತರೆ ವಿಷಯಗಳನ್ನು ಪ್ರಸ್ತಾಪಿಸಿದರು,
೧ ಲಕ್ಷ ಅಂತರದಲ್ಲಿ ಗೆಲುವು-
ವಿಧಾನಪರಿಷತ್ ಸದಸ್ಯ ನಸ್ಸೀರ್ ಆಹಮದ್ ಮಾತನಾಡಿ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಿಂದ ಸ್ವರ್ಧಿಸ ಬೇಕೆಂಬುವುದು ಒತ್ತಾಸೆಯಾಗಿದೆ. ಈ ಕ್ಷೇತ್ರವು ಸಿದ್ದರಾಮಯ್ಯ ಅವರಿಂದ ಹೆಚ್ಚಿನ ಅಭಿವೃದ್ದಿ ನಿರೀಕ್ಷೆ ಹೊಂದಿದೆ. ಕೋಲಾರ ಜಿಲ್ಲೆಯು ಕ್ರಾಂತಿ ಹೋರಾಟ,ಚಳುವಳಿಗಳ ತವರು ಅಗಿದೆ. ರೈತರ ಹೋರಾಟ, ದಲಿತರ ಹೋರಾಟ, ಅಹಿಂದ ವರ್ಗಗಳ ಹೋರಾಟದ ಹುಟ್ಟು ಇದೇ ಜಿಲ್ಲೆಯಿಂದ ಅಗಿದೆ ಎಂದರು,